– ಅರೆಸ್ಟ್ ಮಾಡಿದ ಪೊಲೀಸರಿಗೆ ಸೋಂಕಿನ ಭೀತಿ
ಮಂಗಳೂರು/ಚಿಕ್ಕಬಳ್ಳಾಪುರ: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ ಸೋಂಕಿತರ ಟ್ರಾವೆಲ್ ಹಿಸ್ಟರಿ ಮತ್ತಷ್ಟು ಮಿಸ್ಟರಿಗಳನ್ನು ಹುಟ್ಟು ಹಾಕುತ್ತಿದೆ. ಚಿಕ್ಕಬಳ್ಳಾಪುರ ಮತ್ತು ಬಂಟ್ವಾಳದಲ್ಲಿ ಪತ್ತೆಯಾದ ಕೊರೊನಾ ಕೇಸ್‍ಗಳು ಅಂತದ್ದೇ ಭೀತಿಯನ್ನು ಸೃಷ್ಟಿಸಿವೆ.
ಚಿಕ್ಕಬಳ್ಳಾಪುರದಲ್ಲಿ ರಾತ್ರೋರಾತ್ರಿ ದನದ ಮಾಂಸ ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದ ಮೂವರು ಯುವಕರಲ್ಲಿ ಒಬ್ಬನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಯುವಕನ ಕೊರೊನಾ ರಿಪೋರ್ಟ್ ಬರುತ್ತಿದ್ದಂತೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ಆತಂಕಗೊಂಡಿದ್ದಾರೆ. ಆರೋಪಿ ಯುವಕನನ್ನು ಬಂಧಿಸದಿದ್ದರೆ ಬೆಂಗಳೂರಿಗೆ ಮತ್ತೊಂದು ಕಂಟಕವೇ ಕಾದಿತ್ತು ಎನ್ನಲಾಗಿದೆ.
Advertisement
Advertisement
ಶಿವಾಜಿನಗರಕ್ಕೆ ಕಾದಿತ್ತು ಡೇಂಜರ್:
ಬಂಧಿತ ಯುವಕರು ಆಂಧ್ರದ ಹಿಂದೂಪುರದಿಂದ ದನದ ಮಾಂಸವನ್ನು ಬೆಂಗಳೂರಿನ ಶಿವಾಜಿನಗರಕ್ಕೆ ಸಾಗಿಸುತ್ತಿದ್ದರು. ಏ.23ರಂದು ಗೌರಿಬಿದನೂರು ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದರು. ಚಂದನದೂರು ಬಳಿ ಮಾಂಸ ಸಾಗಾಟ ಮಾಡುತ್ತಿದ್ದ ವಾಹನವನ್ನು ಸೀಜ್ ಮಾಡಿದ್ದರು. ನಂತರ ಮೂವರು ಆರೋಪಿಗಳನ್ನು ಗೌರಿಬಿದನೂರು ಗ್ರಾಮಾಂತರ ಠಾಣೆಗೆ ಕರೆದುಕೊಂಡು ಹೋಗಿದ್ದರು. ಬಳಿಕ ಬಂಧಿತರಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು.
Advertisement
ಮೂವರಲ್ಲಿ 18 ವರ್ಷದ ಯುವಕನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರಿಗೆ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತನ ಸಂಪರ್ಕಕ್ಕೆ ಬಂದಿದ್ದ 10 ಮಂದಿ ಪೊಲೀಸರು ಸೇರಿದಂತೆ 20 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
Advertisement
ಹೀಗಾಗಿ ಸೋಂಕಿತನ್ನು ಚಿಕ್ಕಬಳ್ಳಾಪುರದಲ್ಲೇ ಬಂಧಿಸಿದ್ದರಿಂದ ಆತ ಶಿವಾಜಿನಗರವನ್ನು ತಲುಪಿಲ್ಲ. ಒಂದು ವೇಳೆ ಸೋಂಕಿತ ಸಾಗಿಸುತ್ತಿದ್ದ ದನದ ಮಾಂಸ ಶಿವಾಜಿನಗರ ತಲುಪಿದ್ದರೆ ಭಾರೀ ಗಂಡಾಂತರವೇ ಕಾದಿತ್ತು. ಸ್ವಲ್ಪದರಲ್ಲೇ ಶಿವಾಜಿನಗರ ಬಚಾವ್ ಆಗಿದೆ ಎಂದೇ ಹೇಳಬಹುದು.
ಇನ್ನೂ ಬಂಟ್ವಾಳದ 33 ವರ್ಷ ಮಹಿಳೆಯ ಕೊರೊನಾ ರಿಪೋರ್ಟ್ ಪಾಸಿಟಿವ್ ಬಂದಿದೆ. ದಕ್ಷಿಣ ಕನ್ನಡದಲ್ಲಿ ಡೆಡ್ಲಿ ವೈರಸ್‍ಗೆ ಮೊದಲು ಬಲಿಯಾಗಿದ್ದ ವೃದ್ಧೆಯಿಂದಲೇ ಈಗ ಈ ಮಹಿಳೆ ಸೋಂಕು ಹರಡಿದೆ. ಮೃತ ವೃದ್ಧೆಯ ಮನೆಯ ಪಕ್ಕದಲ್ಲಿದ್ದ 67 ವರ್ಷದ ಮತ್ತೊಬ್ಬ ವೃದ್ದೆಗೆ ಸೋಂಕು ತಟ್ಟಿತ್ತು. ಈಗ ಅವರ ಮಗಳಿಗೆ ವೈರಸ್ ಹಬ್ಬಿದೆ. ತಾಯಿ-ಮಗಳು ಇಬ್ಬರನ್ನೂ ಐಸೋಲೇಷನ್ ಮಾಡಲಾಗಿದೆ. ಕಠಿಣ ಕ್ರಮಗಳಿಗೂ ಬಂಟ್ವಾಳದಲ್ಲಿ ಕೊರೊನಾ ಚೈನ್ ಕಟ್ ಮಾಡಲು ಸಾಧ್ಯವಾಗುತ್ತಿಲ್ಲ.