ಕಲಬುರಗಿ: ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿದ್ದರೂ ಜನರು ಮನೆಯಿಂದ ಹೊರ ಬರುತ್ತಿದ್ದಾರೆ. ಅಂತವರಿಗೆ ಪೊಲೀಸರು ಕೂಡ ಬಸ್ಕಿ ಹೊಡಿಸುವ ಮೂಲಕ ಶಿಕ್ಷೆ ಕೊಟ್ಟಿದ್ದರು. ಇದೀಗ ಜಿಲ್ಲೆಯಲ್ಲಿ ಮನೆಯಿಂದ ಹೊರಬಂದವರಿಗೆ ಕಸಗುಡಿಸುವ ಶಿಕ್ಷೆ ಕೊಟ್ಟಿದ್ದಾರೆ.
ಕೊರೊನಾ ಭೀತಿಯಿಂದ ಲಾಕ್‍ಡೌನ್ ಮಧ್ಯೆಯೂ ಕಲಬುರಗಿಯಲ್ಲಿ ನಿಯಮವನ್ನು ಬ್ರೇಕ್ ಮಾಡಿ ವಾಹನ ಸವಾರರು ಓಡಾಡುತ್ತಿದ್ದರು. ಅಂತವರಿಗೆ ಖಾಕಿ ಪಡೆ ಸಖತ್ ಟ್ರೀಟ್ ಮೆಂಟ್ ಕೊಟ್ಟಿದೆ. ಮನೆಯಿಂದ ಹೊರ ಬಂದ ಬೈಕ್ ಸವಾರರಿಗೆ ರಸ್ತೆ ಕುಸಗುಡಿಸಿ ಶಿಕ್ಷೆಯನ್ನು ಪೊಲೀಸರು ನೀಡಿದ್ದಾರೆ.
ನಗರದ ಪ್ರಕಾಶ್ ಏಶಿಯನ್ ಮಾಲ್ ವೃತ್ತದಲ್ಲಿ ಮನೆಯಿಂದ ಹೊರಬಂದವರಿಗೆ ಪೊಲೀಸರು ಲಾಠಿ ಏಟು ಕೊಟ್ಟಿದ್ದಾರೆ. ಜೊತೆಗೆ ವಿವಿಧ ಬಡಾವಣೆಗಳಲ್ಲಿ ಪುಂಡಪೋಕರಿಗಳನ್ನು ಕರೆದುಕೊಂಡು ಹೋಗಿ ಸ್ವಚ್ಛತೆ ಇಲ್ಲದಿರುವ ಏರಿಯಾಗಳಲ್ಲಿ ಕಸ ಗುಡಿಸಿದ್ದಾರೆ.
ಕಲಬುರಗಿಯ ಚೌಕ್ ಠಾಣಾ ಸಿಪಿಐ ಶಕೀಲ್ ಚೌಧರಿ ಅವರು ಈ ರೀತಿಯ ಕಸಗುಡಿಸುವ ಶಿಕ್ಷೆಯನ್ನು ನೀಡಿದ್ದರು. ಅಲ್ಲದೇ ಮತ್ತೆ ಮನೆಯಿಂದ ಹೊರ ಬಂದರೆ ಕ್ರಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಿಕ್ಷೆ ನೀಡಿ ಎಚ್ಚರಿಗೆ ನೀಡಿದ್ದಾರೆ.