– ಕಂದ್ಲಾವಿ ಏಕಪಕ್ಷೀಯ ನಿರ್ಧಾರಕ್ಕೆ ಅಮಾಯಕರು ಬಲಿ
– ದೇಶದ ಶೇ.30ರಷ್ಟು ಪ್ರಕರಣ ಹೆಚ್ಚಾಗಲು ಜಮಾತ್ ಕಾರಣ
ನವದೆಹಲಿ: ಪೂರ್ವನಿಗದಿಯಾಗಿದ್ದ ನಿಜಾಮುದ್ದೀನ್ ಧಾರ್ಮಿಕ ಕಾರ್ಯಕ್ರಮವನ್ನು ರದ್ದು ಪಡಿಸುವಂತೆ ಹಲವು ಮುಸ್ಲಿಂ ಮುಖಂಡರು ಸೂಚಿಸಿದ್ದರೂ ತಬ್ಲಿಘಿ ಮುಖ್ಯಸ್ಥ ಮೌಲಾನಾ ಮೊಹಮ್ಮದ್ ಸಾದ್ ಕಂದ್ಲಾವಿ ಏಕಪಕ್ಷೀಯ ನಿರ್ಧಾರದಿಂದಾಗಿ ಈಗ ದೇಶವ್ಯಾಪಿ ಕೊರೊನಾ ಹರಡಿದೆ.
ಮೊಹಮ್ಮದ್ ಸಾದ್ ಕಂದ್ಲವಿ ಸಮಾವೇಶ ನಡೆಸಲೇಬೇಕೆಂದು ತೀರ್ಮಾನ ತೆಗೆದುಕೊಂಡ ಪರಿಣಾಮ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿಢೀರ್ ಹೆಚ್ಚಳವಾಗಿದೆ. ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಶೇ.30ರಷ್ಟು ಹೆಚ್ಚಳಕ್ಕೆ ಜಮಾತ್ ಕಾರಣವಾಗಿರುವುದು ಆತಂಕ ಸೃಷ್ಟಿಸಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಮತ್ತು ಅವರ ಸಂಪರ್ಕಕ್ಕೆ ಬಂದ ಸುಮಾರು 22 ಸಾವಿರ ಮಂದಿಯನ್ನು ಈಗಾಗಲೇ ಕ್ವಾರಂಟೈನ್‍ನಲ್ಲಿ ಇಡಲಾಗಿದೆ.
Advertisement
Advertisement
ತಬ್ಲಿಘಿ ಜಮಾತ್ ನಂತೆಯೇ ಶೌರಾ-ಇ-ಜಮಾತ್ ಸಂಘಟನೆ ದೆಹಲಿಯ ತುರ್ಕ್‍ಮನ್ ಗೇಟ್ ಬಳಿಯ ಕೇಂದ್ರ ಕಚೇರಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಪೂರ್ವ ನಿಗದಿಯಾಗಿದ್ದ ಕಾರ್ಯಕ್ರಮವನ್ನು ಸಂಘಟನೆ ರದ್ದುಪಡಿಸಿತ್ತು.
Advertisement
ಈ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ತಬ್ಲಿಘಿ ಜಮಾತ್ ಹಿರಿಯ ಮುಖಂಡ ಮೊಹಮ್ಮದ್ ಆಲಂ, ಮುಖ್ಯಸ್ಥ ಸಾದ್ ಕಂದ್ಲಾವಿಗೆ ಈ ಎಲ್ಲ ವಿಚಾರಗಳು ಗೊತ್ತಿತ್ತು. ಆದರೆ ತನ್ನ ಹಠಮಾರಿ ಧೋರಣೆಯಿಂದಾಗಿ ಮುಗ್ಧ ತಬ್ಲಿಘಿಗಳು ಈಗ ಬಲಿಯಾಗುತ್ತಿದ್ದಾರೆ ಎಂದು ದೂರಿದ್ದಾರೆ.
