ರಾಯಚೂರು: ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆ ರಿಮ್ಸ್ ಸಿಬ್ಬಂದಿಗೆ ಸುರಕ್ಷತೆ ಆತಂಕ ಎದುರಾಗಿದೆ. ಹೀಗಾಗಿ ಓರ್ವ ಇಂಟರ್ನ್ ವೈದ್ಯ ಸೇರಿ 10ಕ್ಕೂ ಹೆಚ್ಚು ಸಿಬ್ಬಂದಿ ಓಪೆಕ್ ಆಸ್ಪತ್ರೆಯಲ್ಲಿ ಕ್ವಾರಂಟೈನ್‍ನಲ್ಲಿದ್ದಾರೆ.
ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ರೋಗಿಗೆ ಸುರಕ್ಷತೆಯಿಲ್ಲದೆ ಚಿಕಿತ್ಸೆ ನೀಡಿರುವ ಹಿನ್ನೆಲೆಯಲ್ಲಿ ಆತಂಕದಲ್ಲಿರುವ ಸಿಬ್ಬಂದಿ ಕ್ವಾರಂಟೈನ್‍ಗೆ ಹೋಗಿದ್ದಾರೆ. ಇದುವರೆಗೆ ಕೇವಲ ಸಾಧಾರಣ ಮಾಸ್ಕ್ ಮಾತ್ರ ನೀಡಿದ್ದ ವೈದ್ಯಕೀಯ ಬೋಧಕ ಆಸ್ಪತ್ರೆ ಸಿಬ್ಬಂದಿ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯವಹಿಸಿತ್ತು. ಇದರಿಂದ ಎನ್ 95 ಮಾಸ್ಕ್ ನೀಡುವಂತೆ ಇಂಟರ್ನ್ ವೈದ್ಯರು ಹಾಗೂ ಸಿಬ್ಬಂದಿ ಒತ್ತಾಯ ಮಾಡಿದ್ದಾರೆ.
Advertisement
Advertisement
ಸುರಕ್ಷತೆ ನೀಡದಿದ್ದರೆ ಕೆಲಸಕ್ಕೆ ಗೈರಾಗುವುದಾಗಿ ಸಿಬ್ಬಂದಿ ಹೇಳಿದ್ದರಿಂದ ಆಸ್ಪತ್ರೆ ಹಿರಿಯ ಅಧಿಕಾರಿಗಳು ಈಗ ಎಚ್ಚೆತ್ತುಕೊಂಡಿದ್ದಾರೆ. ಎಲ್ಲ ಸಿಬ್ಬಂದಿಗೂ ಎನ್ 95 ಮಾಸ್ಕ್ ಕೊಡುವುದಾಗಿ ರಿಮ್ಸ್ ನಿರ್ದೇಶಕ ಡಾ.ಬಸವರಾಜ್ ಪೀರಾಪುರೆ ಭರವಸೆ ನೀಡಿದ್ದಾರೆ. ಆದರೆ ಇದುವರೆಗೂ ಗ್ಲೌಸ್ ಹಾಗೂ ಎನ್ 95 ಮಾಸ್ಕ್ ನೀಡಿಲ್ಲ.
Advertisement
ಜಿಲ್ಲೆಯಲ್ಲಿ ಒಟ್ಟು 50 ಜನ ಸರ್ಕಾರಿ ಕ್ವಾರಂಟೈನ್‍ನಲ್ಲಿದ್ದು, 30 ಜನರ ವರದಿ ಪ್ರಯೋಗಾಲಯದಿಂದ ಬರುವುದು ಬಾಕಿಯಿದೆ. ಇದುವರೆಗೆ ಯಾವುದೇ ಪಾಸಿಟಿವ್ ಪ್ರಕರಣ ಬಂದಿಲ್ಲ.