ಸ್ಪೇನ್: ಇಡೀ ವಿಶ್ವವೇ ಕೊರೊನಾ ವೈರಸ್‍ಗೆ ಬೆಚ್ಚಿಬಿದ್ದಿದೆ. ವಿಶ್ವಾದ್ಯಂತ 30ಕ್ಕೂ ಹೆಚ್ಚು ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇಂದು ಕೊರೊನಾ ವೈರಸ್‍ಗೆ ರಾಜವಂಶಸ್ಥ ಮನೆತನದಲ್ಲಿ ಮೊದಲ ಸಾವಾಗಿದೆ.
ಸ್ಪೇನ್‍ನ ರಾಣಿ ಮಾರಿಯಾ ಥೆರೇಸಾ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮೃತಪಟ್ಟಿದ್ದಾರೆ ಎಂದು ಸಹೋದರ ಪ್ರಿನ್ಸ್ ಸಿಕ್‍ಸ್ಟೋ ಎನ್ರಿಕ್ ಡಿ ಬೊರ್ಬನ್ ತಿಳಿಸಿದ್ದಾರೆ.
Advertisement
Advertisement
86 ವರ್ಷದ ರಾಣಿ ಮಾರಿಯಾ ಸ್ಪೇನ್ ರಾಜಮನೆತನದ ಹೌಸ್ ಆಫ್ ಬೌರ್ಬನ್-ಪಾರ್ಮಾದ ಸದಸ್ಯೆಯಾಗಿದ್ದರು. 1933ರಲ್ಲಿ ಪ್ಯಾರಿಸ್‍ನಲ್ಲಿ ಜನಿಸಿದ್ದ ಮಾರಿಯಾ ಥೆರೇಸಾ ಫ್ರಾನ್ಸ್ ನಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಬಳಿಕ ಪ್ಯಾರಿಸ್‍ನ ಸೊರ್ಬೊನ್‍ನಲ್ಲಿ ಹಾಗೂ ಮ್ಯಾಡ್ರಿಡ್‍ನ ಕಾಂಪ್ಲುಟೆನ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು.
Advertisement
ವಿದೇಶಿ ಮಾಧ್ಯಮ ವರದಿಗಳ ಪ್ರಕಾರ, ರಾಣಿ ಮಾರಿಯಾ ಥೆರೇಸಾ ಅವರ ನೇರ ಅಭಿಪ್ರಾಯಗಳು ಮತ್ತು ಕಾರ್ಯಕರ್ತರ ಕೆಲಸದಿಂದಾಗಿ ಅವರನ್ನು ‘ಕೆಂಪು ರಾಜಕುಮಾರಿ’ (ರೆಡ್ ಪ್ರಿನ್ಸ್) ಎಂದು ಕರೆಯಲಾಗುತ್ತಿತ್ತು. ಕಳೆದ ಕೆಲವು ತಿಂಗಳುಗಳಿಂದ ರಾಣಿ ಮಾರಿಯಾ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
Advertisement
https://www.facebook.com/sixtoenriquedeborbon/photos/a.264181261771/10158048240541772/?type=3&theater
ಭಾನುವಾರ ಮಧ್ಯಾಹ್ನ 12:30 ಗಂಟೆ ಮಾಹಿತಿ ಪ್ರಕಾರ ಕೊರೊನಾ ವೈರಸ್‍ಗೆ ಸ್ಪೇನ್‍ನಲ್ಲಿ ಸಾವನ್ನಪ್ಪಿದವರ ಸಂಖ್ಯೆ 5,982ಕ್ಕೆ ಏರಿದೆ. ಇದು ಚೀನಾದನ್ನು ಮೀರಿಸಿದೆ. ಸ್ಪೇನ್‍ನಲ್ಲಿ 73,235 ಕೊರೊನಾ ಸೋಂಕಿತ ಪ್ರಕರಣಗಳಿದ್ದು, 54,968 ಜನರು ಚಿಕಿತ್ಸೆ ಪಡೆಯುತ್ತಿದ್ದು, 12,285 ಜನರು ಗುಣಮುಖರಾಗಿದ್ದಾರೆ. ಇದರಿಂದಾಗಿ ತುರ್ತು ಪರಿಸ್ಥಿತಿಯನ್ನು ಇನ್ನೂ ಎರಡು ವಾರಗಳವರೆಗೆ ವಿಸ್ತರಿಸಲು ಸ್ಪೇನ್ ಸಂಸತ್ತು ಒಪ್ಪಿಗೆ ನೀಡಿದೆ.