ಮೈಸೂರು: ಕೊರೊನಾ 3ನೇ ಅಲೆಯ ಅಬ್ಬರದಲ್ಲಿ ನಿಧಾನವಾಗಿ 18 ವರ್ಷದ ಒಳಗಿನ ಮಕ್ಕಳಲ್ಲಿ ಕೊರೊನಾ ಪಾಸಿಟಿವ್ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಆರೋಗ್ಯಾಧಿಕಾರಿ ಡಾ. ಪ್ರಸಾದ್ ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಕೊರೊನಾ 3ನೇ ಅಲೆಯ ಅಬ್ಬರದಲ್ಲಿ ನಿಧಾನವಾಗಿ 18 ವರ್ಷದ ಒಳಗಿನ ಮಕ್ಕಳಲ್ಲಿ ಪಾಸಿಟಿವ್ ಹೆಚ್ಚಾಗುತ್ತಿದೆ. 3ನೇ ಅಲೆಯಲ್ಲಿ ಇದುವರೆಗೂ 130 ಮಕ್ಕಳಲ್ಲಿ ಪಾಸಿಟಿವ್ ದೃಢವಾಗಿದೆ. ಜಿಲ್ಲೆಯ ಒಟ್ಟಾರೆ ಪಾಸಿಟಿವ್ ಸಂಖ್ಯೆಯ ಲೆಕ್ಕದಲ್ಲಿ ಮಕ್ಕಳಿಗೆ ಬಂದಿರುವ ಪಾಸಿಟಿವ್ ಪ್ರಮಾಣದ ಲೆಕ್ಕ ಶೇ 10 ರಷ್ಟಿದೆ ಎಂದು ನುಡಿದರು. ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿ ಪುತ್ರನಿಗೂ ಕೋವಿಡ್
Advertisement
Advertisement
ಎರಡನೇ ಅಲೆಯ ಮುಕ್ತಾಯದಲ್ಲಿ ಈ ಪ್ರಮಾಣ ಶೇಕಡಾ 12 ರಷ್ಟಿತ್ತು. ಆದರೆ, ಮೂರನೇ ಅಲೆಯ ಆರಂಭದಲ್ಲೇ ಈ ಪ್ರಮಾಣ ಶೇಕಡಾ 10 ಕ್ಕೆ ತಲುಪಿದೆ ಎಂದರು. ಇದನ್ನೂ ಓದಿ: ಉತ್ತರ ಪ್ರದೇಶ, ಉತ್ತರಾಖಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