ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಏಳು ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 415ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಸೋಮವಾರ ಸಂಜೆಯಿಂದ ಇಂದು ಮಧ್ಯಾಹ್ನದವರೆಗೆ ಏಳು ಕೊರೊನಾ ಪ್ರಕರಣ ದಾಖಲಾಗಿದೆ. ಹೀಗಾಗಿ ಒಟ್ಟು ರಾಜ್ಯದಲ್ಲಿ 415 ಕೊರೊನಾ ಸೋಂಕಿತರಿದ್ದಾರೆ. ವಿಜಯಪುರದಲ್ಲಿ ಮೂರು ಮಂದಿ, ಕಲಬುರಗಿಯಲ್ಲಿ 3 ಮತ್ತು ಬಂಟ್ವಾಳ ನಿವಾಸಿಯಲ್ಲಿ ಒಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ. ಅದರಲ್ಲೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
Advertisement
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 7 ಹೊಸ #Covid19 ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 415ಕ್ಕೆ ಏರಿದೆ. #ಮನೆಯಲ್ಲೇಇರಿ pic.twitter.com/eyv6V1cust
— B Sriramulu (@sriramulubjp) April 21, 2020
Advertisement
ಸೋಂಕಿತರ ವಿವರ:
1. ರೋಗಿ 409: 67 ವರ್ಷದ ವೃದ್ಧೆ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಿವಾಸಿ. ತೀವ್ರ ಉಸಿರಾಟದ ತೊಂದರೆಯಿಂದ ಕೊರೊನಾ ಕಾಣಿಸಿಕೊಂಡಿದೆ.
2. ರೋಗಿ 410: 18 ವರ್ಷದ ಯುವತಿ, ವಿಜಯಪುರ ನಿವಾಸಿ, ರೋಗಿ 306ರ ಜೊತೆ ಸಂಪರ್ಕ
3. ರೋಗಿ 411: 30 ವರ್ಷದ ಮಹಿಳೆ, ವಿಜಯಪುರ ನಿವಾಸಿ, ರೋಗಿ 306ರ ಜೊತೆ ಸಂಪರ್ಕ
4. ರೋಗಿ 412: 29 ವರ್ಷದ ಯುವಕ, ಕಲಬುರಗಿ ನಿವಾಸಿ, ಅನಾರೋಗ್ಯದಿಂದ ಬಳಲುತ್ತಿದ್ದ.
5. ರೋಗಿ 413: 61 ವರ್ಷದ ವೃದ್ಧ, ಕಲಬುರಗಿ ನಿವಾಸಿ, ಸಂಪರ್ಕ ಪತ್ತೆ ಮಾಡಲಾಗುತ್ತಿದೆ.
6. ರೋಗಿ 414: 80 ವರ್ಷದ ವೃದ್ಧ, ಕಲಬುರಗಿ ನಿವಾಸಿ, ತೀವ್ರ ಉಸಿರಾಟದ ತೊಂದರೆಯಿಂದ ಕೊರೊನಾ ಕಾಣಿಸಿಕೊಂಡಿದೆ.
7. ರೋಗಿ 415: 18 ವರ್ಷದ ಯುವತಿ, ವಿಜಯಪುರ, ರೋಗಿ 306ರ ಜೊತೆ ಸಂಪರ್ಕ