– ಜನರೇ ಸ್ವಯಂ ಕರ್ಫ್ಯೂ ವಿಧಿಸಿಕೊಳ್ಳಬೇಕು
– ಅದಷ್ಟು ಜನ ಮನೆಯಲ್ಲಿರಿ, ಹೊರಗಡೆ ಬರಬೇಡಿ
– ವೈದ್ಯರು, ನರ್ಸ್‍ಗಳು, ಮಾಧ್ಯಮಗಳಿಗೆ ಧನ್ಯವಾದ
ನವದೆಹಲಿ: ಜನರಿಂದ, ಜನರಿಗಾಗಿ, ಜನರಿಗೋಸ್ಕರ ಜನರೇ ಈ ಭಾನುವಾರ ಸ್ವಯಂ ಕರ್ಫ್ಯೂ ವಿಧಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ದೇಶದ ಪ್ರಜೆಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕೊರೊನಾ ವೈರಸ್ ದೇಶವ್ಯಾಪಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ 8 ಗಂಟೆಗೆ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಇಂದು ಪರಿಸ್ಥಿತಿ ಎರಡನೇ ಮಹಾಯುದ್ಧದ ಸನ್ನಿವೇಶಕ್ಕಿಂತ ಗಂಭೀರವಾಗಿದೆ. ಮುಂದಿನ ಕೆಲವು ವಾರ ಮನೆಯಿಂದ ಹೊರಗೆ ಬರಬೇಡಿ. ಈ ವೇಳೆ ಭಾನುವಾರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ದೇಶದ ಜನತೆ ಮನೆಯಲ್ಲಿ ಇರಬೇಕು. ಈ ಅವಧಿಯಲ್ಲಿ ಯಾರು ಹೊರಗಡೆ ಓಡಾಡಬೇಡಿ ಎಂದು ಮನವಿ ಮಾಡಿಕೊಂಡರು.
Advertisement
Prime Minister Narendra Modi: Govt has decided to constitute COVID-19 Economic Response Task Force under Finance Minister. The task force will remain in regular touch with all stakeholders, take their feedback and make decisions accordingly. #Coronavirus https://t.co/nlaoRRXAUi
— ANI (@ANI) March 19, 2020
Advertisement
ಜನರೇ ವಿಧಿಸುವ ಕರ್ಫ್ಯೂ ಯಶಸ್ವಿಯಾಗಲು ಎನ್‍ಸಿಸಿ, ಎನ್‍ಎಸ್‍ಎಸ್ ಸೇರಿದಂತೆ ಸ್ವಯಂ ಸೇವಾ ಸಂಘಟನೆಗಳು, ಧಾರ್ಮಿಕ ಸಂಘಟನೆಗಳು ಕನಿಷ್ಟ 10 ಜನರಿಗೆ ತಿಳಿಸಬೇಕು. ಇದು ಭಾರತದ ಮಟ್ಟಿಗೆ ದೊಡ್ಡ ಪರೀಕ್ಷೆ ಎಂದರು.
Advertisement
Advertisement
PM:For last 2 months,millions are working day&night in hospitals&airports&those serving others by not taking care of themselves.On Mar22,at 5'o clock,we should stand on our doorways,balconies,in our windows&keep clapping hands&ringing the bells for 5 mins to salute&encourage them pic.twitter.com/qRtrV3fy7e
— ANI (@ANI) March 19, 2020
ಕೊರೊನಾಗೆ ಔಷಧಿ ಇಲ್ಲ. ಹೀಗಾಗಿ ನಾವು ಜಾಗ್ರತೆಯಿಂದ ಇರಲು ಸಂಕಲ್ಪ ಮತ್ತು ಸಂಯಮ ಬಹಳ ಮುಖ್ಯ. ಸ್ವಯಂ ಸಂಕಲ್ಪದಿಂದ ನಾವು ಮಹಾಮಾರಿಯನ್ನು ಹೊಡೆದೋಡಿಸಬಹುದು. ದೇಶದಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣ ವೈರಸ್ ಸೋಕದೇ ಇರಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ ಎಂದು ಪ್ರಧಾನಿ ಮೋದಿ ಹೇಳಿದರು.
ಮುಂದಿನ ಕೆಲವು ವಾರ ತುರ್ತು ಸಂದರ್ಭ, ಅಗತ್ಯ ಸಂದರ್ಭ ಹೊರತುಪಡಿಸಿ ಮನೆಯಿಂದ ಹೊರಗೆ ಬರಬೇಡಿ. ನಿಮಗೆ ನೀವು ಸ್ವಯಂ ಗೃಹ ನಿರ್ಬಂಧ ವಿಧಿಸಿಕೊಳ್ಳಿ. ಆದರಲ್ಲೂ 65 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರಗೆ ಬರಲೇಬೇಡಿ ಎಂದು ನಿರ್ದೇಶನ ನೀಡಿದರು.
Prime Minister Narendra Modi: I request the countrymen to avoid visiting hospitals for routine check ups. If you have appointment for any non-essential surgery, please postpone for one month. We should keep in mind that pressure should not come on hospitals. #Coronavirus pic.twitter.com/mQt5aIIMD3
— ANI (@ANI) March 19, 2020
ವೈದ್ಯರು, ನರ್ಸ್, ಮಾಧ್ಯಮ ಸೇರಿದಂತೆ ಕೊರೊನಾ ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ ಭಾನುವಾರ ಸಂಜೆ 5 ಗಂಟೆಗೆ ಮನೆಯಲ್ಲೇ ನಿಂತು ವಂದನೆ ಸಲ್ಲಿಸಬೇಕು. ಕೊರೊನಾ ಬಂದಿದ್ದಕ್ಕೆ ನಾವು ಎದೆಗುಂದಬೇಕಿಲ್ಲ .ಆತಂಕ ಪಡಬೇಕಿಲ್ಲ. ಆದರೆ ಕೊರೊನಾ ವಿರುದ್ಧದ ಕದನವನ್ನು ಇನ್ನೂ ಕೆಲವು ವಾರ ಮಾಡಬೇಕಾಗುತ್ತದೆ. ಇದಕ್ಕಾಗಿ ನಿಮ್ಮ ಸಹಕಾರ, ಸಮಯ ಬೇಕಿದೆ. ಮುಂಬರುವ ಕೆಲ ದಿನಗಳನ್ನು ನಮಗೆ ನೀಡಿ. ಕೆಲವೊಂದು ತ್ಯಾಗಗಳಿಗೆ ಜನತೆ ಸಿದ್ದರಾಬೇಕಿದೆ ಎಂದು ಕರೆ ನೀಡಿದರು.