ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ನಗರ ಇಂದಿಗೆ ಕೊರೊನಾ ವೈರಸ್ ಮುಕ್ತ ನಗರವಾಗಿದೆ.
ಅಂದಹಾಗೆ ಜಿಲ್ಲೆಯ ಗೌರಿಬಿದನೂರಿನಲ್ಲಿ ಮೊಟ್ಟ ಮೊದಲ ಕೊರೊನಾ ಸೋಂಕಿತ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಗೌರಿಬಿದನೂರು ನಗರ ಕೊರೊನಾ ಹರಡುವ ಹಾಟ್‍ಸ್ಪಾಟ್ ಕೇಂದ್ರ ಬಿಂದುವಾಗಿತ್ತು. ಸದ್ಯ ಜಿಲ್ಲೆಯಲ್ಲಿ 17 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಅದರಲ್ಲಿ 11 ಮಂದಿ ಗೌರಿಬಿದನೂರಿನವರೇ ಆಗಿದ್ದರು. ಆದರೆ ಇಂದಿಗೆ ಗೌರಿಬಿದನೂರಿನ 11 ಮಂದಿ ಸಹ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
Advertisement
Advertisement
ಇಂದು ಗೌರಿಬಿದನೂರಿನ ರೋಗಿ 180 ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್ 19 ಆಸ್ಪತ್ರೆಯಿದ ಡಿಸ್ಚಾರ್ಜ್ ಆಗಿದ್ದಾರೆ. ಗೌರಿಬಿದನೂರಿನ 11 ಮಂದಿ ಸಹ ಇಂದಿಗೆ ಗುಣಮುಖರಾಗಿದ್ದು, ಈ ಮೂಲಕ ಗೌರಿಬಿದನೂರು ಕೊರೊನಾ ಮುಕ್ತವಾಗಿದೆ. ಹೀಗಾಗಿ ಸದ್ಯ ಸೀಲ್‍ಡೌನ್‍ನಲ್ಲಿದ್ದ ಗೌರಿಬಿದನೂರು ನಗರವನ್ನ ಇಂದಿನಿಂದ ಲಾಕ್‍ಡೌನ್ ಹಂತಕ್ಕೆ ಇಳಿಸಲಾಗುತ್ತಿದೆ ಎನ್ನಲಾಗಿದೆ.
Advertisement
ಪ್ರತಿದಿನ ಬೆಳಗ್ಗೆ ದಿನಸಿ, ತರಕಾರಿ ಖರೀದಿಗೆ ಜನಸಾಮಾನ್ಯರು ಮನೆಯಿಂದ ಹೊರಬರಲು ಅವಕಾಶ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 17 ಮಂದಿಯಲ್ಲಿ 11 ಮಂದಿ ಡಿಸ್ಚಾರ್ಜ್ ಆಗಿದ್ದಾರೆ, ಇಬ್ಬರು ಮೃತಪಟ್ಟಿದ್ದು, 4 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ 4 ಮಂದಿ ಸಹ ಚಿಕ್ಕಬಳ್ಳಾಪುರ ನಗರದವರು.