ಬೆಂಗಳೂರು: ಒಂದು ಕಡೆ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಲಾಕ್‍ಡೌನ್ ನಿಯಮ ಇನ್ನಷ್ಟು ಕಠಿಣವಾಗುತ್ತಿದೆ. ಆದರೆ ಇಂದು ಭಾನುವಾರವಾದ ಕಾರಣ ಬಾಡೂಟ ಮಾಡಲು ಜನರು ಮಟನ್, ಚಿಕನ್ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ.
ಲಾಕ್‍ಡೌನ್ ನಡುವೆಯು ನಾನ್ ವೆಜ್‍ಗೆ ಬೇಡಿಕೆ ಹೆಚ್ಚಾಗಿದ್ದು, ಈ ಮೂಲಕ ಭಾನುವಾರದ ಮಟನ್, ಚಿಕನ್ ಮಾರಾಟ ಜೋರಾಗಿದೆ. ಲಾಕ್‍ಡೌನ್ ಇದ್ದರೂ ನಾನ್‍ವೆಜ್ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಮಟನ್ ಖರೀದಿಗೆ ಮಟನ್ ಅಂಗಡಿ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.
Advertisement
Advertisement
ಅಂಗಡಿ ಮಾಲೀಕರು ಕೂಡ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದ್ದಾರೆ. ಹೀಗಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ನೂರಾರು ಸಂಖ್ಯೆಯಲ್ಲಿ ಕ್ಯೂ ನಿಂತಿದ್ದಾರೆ. ಅಷ್ಟೇ ಅಲ್ಲದೇ ಮಾಸ್ಕ್ ಇಲ್ಲದೆ ಬಂದರೆ ಅವರಿಗೆ ಮಟನ್ ಕೊಡಲ್ಲ ಎಂದು ಮಾಲೀಕ ತಿಳಿಸಿದ್ದಾರೆ. ಮೈಸೂರು ರೋಡ್‍ನಲ್ಲಿರೋ ಮಟನ್ ಅಂಗಡಿ ಮುಂದೆ ಜನಸಾಗರವೇ ಸೇರಿದೆ.
Advertisement
ಜನರು ಶಿಸ್ತುಬದ್ಧವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಸಿ ಮಟನ್ ಖರೀದಿ ಮಾಡುತ್ತಿದ್ದಾರೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಚಿಕನ್ ಕೆಜಿಗೆ 160 ಆಗಿದೆ. ಇನ್ನೂ ಮಟನ್ ಕೆಜಿಗೆ 750 ರೂಪಾಯಿ ಆಗಿದೆ. ಸರ್ಕಾರ ಮಟನ್, ಚಿಕನ್ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಜನರು ಸುರಕ್ಷತಾ ಕ್ರಮಗಳನ್ನು ಕೈಗೊಂಡು ಮನೆಯಿಂದ ಹೊರಬಂದು ಮಟನ್, ಚಿಕನ್ ಖರೀದಿ ಮಾಡುತ್ತಿದ್ದಾರೆ.
Advertisement