Advertisement
ಹೆಸರು ಹೇಳಲು ಇಚ್ಚಿಸದ ಮೌಲಾನಾ ಸಾದ್ ಆಪ್ತ ವ್ಯಕ್ತಿಯೊಬ್ಬರು, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಸದಂತೆ ಹಲವು ಮಂದಿ ವಿನಂತಿ ಮಾಡಿದ್ದರು. ಆದರೆ ಈ ಸಲಹೆಯನ್ನು ಮೌಲಾನಾ ಪರಿಗಣಿಸಲಿಲ್ಲ. ಇದರಿಂದಾಗಿ ತನ್ನ ಅನುಯಾಯಿಗಳನ್ನೇ ಅಪಾಯಕ್ಕೆ ತಳ್ಳಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮವನ್ನು ರದ್ದು ಪಡಿಸುವಂತೆ ಹಲವು ಮಂದಿ ಸಲಹೆ ನೀಡಿದ್ದರು. ಆದರೆ ನಾ ಸಾದ್ ಹಠಕ್ಕೆ ಬಿದ್ದು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು ಎಂಬ ವಿಚಾರವನ್ನು ಕಾಂಗ್ರೆಸ್ ನಾಯಕ ಮೀಮ್ ಅಫ್ಜಲ್ ಮತ್ತು ಮತ್ತು ಮತ್ತೊಮ್ಮ ಮುಸ್ಲಿಂ ನಾಯಕ ಜಾಫರ್ ಸರೇಶ್‍ವಾಲಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಬ್ಲಿಘಿ ಜಮಾತ್‍ಗಿಂತ ಮೊದಲು ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 7.4 ದಿನಕ್ಕೆ ದ್ವಿಗುಣವಾಗುತ್ತಿತ್ತು. ಆದರೆ ಜಮಾತ್ ಕಾರ್ಯಕ್ರಮದಿಂದಾಗಿ ಈಗ 4.1 ದಿನಕ್ಕೆ ಕೊರೊನಾ ಪ್ರಕರಣಗಳು ದ್ವಿಗುಣವಾಗುತ್ತಿದೆ ಎಂದು ಕೇಂದ್ರ ಸರ್ಕಾರವೇ ಸ್ಪಷ್ಟಪಡಿಸಿದೆ.
ಅಂಡಮಾನ್ ನಿಕೋಬರ್ ದ್ವೀಪ, ತಮಿಳುನಾಡು, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಕೇರಳ, ದೆಹಲಿ, ಅಸ್ಸಾಂ, ಹಿಮಾಚಲ ಪ್ರದೇಶ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರಾಖಂಡ್, ಉತ್ತರ ಪ್ರದೇಶದಲ್ಲಿ ಈಗ ಹೆಚ್ಚು ಪ್ರಕರಣಗಳು ದಾಖಲಾಗಲು ಜಮಾತ್ ಕಾರ್ಯಕ್ರಮವೇ ಕಾರಣವಾಗಿದೆ.
ಮಾರ್ಚ್ 31 ರಿಂದ ಏಪ್ರಿಲ್ 4ರ ಅವಧಿಯಲ್ಲಿ ಹಲವು ರಾಜ್ಯಗಳಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ತಮಿಳುನಾಡಿನಲ್ಲಿ ಒಟ್ಟು 476 ಪ್ರಕರಣಗಳ ಪೈಕಿ 417 ರೋಗಿಗಳು ತಬ್ಲಿಘಿಗೆ ಹೋಗಿ ಬಂದವರೇ ಆಗಿದ್ದಾರೆ. ತೆಲಂಗಾಣದಲ್ಲಿ 230 ಪ್ರಕರಣಗಳ ಪೈಕಿ 201, ಆಂಧ್ರಪ್ರದೇಶದ 159 ಪ್ರಕರಣಗಳ ಪೈಕಿ 159, ದೆಹಲಿಯ 424 ಪ್ರಕರಣಗಳ ಪೈಕಿ 358, ಉತ್ತರಾಖಂಡದ 20 ಪ್ರಕರಣಗಳ ಪೈಕಿ 15 ಮಂದಿ ತಬ್ಲಿಘಿ ಕಾರ್ಯಕ್ರಮಕ್ಕೆ ತೆರಳಿದ್ದವರೇ ಆಗಿದ್ದಾರೆ.