– ನೆಗೆಟಿವ್ ಬಂದಿದ್ದ ತಬ್ಲಿಘಿಗೆ ಮತ್ತೆ ಪಾಸಿಟಿವ್
ಬೆಂಗಳೂರು: ಇಂದು 10 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 858ಕ್ಕೆ ಏರಿಕೆಯಾಗಿದೆ.
ಬೆಳಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ, ದಾವಣಗೆರೆ 3, ಬೀದರ್ 2, ಬಾಗಲಕೋಟೆ 2, ಕಲಬುರಗಿ 1, ಹಾವೇರಿ 1 ಮತ್ತು ವಿಜಯಪುರದಲ್ಲಿ 1 ಹೊಸ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದೆ.
Advertisement
Advertisement
ಸೋಂಕಿತರ ವಿವರ:
1. ರೋಗಿ-849: ಕಲಬುರಗಿಯ 38 ವರ್ಷದ ಪುರುಷ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
2. ರೋಗಿ-850: ದಾವಣಗೆರೆಯ 33 ವರ್ಷದ ಪುರುಷ. ರೋಗಿ 662ರ ಸಂಪರ್ಕ
3. ರೋಗಿ-851: ದಾವಣಗೆರೆಯ 30 ವರ್ಷದ ಮಹಿಳೆ. ರೋಗಿ 663ರ ಸಂಪರ್ಕ
4. ರೋಗಿ-852: ದಾವಣಗೆರೆಯ 56 ವರ್ಷದ ಮಹಿಳೆ. ರೋಗಿ 667ರ ದ್ವಿತೀಯ ಸಂಪರ್ಕ
5. ರೋಗಿ-853: ಹಾವೇರಿಯ ಶಿಗ್ಗಾವಿಯ 26 ವರ್ಷದ ಯುವಕ. ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ ಇದೆ.
6. ರೋಗಿ-854: ಬಾಗಲಕೋಟೆಯ ಬನಹಟ್ಟಿಯ 20 ವರ್ಷದ ಯುವಕ. ಅಹಮದಾಬಾದ್, ಗುಜರಾತ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ ಇದೆ.
7. ರೋಗಿ-855: ಬಾಗಲಕೋಟೆಯ ಬದಾಮಿಯ 28 ವರ್ಷದ ಪುರುಷ. ರೋಗಿ 688ರ ಸಂಪರ್ಕ
8. ರೋಗಿ-856: ವಿಜಯಪುರದ 20 ವರ್ಷದ ಮಹಿಳೆ. ರೋಗಿ 511ರ ಸಂಪರ್ಕ
9. ರೋಗಿ-857: ಬೀದರ್ ನ 50 ವರ್ಷದ ಪುರುಷ. ರೋಗಿ 644ರ ಸಂಪರ್ಕ
10. ರೋಗಿ-858: ಬೀದರ್ ನ 27 ವರ್ಷದ ಯುವಕ. ರೋಗಿ 644ರ ಸಂಪರ್ಕ
Advertisement
Advertisement
ವಿಜಯಪುರ ಜಿಲ್ಲೆಯಲ್ಲಿ ಇಂದು ಮತ್ತೋರ್ವ ಮಹಿಳೆಯಲ್ಲಿ ಸೋಂಕು ದೃಢವಾಗಿದ್ದು, ಈ ಮೂಲಕ ಕೊರೊನಾ ಪಾಸಿಟಿವ್ ಪ್ರಕರಣಗಳು 50ಕ್ಕೆ ಏರಿಕೆಯಾಗಿದೆ. 20 ವರ್ಷದ ಮಹಿಳೆಗೆ ರೋಗಿ ನಂಬರ್ 511ರ ಸಂಪರ್ಕದಿಂದ ಸೋಂಕು ಬಂದಿದ್ದು, ಈ ಮಹಿಳೆ ರೋಗಿಯ ಪತ್ನಿ ಎಂದು ತಿಳಿದುಬಂದಿದೆ. ಈಗಾಗಲೇ ಕ್ವಾರಂಟೈನ್‍ನಲ್ಲಿದ್ದ ಮಹಿಳೆಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ದಾವಣಗೆರೆ ಜಿಲ್ಲೆಯಲ್ಲಿ ಮತ್ತೆ ಮೂರು ಪಾಸಿಟಿವ್ ಪ್ರಕರಣ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ. ಈಗ ಬಂದಿರುವ ಎಲ್ಲ ಪ್ರಕರಣಗಳು ರೋಗಿ 556 ಮೃತ ವೃದ್ಧನ ದ್ವಿತೀಯ ಸಂಪರ್ಕದಿಂದ ಸೋಂಕು ಬಂದಿದೆ. ವೃದ್ಧನಿಗೆ ಸಂಪರ್ಕಕ್ಕೆ 662, 663, 667 ಮೂರು ಜನ ಬಂದಿದ್ದರು. ಇವರ ಸಂಪರ್ಕದಿಂದ ಇಂದು ಮೂವರಿಗೆ ಸೋಂಕು ಬಂದಿದೆ. ಈ ಮೂಲಕ ಮೃತ ವೃದ್ಧನಿಂದ 27 ಜನರಿಗೆ ಈವರೆಗೂ ಸೋಂಕು ತಗುಲಿದೆ. ಇವರೆಲ್ಲಾ ದಾವಣಗೆರೆಯ ಜಾಲಿನಗರ ಕಂಟೈನ್‍ಮೆಂಟ್ ಝೋನ್ ನಿವಾಸಿಗಳಾಗಿದ್ದು, ಈಗಾಗಲೇ ಜಿಲ್ಲಾ ಆಸ್ಪತ್ರೆ ಕ್ವಾರಂಟೈನ್‍ನಲ್ಲಿ ಇದ್ದರು. ಆದರೂ ಇಂದು ಅವರ ವರದಿ ಪಾಸಿಟಿವ್ ಬಂದಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಅಟ್ಟಹಾಸ ಮುಂದುವರಿಸಿದ್ದು, ಇಂದು ಮತ್ತಿಬ್ಬರಿಗೆ ಕೊರೊನಾ ಕಾಣಿಸಿಕೊಂಡಿದೆ. ನೆಗೆಟಿವ್ ಬಂದಿದ್ದ ತಬ್ಲಿಘಿಗೆ ಮತ್ತೆ ಕೊರೊನಾ ಪಾಸಿಟಿವ್ ಬಂದಿದೆ. ರೋಗಿ 854 ನೆಗೆಟಿವ್ ಬಂದಿತ್ತು. ಈ ಅದೇ ತಬ್ಲಿಘಿಗೆ ಮತ್ತೆ ಪಾಸಿಟಿವ್ ಬಂದಿದೆ. ಇನ್ನೂ ರೋಗಿ 854ಗೆ ತಬ್ಲಿಘಿ ಸಂಪರ್ಕದಿಂದ ಸೋಂಕು ಬಂದಿದೆ.
ಮಾರ್ಚ್ 9 ರಂದು ಬಾಗಲಕೋಟೆ ಬನಹಟ್ಟಿ ಪಟ್ಟಣದಿಂದ 12 ಜನ ನಿರ್ಗಮಿಸಿದ್ದರು. 10 ರಂದು ಗುಜರಾತ್‍ನ ಅಹ್ಮದಾಬಾದ್‍ಗೆ ತೆರಳಿದ್ದು, ಅಹ್ಮದಾಬಾದ್‍ನಲ್ಲಿ ಜಮಾತ್‍ನಲ್ಲಿ ಭಾಗಿಯಾಗಿದ್ದರು. ನಂತರ ಅಹ್ಮದಾಬಾದ್‍ನಲ್ಲಿ ಎಲ್ಲರದ್ದು ಸ್ವಾಬ್ ಟೆಸ್ಟ್ ಮಾಡಲಾಗಿತ್ತು. ಅಹ್ಮದಾಬಾದ್ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿತ್ತು. ಹೀಗಾಗಿ ಮೇ 8 ರಂದು ಬನಹಟ್ಟಿ ಪಟ್ಟಣಕ್ಕೆ ವಾಪಸ್ ಬಂದಿದ್ದರು. ಅವರನ್ನು ಬನಹಟ್ಟಿ ಪಟ್ಟಣದಲ್ಲಿ ಕ್ವಾರಂಟೈನ್‍ನಲ್ಲಿ ಇಡಲಾಗಿತ್ತು. ಪುನಃ ಗಂಟಲು ದ್ರವ ಪರೀಕ್ಷೆ ವೇಳೆ ರೋಗಿ 854ಗೆ ಸೋಂಕು ದೃಢವಾಗಿದೆ.
ಕೋವಿಡ್19: ಬೆಳಗಿನ ವರದಿ
ಒಟ್ಟು ಪ್ರಕರಣಗಳು: 858
ಮೃತಪಟ್ಟವರು: 31
ಗುಣಮುಖರಾದವರು: 422
ಹೊಸ ಪ್ರಕರಣಗಳು: 10#KarnatakaFightsCorona #IndiaFightsCorona pic.twitter.com/MVfPciKSEU
— B Sriramulu (@sriramulubjp) May 11, 2020
ಇನ್ನೂ ರೋಗಿ 688ರ ಸಂಪರ್ಕದಿಂದ ರೋಗಿ 855ಕ್ಕೆ ಸೋಂಕು ಬಂದಿದೆ. ಡಾಣಕಶಿರೂರ ಗ್ರಾಮದ ನಿವಾಸಿ 688ಗೆ ಗರ್ಭಿಣಿ ಮಹಿಳೆಗೆ 607 ರಿಂದ ಸೋಂಕು ತಗುಲಿತ್ತು. ಈ ಗರ್ಭಿಣಿ ಮಹಿಳೆಯಿಂದ ಒಟ್ಟು 16 ಜನರಿಗೆ ಸೋಂಕು ಬಂದಿದೆ.