– 5 ಏರಿಯಾಗಳಲ್ಲಿ ಲಾಕ್‍ಡೌನ್ ವಿಸ್ತರಣೆ
ಬೆಂಗಳೂರು: ಸರ್ಕಾರ ಮಹಾಮಾರಿ ಕೊರೊನಾ ವೈರಸ್ ಅನ್ನು ಹೊಡೆದೊಡಿಸಲು ಲಾಕ್‍ಡೌನ್ ಅಸ್ತ್ರವನ್ನು ಪ್ರಯೋಗಿಸಿದೆ. ಈ ಲಾಕ್‍ಡೌನ್ ಇಡೀ ದೇಶಾದ್ಯಂತ 3ರವರೆಗೂ ಮುಂದುವರಿಯಲಿದೆ. ಆದರೆ ಸಿಲಿಕಾನ್ ಸಿಟಿಗೆ ಮಾತ್ರ ಲಾಕ್‍ಡೌನ್‍ನಿಂದ ಮೇ 3ರಂದು ರಿಲೀಫ್ ಇಲ್ಲ.
ರಾಜ್ಯದಲ್ಲೇ ಅತೀ ಹೆಚ್ಚು ಪ್ರಕರಣಗಳು ರಾಜಧಾನಿ ಬೆಂಗಳೂರಲ್ಲಿ ದಾಖಲಾಗಿವೆ. ಈ ಕೊರೊನಾ ಪಾಸಿಟಿವ್ ಪ್ರಕರಣಗಳ ನಿಯಂತ್ರಣಕ್ಕೆ ಬಿಬಿಎಂಪಿ 19 ಕಂಟೈನ್‍ಮೆಂಟ್ ಝೋನ್‍ಗಳೆಂದು ವಿಂಗಡಿಸಿ, ಬಿಗಿ ಭದ್ರತೆ ಒದಗಿಸುತ್ತಿದೆ. ಆದರೆ ಈ ಕಂಟೈನ್‍ಮೆಂಟ್ ಝೋನ್‍ಗಳು ನಾರ್ಮಲ್ ಸ್ಥಿತಿಗೆ ಬರುವ ದಿನಾಂಕವನ್ನು ಬಿಬಿಎಂಪಿ ಹೊರಡಿಸಿದ್ದು, ಕೆಲ ಏರಿಯಾಗಳಲ್ಲಿ ಈ ಅವಧಿ ಮೇ 3ಕ್ಕಿಂತ ವಿಸ್ತರಣೆ ಆಗಿದೆ.
Advertisement
Advertisement
ಕ್ವಾರಂಟೈನ್ ಅವಧಿ ಅಂತ್ಯವಾಗುವವರೆಗೆ ಕಂಟೈನ್‍ಮೆಂಟ್ ಝೋನ್‍ಗೆ ರಿಲೀಫ್ ಇಲ್ಲವೆಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.
1. ಪಾದರಾಯನಪುರ – ಮೇ 16
2. ಆರ್‍ಆರ್ ನಗರ – ಮೇ 11
3. ಬೊಮ್ಮನಹಳ್ಳಿ – ಮೇ 11
4. ಸುಧಾಮನಗರ – ಮೇ 10
5. ರಾಧಾಕೃಷ್ಣ ವಾರ್ಡ್ – ಮೇ 9
Advertisement
Advertisement
ಬಿಬಿಎಂಪಿ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಂಡಿದ್ದು, ಸೋಂಕಿತರ ಪ್ರಾಥಮಿಕ, ಸೆಕೆಂಡರಿ ಕಾಂಟ್ಯಾಕ್ಟ್‍ನ ಕ್ವಾರಂಟೈನ್ ಅವಧಿ ಮೇಲೆ ನಿರ್ಧಾರವಾಗಲಿದೆ.
ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಮೇಯರ್ ಗೌತಮ್ ಕುಮಾರ್ ಹಾಗೂ ಕಮೀಷನರ್ ಅನಿಲ್ ಕುಮಾರ್, ಕ್ವಾರಂಟೈನ್ ಆದ 28 ದಿನಗಳಲ್ಲಿ ಒಂದೇ ಒಂದು ಕೇಸ್ ಪಾಸಿಟಿವ್ ಬಂದರೂ ಸೀಲ್‍ಡೌನ್ ಮುಂದುವರಿಸುತ್ತೇವೆ ಎಂದಿದ್ದಾರೆ.