ಮುಂಬೈ: ಕೊರೊನಾ ವೈರಸ್ ಭಯವು ಜನರ ಜೀವನದ ಪ್ರತಿಯೊಂದು ಭಾಗದ ಮೇಲೆ ಪರಿಣಾಮ ಬೀರುತ್ತಿದೆ. ಜನರು ತುರ್ತು ಪರಿಸ್ಥಿತಿಯನ್ನು ನಿರೀಕ್ಷಿಸಿ ಬ್ಯಾಂಕ್‍ಗಳಿಂದ ಅಪಾರ ಪ್ರಮಾಣದ ಹಣವನ್ನು ವಿತ್‍ಡ್ರಾ ಮಾಡಿಕೊಳ್ಳುತ್ತಿದ್ದಾರೆ. ಹದಿನೈದು ದಿನಗಳಲ್ಲಿ ಠೇವಣಿದಾರರು 53 ಸಾವಿರ ಕೋಟಿ ರೂ. ಹಿಂಪಡೆಸಿದ್ದಾರೆ. ಇದು ಕಳೆದ 16 ತಿಂಗಳಲ್ಲಿ ಅತ್ಯಧಿಕ ನಗದು ವಿತ್‍ಡ್ರಾ ಆಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಾರ, ಹಬ್ಬ ಅಥವಾ ಚುನಾವಣೆ ಸಂದರ್ಭದಲ್ಲಿ ಮಾತ್ರ ಇಷ್ಟು ಪ್ರಮಾಣದಲ್ಲಿ ಗ್ರಾಹಕರು ಹಣವನ್ನು ವಿತ್‍ಡ್ರಾ ಮಾಡಿಕೊಳ್ಳುತ್ತಾರೆ. ಆದರೆ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಮಾರ್ಚ್ 13ರಿಂದ 27ರವರೆಗೆ ಜನರು ಇಷ್ಟು ದೊಡ್ಡ ಪ್ರಮಾಣದ ಹಣವನ್ನು ಹಿಂಪಡೆದಿದ್ದಾರೆ. ಮಾರ್ಚ್ 13ರ ವೇಳೆ ಗ್ರಾಹಕರು 23 ಲಕ್ಷ ಕೋಟಿ ರೂ. ಠೇವಣಿ ಹೊಂದಿದ್ದರು. ನಂತರದ 16 ತಿಂಗಳಲ್ಲಿ 53 ಸಾವಿರ ಕೋಟಿ ರೂ. ಹಿಂಪಡೆಸಿದ್ದಾರೆ.
Advertisement
Advertisement
ಲಾಕ್‍ಡೌನ್ ಸಮಯದಲ್ಲಿ ಅಗತ್ಯ ವಸ್ತುಗಳನ್ನು ನಗದು ರೂಪದಲ್ಲಿ ಖರೀದಿಸಬೇಕಾಗುತ್ತದೆ. ಹೀಗಾಗಿ ಹಣಕ್ಕಾಗಿ ಹಠಾತ್ ಬೇಡಿಕೆಯ ಸಂದರ್ಭದಲ್ಲಿ ಬ್ಯಾಂಕುಗಳು ನಗದು ವಿತರಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸ್ಟೇಟ್ ಬ್ಯಾಂಕಿನ ಮುಖ್ಯ ಅರ್ಥಶಾಸ್ತ್ರಜ್ಞ ಎಸ್.ಕೆ.ಘೋಷ್ ತಿಳಿಸಿದ್ದಾರೆ.
Advertisement
ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕ್‍ಗಳು ಮತ್ತು ಎಟಿಎಂಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆಯೇ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುನ್ನೆಚ್ಚರಿಕೆಯಾಗಿ ಭಾರೀ ಪ್ರಮಾಣದ ಹಣವನ್ನು ಹಿಂಪಡೆದಿದ್ದಾರೆ. ಬ್ಯಾಂಕ್‍ಗಳು ಆನ್‍ಲೈನ್ ವಹಿವಾಟುಗಳನ್ನು ಉತ್ತೇಜಿಸುತ್ತಿವೆ. ಆದರೆ ಅನೇಕ ಇ-ಕಾಮರ್ಸ್ ಕಂಪನಿಗಳು ಸೀಮಿತ ವಿತರಣಾ ಸೇವೆಯನ್ನು ಹೊಂದಿವೆ. ಈ ಹಿನ್ನೆಲೆಯಲ್ಲಿ ಜನರು ಆಫ್‍ಲೈನ್‍ನಲ್ಲಿ ಶಾಪಿಂಗ್ ಮಾಡುತ್ತಿದ್ದಾರೆ. ಇದಕ್ಕಾಗಿ ಹಣದ ಅಗತ್ಯವಿದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.