– ಸೋಂಕಿತರ ಸಂಖ್ಯೆ 503ಕ್ಕೇರಿಕೆ
ಬೆಂಗಳೂರು: ಇಂದು ರಾಜ್ಯದಲ್ಲಿ ಹೊಸತಾಗಿ ಕೇವಲ 3 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 503ಕ್ಕೆ ಏರಿದೆ.
ಈ ಮಧ್ಯೆ ರೋಗಿ-465 ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ನಗರ ನಿವಾಸಿ 45 ವರ್ಷದ ಮಹಿಳೆ ತೀವ್ರ ಉಸಿರಾಟದ ತೊಂದರೆ ಹಾಗೂ ನಿಮೋನಿಯಾ ಹಿನ್ನೆಲೆ ಬೆಂಗಳೂರಿನ ನಿಗದಿತ ಆಸ್ಪತ್ರಗೆ ಏಪ್ರಿಲ್ 24ರಂದು ದಾಖಲಾಗಿದ್ದರು. ಇವರಿಗೆ ಮಧುಮೇಹ ಸಮಸ್ಯೆ ಕೂಡ ಇದ್ದು, ಈ ಹಿಂದೆ ಕ್ಷಯರೋಗ ಇತ್ತು ಎಂದು ವೈದ್ಯಕೀಯ ದಾಖಲೆ ಇದೆ. ಇಂದು ರೋಗಿ-465 ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿ
Advertisement
Advertisement
ಸೋಂಕಿತರ ಮಾಹಿತಿ:
ರೋಗಿ-501: ಪಾಣೆ ಮಂಗಳೂರು, ದಕ್ಷಿಣ ಕನ್ನಡದ 47 ವರ್ಷದ ಮಹಿಳೆ. ರೋಗಿ-432 ಜೊತೆ ಸಂಪರ್ಕ.
ರೋಗಿ-502: ಕಲಬುರಗಿಯ 65 ವರ್ಷದ ವೃದ್ಧೆ. ರೋಗಿ-422 ಜೊತೆ ಸಂಪರ್ಕ.
ರೋಗಿ-503: ಕಲಬುರಗಿಯ 7 ವರ್ಷದ ಬಾಲಕ. ರೋಗಿ-425 ಜೊತೆ ದ್ವಿತೀಯ ಸಂಪರ್ಕ.
Advertisement
Advertisement
ಇಂದು ಆಸ್ಪತ್ರೆಯಿಂದ ಒಟ್ಟು 24 ಮಂದಿ ಬಿಡುಗಡೆಗೊಂಡಿದ್ದಾರೆ. ಬೆಂಗಳೂರು ನಗರದಲ್ಲಿ 8 , ಮೈಸೂರಿನಲ್ಲಿ 4 , ಬಾಗಲಕೋಟೆಯಲ್ಲಿ 4, ಮಂಡ್ಯದಲ್ಲಿ 4, ಬೆಳಗಾವಿಯಲ್ಲಿ 4, ಬಳ್ಳಾರಿಯಲ್ಲಿ 2 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ಕರ್ನಾಟಕದಲ್ಲಿ ಪತ್ತೆಯಾಗಿರುವ ಸೋಂಕಿತ ಪ್ರಕರಣದಲ್ಲಿ 9 ಮಂದಿ ಕೇರಳದವರಾಗಿದ್ದಾರೆ. ಇವರನ್ನು ಕರ್ನಾಟದ ವಿಮಾನ ನಿಲ್ದಾಣದ ಮೂಲಕ ಕೇರಳಕ್ಕೆ ಪ್ರಯಾಣಿಸುತ್ತಿರುವಾಗ ಪತ್ತೆ ಮಾಡಿ, ಇಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
ಕರ್ನಾಟಕದಲ್ಲಿ ಸದ್ಯ 302 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ. ಇವರಲ್ಲಿ ಓರ್ವ ಗರ್ಭಿಣಿ ಸೇರಿ ಒಟ್ಟು 296 ಮಂದಿ ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 6 ಮಂದಿ ಸ್ಥಿತಿ ಗಂಭಿರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದಾರೆ.