– ಕೆಲವು ಷರತ್ತುಗಳು ಅನ್ವಯ
ನವದೆಹಲಿ: ಲಾಕ್‍ಡೌನ್‍ನಿಂದ ಜನರು ಕೆಲಸವಿಲ್ಲದೆ ತತ್ತರಿಸಿ ಹೋಗಿದ್ದರು. ಇದೀಗ ಕೇಂದ್ರ ಸರ್ಕಾರ ಕೊರೊನಾ ಲಾಕ್‍ಡೌನ್‍ನಿಂದ ಬಿಗ್ ರಿಲೀಫ್ ಘೋಷಿಸಿದೆ.
ಕೇಂದ್ರ ಸರ್ಕಾರ ಎಲ್ಲ ರೀತಿಯ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದೆ. ಇಲ್ಲಿವರೆಗೆ ಕೇವಲ ಅಗತ್ಯ ವಸ್ತು ಮಾರುವ ಅಂಗಡಿಗಳಷ್ಟೇ ಅನುಮತಿ ನೀಡಲಾಗಿತ್ತು. ಈಗ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದ ಅಂಗಡಿಗಳನ್ನೂ ತೆರೆಯಲು ಅನುಮತಿ ನೀಡಿದೆ.
Advertisement
Advertisement
ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳ ಕಾಯ್ದೆಯಡಿ ಬರುವ ಅಂಗಡಿಗಳು ತೆರೆಯಬಹುದು. ಈ ಕಾಯ್ದೆಯಡಿ ಪರವಾನಿಗೆ ಪಡೆದಿರುವ ಎಲ್ಲ ಅಂಗಡಿಗಳನ್ನು ಇವತ್ತಿನಿಂದ ತೆರೆಯಬಹುದು ಎಂದು ಕೇಂದ್ರ ಗೃಹ ಸಚಿವಾಲಯದಿಂದ ಮಹತ್ವದ ಆದೇಶವನ್ನು ಹೊರಡಿಸಿದೆ. ಆದರೆ ಅಂಗಡಿಗಳನ್ನು ತೆರೆಯಲು ಕೇಂದ್ರ ಸರ್ಕಾರ ಕೆಲವು ಷರತ್ತುಗಳನ್ನು ಹಾಕಿದೆ.
Advertisement
1. ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಮಳಿಗೆ ಕಾಯ್ದೆಯಡಿ ಪರವಾನಿಗೆ ಪಡೆದಿರುವ ಅಂಗಡಿಗಳು, ಅಗತ್ಯ ವಸ್ತು ಮಾರುವ ಅಂಗಡಿಗಳನ್ನು ಜೊತೆಗೆ ಉಳಿದ ಅಂಗಡಿಗಳಿಗೂ ಅನುಮತಿ.
2. ಪಾಲಿಕೆ, ನಗರಸಭೆ ವ್ಯಾಪ್ತಿಯಲ್ಲಿ ಜನವಸತಿ ಮಳಿಗೆಯಲ್ಲಿರುವ ಅಂಗಡಿಗಳಿಗಷ್ಟೇ ಅನುಮತಿ ನೀಡಲಾಗಿದೆ. ಈ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳಲ್ಲಿ ಇರುವ ಅಂಗಡಿಗಳನ್ನು ತೆರೆಯುವಂತಿಲ್ಲ.
3. ವಸತಿ ಕಾಂಪ್ಲೆಕ್ಸ್, ವಾಣಿಜ್ಯ ಮಳಿಗೆಗಳಲ್ಲಿರುವ ಅಂಗಡಿ, ಪಾಲಿಕೆ, ನಗರಸಭೆ ಹೊರಗೆ ಎರಡೂ ಮಳಿಗೆಗಳಲ್ಲಿ ಬರುವ ಅಂಗಡಿಗಳಿಗೆ ಅನುಮತಿ.
Advertisement
4. ಸಿಂಗಲ್‍ಬ್ರ್ಯಾಂಡ್, ಮಲ್ಟಿಬ್ರ್ಯಾಂಡ್ ಮಳಿಗೆಗಳು, ಮಾಲ್‍ಗಳಿಗೆ ಅನುಮತಿ ಇಲ್ಲ. ಇವುಗಳಿಗೆ ಲಾಕ್‍ಡೌನ್‍ನಿಂದಲೂ ವಿನಾಯಿತಿ ಇಲ್ಲ.
5. ತೆರೆಯುವ ಅಂಗಡಿಗಳಲ್ಲಿ ಶೇ. 50ರಷ್ಟೇ ನೌಕರರು ಕೆಲಸ ಮಾಡಬೇಕು.
6. ಅಲ್ಲದೇ ಕೆಲಸ ಮಾಡುವಾಗ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವು ಕಡ್ಡಾಯ.
7. ಕಂಟೈನ್‍ಮೆಂಟ್ ಝೋನ್‍ಗಳಿಗೆ ಅಂಗಡಿ ತೆರೆಯುವ ವಿನಾಯಿತಿ ಅನ್ವಯಿಸಲ್ಲ.
ಈಗಾಗಲೇ ರಾಜ್ಯ ಸರ್ಕಾರವೂ ಕೂಡ ಕೆಲವು ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿತ್ತು. ಈಗ ಕೇಂದ್ರ ಸರ್ಕಾರವೂ ಅಧಿಕೃತವಾಗಿ ಎಲ್ಲ ರೀತಿಯ ಅಂಗಡಿಗಳನ್ನು ತೆರೆಯುವಂತೆ ಆದೇಶ ಹೊರಡಿಸಿದೆ.