– ಅಜಿಂಕ್ಯ ರಹಾನೆಯಿಂದ 10 ಲಕ್ಷ ರೂ. ದೇಣಿಗೆ
ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಸಿನಿಮಾ ನಟ, ನಟಿಯರು, ಉದ್ಯಮಿಗಳು, ಕ್ರೀಡಾಪಟುಗಳು, ಕ್ರಿಕೆಟಿಗರು ಸಹಾಯ ನೀಡಲು ಒಬ್ಬೊಬ್ಬರೇ ಮುಂದೆ ಬರುತ್ತಿದ್ದಾರೆ. ಸಚಿನ್ ತೆಂಡೂಲ್ಕರ್, ಬಿಸಿಸಿಐ, ಸೌರವ್ ಗಂಗೂಲಿ, ಸುರೇಶ್ ರೈನಾ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಸಂಸದ ಗೌತಮ್ ಗಂಭೀರ್ 1 ಕೋಟಿ ರೂ. ನೀಡಿದ್ದಾರೆ.
ಬಿಜೆಪಿ ಸಂಸದ ಗಂಭೀರ್ ಅವರು ಪ್ರಧಾನ ಮಂತ್ರಿ ವಿಪತ್ತು ಪರಿಹಾರ ನಿಧಿಗೆ 1 ಕೋಟಿ ರೂ. ಜಮಾ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅವರು ತಮ್ಮ ಒಂದು ತಿಂಗಳ ವೇತನವನ್ನೂ ದಾನ ಮಾಡಿದ್ದಾರೆ. ಜೊತೆಗೆ ಗಂಭೀರ್ ಅವರು ನಡೆಸುತ್ತಿರುವ ಎನ್‍ಜಿಒ ಬಡವರಿಗೆ ಉಚಿತವಾಗಿ ಆಹಾರವನ್ನು ನೀಡುತ್ತಿದೆ.
Advertisement
It is time that all resources of the country be directed towards fighting COVID-19. Have released INR 1 Crore from my MP LAD fund towards relief efforts. Have also donated one month's salary towards the Central Relief Fund.
United we stand!! @narendramodi @JPNadda @BJP4Delhi
— Gautam Gambhir (@GautamGambhir) March 28, 2020
Advertisement
ಕ್ರೀಡಾ ಸಚಿವ ರಿಜಿಜು ಅವರು ಟ್ವೀಟ್ ಮಾಡಿ, ನಾನು ಪ್ರಧಾನ ಮಂತ್ರಿ ವಿಪತ್ತು ಪರಿಹಾರ ನಿಧಿಗೆ ಸಂಸತ್ತಿನ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯ ನಿಧಿ (ಎಂಪಿಎಲ್‍ಡಿಎಸ್)ನಿಂದ ಒಂದು ಕೋಟಿ ರೂ. ಜಮಾ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಜೊತೆಗೆ ತಮ್ಮ ಒಂದು ತಿಂಗಳ ವೇತನವನ್ನೂ ದಾನ ಮಾಡಿದ್ದಾರೆ. ಇತ್ತ ಟೀಂ ಇಂಡಿಯಾ ಕ್ರಿಕೆಟರ್ ಅಜಿಂಕ್ಯ ರಹಾನೆ 10 ಲಕ್ಷ ರೂ. ದೇಣಿಗೆ ಕೊಟ್ಟಿದ್ದಾರೆ.
Advertisement
ಕೊರೊನಾ ವೈರಸ್ ವಿಶ್ವಾದ್ಯಂತ 195 ದೇಶಗಳಿಗೆ ಹರಡಿದ್ದು, ತಮ್ಮ ದೇಶವನ್ನು ರಕ್ಷಿಸಲು ಅಲ್ಲಿಯ ಆಟಗಾರರು, ಸೆಲೆಬ್ರಿಟಿಗಳು, ಉದ್ಯಮಿಗಳು ಸರ್ಕಾರಕ್ಕೆ ನೆರವು ನೀಡುತ್ತಿದ್ದಾರೆ. ಫುಟ್ಬಾಲ್ ಆಗದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ, ತರಬೇತುದಾರ ಮೌರಿಜಿಯೊ ಸಾರಿ. ಇಟಲಿಯನ್ ಫುಟ್ಬಾಲ್ ಕ್ಲಬ್ ಯುವೆಂಟಸ್ ಪರ ಆಡಿರುವ ಇತರ ಆಟಗಾರರು 100 ಮಿಲಿಯನ್ ಯುರೋಗಳನ್ನು (ಸುಮಾರು 753 ಕೋಟಿ ರೂ.) ದೇಣಿಗೆ ನೀಡಿದ್ದಾರೆ.
Advertisement
I'm depositing the amount now…
माननीय प्रधानमंत्री श्री @narendramodi जी ने यह आव्हान किया है कि इस महामारी को देखते हुए भाजपा के सभी सांसद अपनी सांसद निधि से ₹1,00,00,000 (एक करोड़) की निधि प्रधानमंत्री राष्ट्रीय राहत कोष में देंगे। https://t.co/F4kUg7ihxY
— Kiren Rijiju (@KirenRijiju) March 28, 2020
ರೊನಾಲ್ಡೊ ಅವರು ಮೂರು ತಿಂಗಳ ಸಂಬಳ 10 ಮಿಲಿಯನ್ ಯುರೋಗಳಷ್ಟು (ಸುಮಾರು 84 ಕೋಟಿ ರೂ.)ವನ್ನು ದೇಣಿಗೆ ನೀಡಿದ್ದಾರೆ. ಇತ್ತೀಚೆಗೆ ಡೇನಿಯಲ್ ರುಗಾನಿ, ಬ್ಲೇಸ್ ಮಾಟುಡಿ ಮತ್ತು ಪಾವೊಲೊ ದಿಬಾಲಾ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಈ ಪೈಕಿ ದಿಬಾಲಾ ಚೇತರಿಸಿಕೊಂಡಿದ್ದು, ಉಳಿದ ಇಬ್ಬರು ಆಟಗಾರರು ಹೋಮ್ ಕ್ವಾರೆಂಟೈನ್‍ನಲ್ಲಿ ಇದ್ದಾರೆ. ಇಟಲಿಯಲ್ಲಿ ಈವರೆಗೂ 10 ಸಾವಿರಕ್ಕೂ ಅಧಿಕ ಜನರು ಸೋಂಕಿತರು ಮೃತಪಟ್ಟಿದ್ದಾರೆ.
ಕೊರೊನಾ ವೈರಸ್‍ಗೆ ವಿಶ್ವಾದ್ಯಂತ ಭಾನುವಾರ ಮಧ್ಯಾಹ್ನದ ವೇಳೆಗೆ 30,943 ಜನರು ಮೃತಪಟ್ಟಿದ್ದಾರೆ. ಜತ್ತಿನಾದ್ಯಂತ 666,013 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 497,002 ಜನರು ಚಿಕಿತ್ಸೆ ಪಡೆಯುತ್ತಿದ್ದು, 1,38,068 ಮಂದಿ ಗುಣಮುಖರಾಗಿದ್ದಾರೆ.