ವಾಷಿಂಗ್ಟನ್: ವಿಶ್ವಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 20 ಲಕ್ಷದ ಗಡಿ ತಲುಪಿದ್ದು, ಅಮೆರಿಕ ಮತ್ತು ಇಟಲಿಯಲ್ಲಿ ಅತೀ ಹೆಚ್ಚು ಸೋಂಕಿತ ಪ್ರಕರಣ ವರದಿಯಾಗಿದೆ. ಈ ಎರಡು ರಾಷ್ಟ್ರಗಳಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಜಗತ್ತಿನಾದ್ಯಂತ 19,25,853 ಮಂದಿಗೆ ಸೋಂಕು ತಗುಲಿದ್ದು, ಈವರೆಗೆ 1,19,719 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಹಾಗೆಯೇ 4,52,333 ಮಂದಿ ಗುಣಮುಖರಾಗಿದ್ದಾರೆ. ದಿನೇ ದಿನೇ ವಿಶ್ವದೆಲ್ಲೆಡೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೊರೊನಾ ಅಟ್ಟಹಾಸಕ್ಕೆ ಬಲಿಷ್ಠ ರಾಷ್ಟ್ರಗಳೇ ತತ್ತರಿಸಿ ಹೋಗಿದೆ.
Advertisement
Advertisement
ಅಮೆರಿಕದಲ್ಲಿ ಈವರೆಗೆ 23,644 ಮಂದಿಯನ್ನು ಕೊರೊನಾ ಬಲಿ ಪಡೆದಿದೆ. ಇತ್ತ ಇಟಲಿಯಲ್ಲಿ 20,465 ಮಂದಿ ಸೋಂಕಿನಿಂದ ಬಳಲಿ ಸಾವನ್ನಪ್ಪಿದ್ದಾರೆ. ಹಾಗೆಯೇ ಸ್ಪೇನ್‍ನಲ್ಲಿ 17,756 ಮಂದಿ ಮೃತಪಟ್ಟಿದ್ದು, ಫ್ರಾನ್ಸ್ ನಲ್ಲಿ 14,967 ಮಂದಿ ಕೊರೊನಾದಿಂದ ಅಸುನೀಗಿದ್ದಾರೆ.
Advertisement
Advertisement
ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಈ ಮಹಾಮಾರಿ ವಿಶ್ವದೆಲ್ಲೆಡೆ ಹರಡಿದೆ. ಚೀನಾದಲ್ಲಿ ಸದ್ಯ ಕೊರೊನಾ ವೈರಸ್ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದೆ. ಆದರೆ ಅಮೆರಿಕದಲ್ಲಿ ವೇಗವಾಗಿ ಸೋಂಕು ಹರಡುತ್ತಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈವರೆಗೆ ಅಮೆರಿಕದಲ್ಲಿ 5,87,173 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 36,948 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.
ಸ್ಪೇನ್‍ನಲ್ಲಿ 1,70,099 ಮಂದಿಗೆ ಸೋಂಕು ತಗುಲಿದ್ದು, 64,727 ಮಂದಿ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಇತ್ತ ಇಟಲಿಯಲ್ಲಿ 1,59,516 ಮಂದಿಗೆ ಸೋಂಕು ತಟ್ಟಿದ್ದು, 35,435 ಮಂದಿ ಗುಣವಾಗಿದ್ದಾರೆ. ಹಾಗೆಯೇ ಫ್ರಾನ್ಸ್ ನಲ್ಲಿ 1,36,779 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 27,718 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಇತ್ತ ಭಾರತದಲ್ಲಿ ಸೋಂಕಿತರ ಸಂಖ್ಯೆ 10,541ಕ್ಕೆ ಏರಿದ್ದು, 1,205 ಮಂದಿ ಕೊರೊನಾದಿಂದ ಗುಣವಾಗಿದ್ದಾರೆ. ಹಾಗೆಯೇ ಈವರೆಗೆ 358 ಮಂದಿ ಮಹಾಮಾರಿಗೆ ಬಲಿಯಾಗಿದ್ದು, 8,978 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಹೀಗಾಗಿ ದೇಶದಲ್ಲಿ ಹರಡುತ್ತಿರುವ ಕೊರೊನಾ ವೈರಸ್ ಅನ್ನು ತಡೆಗಟ್ಟಲು ಮೇ 3ರವರೆಗೆ ಭಾರತದಲ್ಲಿ ಲಾಕ್‍ಡೌನ್ ಅನ್ನು ಮುಂದೂಡಲಾಗಿದೆ.
ನೆರೆಯ ಪಾಕಿಸ್ತಾನದಲ್ಲಿ 5,716 ಮಂದಿಗೆ ಸೋಂಕು ತಗುಲಿದ್ದು, 1,378 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಪಾಕಿಸ್ತಾನದಲ್ಲಿ 96 ಮಂದಿ ಸಾವನ್ನಪ್ಪಿದ್ದಾರೆ.