– ಸೋಂಕಿತರ ಸಂಖ್ಯೆ 4500ಕ್ಕೆ ಏರಿಕೆ
– 25 ಸಾವಿರ ಜಮಾತ್ ಸಭೆ ಸಂಪರ್ಕಿತರ ಕ್ವಾರಂಟೈನ್
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಮತ್ತಷ್ಟು ತೀವ್ರವಾಗಿದೆ. ಸೋಂಕಿತರ ಸಂಖ್ಯೆ 4502ಕ್ಕೆ ಏರಿದ್ದು, ಸಾವಿನ ಸಂಖ್ಯೆ 129 ಆಗಿದೆ.
ದೇಶದಲ್ಲಿ ಒಂದೇ ದಿನ 693 ಮಂದಿಗೆ ಸೋಂಕು ದೃಢವಾಗಿದ್ದು, 24 ಗಂಟೆಯಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆ. 291 ಜನ ಸೋಂಕಿನಿಂದ ಗುಣ ಮುಖರಾಗಿದ್ದಾರೆ. 1,445 ಕೇಸ್‍ಗಳು ಜಮಾತ್‍ಗೆ ಸಂಬಂಧಿಸಿದ್ದು, ತಬ್ಲಿಘಿಗಳು ಮತ್ತು ಅವರ ಸಂಪರ್ಕದಲ್ಲಿರುವ 25,500 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಜೊತೆಗೆ 1,750 ತಬ್ಲಿಘಿ ಕಾರ್ಯಕರ್ತರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
Advertisement
Advertisement
ಕೊರೊನಾಗೆ ಬಲಿಯಾದವರ ಪೈಕಿ ಶೇ.63ರಷ್ಟು 60 ವರ್ಷ ಮೇಲ್ಪಟ್ಟವರೇ ಆಗಿದ್ದಾರೆ. ಸೋಂಕಿತರ ಪೈಕಿ ಶೇ.76 ರಷ್ಟು ಪುರುಷರು, ಶೇ.24 ರಷ್ಟು ಮಹಿಳೆಯರು ಇದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ವಿವರ ನೀಡಿದೆ.
Advertisement
ಇದೇ ವೇಳೆ 5 ಲಕ್ಷ ರ‍್ಯಾಪಿಡ್ ಟೆಸ್ಟ್ ಕಿಟ್‍ಗಳಿಗೆ ಆರ್ಡರ್ ಮಾಡಲಾಗಿದ್ದು, 2.5 ಲಕ್ಷ ಕಿಟ್‍ಗಳು ಈ ತಿಂಗಳಲ್ಲಿ ಬರಲಿವೆ ಅಂತ ಐಸಿಎಂಆರ್ ಹೇಳಿದೆ. ಮುಂಬೈನ ವೋಕ್ಹಾರ್ಡ್ ಆಸ್ಪತ್ರೆಯ 26 ನರ್ಸ್ ಗಳು, ಮೂವರು ವೈದ್ಯರಿಗೆ ಕೊರೊನಾ ಸೋಂಕಾಗಿದ್ದು, ಆಸ್ಪತ್ರೆಯನ್ನೇ ಬಂದ್ ಮಾಡಲಾಗಿದೆ.
Advertisement
ಯಾವ ರಾಜ್ಯದಲ್ಲಿ ಎಷ್ಟು ಸೋಂಕಿತರು?
ಮಹಾರಾಷ್ಟ್ರ 781 (33 ಏರಿಕೆ)
ತಮಿಳುನಾಡು 621 (50 ಏರಿಕೆ)
ದೆಹಲಿ 523 (23 ಏರಿಕೆ)
ಕೇರಳ 327 (13 ಏರಿಕೆ)
ಉತ್ತರ ಪ್ರದೇಶ 305 (27 ಏರಿಕೆ)
ಈ ಮಧ್ಯೆ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್, ಕೊರೊನಾ ಸೋಂಕಿನಿಂದ ಚೇತರಿಕೆ ಕಂಡಿದ್ದು ಡಿಸ್ಚಾರ್ಜ್ ಆಗಿದ್ದಾರೆ. 6ನೇ ಬಾರಿ ನಡೆಸಿದ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.