Corona

ಮತ್ತೆ ಕೊರೊನಾ ಸ್ಫೋಟದ ಲಕ್ಷಣಗಳು – ನೆರೆಯ ಕೇರಳ, ಮಹಾರಾಷ್ಟ್ರದಲ್ಲಿ ಮಹಾಮಾರಿಯ ಅಬ್ಬರ

Published

on

Share this

– ಕೇರಳದಲ್ಲಿ ಒಂದೇ ದಿನ 30 ಸಾವಿರಕ್ಕೂ ಅಧಿಕ ಜನಕ್ಕೆ ಸೋಂಕು

ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ನೆರೆಯ ಕೇರಳದಲ್ಲಿ ಒಂದೇ ದಿನ ಮೂವತ್ತು ಸಾವಿರಕ್ಕೂ ಅಧಿಕ ಜನಕ್ಕೆ ಸೋಂಕು ತಗುಲಿದೆ. ಇತ್ತ ಸಾವಿನ ಸಂಖ್ಯೆ ಸಹ ಪ್ರತಿದಿನ ಏರಿಳಿತ ಕಾಣುತ್ತಿದೆ.

ಕಳೆದ 24 ಗಂಟೆಯಲ್ಲಿ 46,164ಕೊರೊನಾ ಪ್ರಕರಣಗಳು ವರದಿಯಾಗಿದ್ದು, 607 ಜನರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರ 216 ಮತ್ತು ಕೇರಳದಲ್ಲಿ 215 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಕೊರೊನಾದಿಂದ ಗುಣಮುಖರಾಗುತ್ತಿರುವ ಪ್ರಮಾಣ ಶೇ.97.63ರಷ್ಟಿದೆ.

ಕೇರಳದಲ್ಲಿ ಕೊರೊನಾ ಸ್ಫೋಟ
ನೆರೆಯ ಕೇರಳಲ್ಲಿ ಕೊರೊನಾ ಸ್ಫೋಟವಾಗಿದ್ದು, ಒಂದೇ ದಿನ 31,445 ಜನ ಸೋಂಕಿಗೆ ತುತ್ತಾಗಿದ್ದಾರೆ. ಇನ್ನೂ ಮಹಾರಾಷ್ಟ್ರದಲ್ಲಿಯೂ ಕೊರೊನಾ ಐದು ಸಾವಿರದ ಗಡಿ ದಾಟಿದ್ದು, 215 ಜನ ಸಾವನ್ನಪ್ಪಿದ್ದಾರೆ. ಕೇರಳದಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಶೇ.19.03ಕ್ಕೆ ಏರಿಕೆಯಾಗಿರೋದು ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕಾಬೂಲ್‍ನಲ್ಲಿ 3 ಸಾವಿರ ರೂ.ಗೆ ಒಂದು ಬಾಟೆಲ್ ನೀರು, ಪ್ಲೇಟ್ ರೈಸ್‍ಗೆ 7,500 ರೂ.

ಮಹಾರಾಷ್ಟ್ರದಲ್ಲಿ 5,225 ಹೊಸ ಪ್ರಕರಣ ವರದಿಯಾಗಿದ್ದು, ಸದ್ಯ 50,183 ಸಕ್ರಿಯ ಪ್ರಕರಣಗಳಿವೆ. ಪುಣೆ 12,673, ಠಾಣೆ 7,041, ಸತಾರಾ 5,400, ಅಹಮದನಗರ 4,716 ಮತ್ತು ಸಾಂಗ್ಲಿಯಲ್ಲಿ 4,668 ಸಕ್ರಿಯ ಪ್ರಕರಣಗಳಿವೆ. ಮುಂಬೈನಲ್ಲಿ ಬುಧವಾರ 342 ಜನ ಸೋಂಕಿಗೆ ತುತ್ತಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: 1ರಿಂದ 8ನೇ ತರಗತಿ ಶಾಲೆಗಳ ಆರಂಭ – ಆ 30 ರಂದು ಸಿಎಂ ನೇತೃತ್ವದಲ್ಲಿ ಸಭೆ

Click to comment

Leave a Reply

Your email address will not be published. Required fields are marked *

Advertisement
Advertisement