ನವದೆಹಲಿ: ಹೋಮ್ ಕ್ವಾರೆಂಟೈನ್‍ಗಳೊಂದಿಗೆ ಕೆಲವರು ಕೆಟ್ಟದಾಗಿ ವರ್ತಿಸುತ್ತಿದ್ದಾರೆಂದು ತಿಳಿದಾಗ ನನಗೆ ತುಂಬಾ ನೋವಾಯಿತು. ನಾವು ಸೂಕ್ಷ್ಮ ಮತ್ತು ತಿಳುವಳಿಕೆ ಹೊಂದಬೇಕಿದೆ. ಸಾಮಾಜಿಕ ದೂರವನ್ನು ಹೆಚ್ಚಿಸಿ. ಆದರೆ ಭಾವನಾತ್ಮಕ ದೂರವನ್ನು ಕಡಿಮೆ ಮಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ.
ಕೊರೊನಾ ವಿಚಾರದ ಬಗ್ಗೆ ಮನ್ ಕೀ ಬಾತ್‍ನಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ತಡೆಯಲು ಸಂಪರ್ಕತಡೆಯನ್ನು ಮಾಡಬೇಕಾಗಿದೆ. ಆದರೆ ಹೋಮ್ ಕ್ವಾರೆಂಟೈನ್‍ನಲ್ಲಿರುವವನ್ನು ಕೆಟ್ಟದಾಗಿ ಕಾಣಬೇಡಿ. ಅವರು ಅನಿವಾರ್ಯವಾಗಿ ಕೆಲವು ದಿನಗಳ ಕಾಲ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ಅವರೊಂದಿಗೆ ನಾವು ಭಾವನಾತ್ಮಕ ಸಂಬಂಧವನ್ನು ಕಾಪಾಡಿಕೊಳ್ಳಬೇಕು. ಇದು ಸಂಬಂಧಗಳನ್ನು ಪುನಶ್ಚೇತನಗೊಳಿಸುವ ಸಮಯವಾಗಿದೆ ಎಂದು ತಿಳಿಸಿದರು.
Advertisement
I was extremely hurt when I came to know that some people are misbehaving with those who are being advised home quarantine. We need to be sensitive and understanding. Increase social distancing but reduce emotional distancing: PM Narendra Modi #Mannkibaat #Coronavirus pic.twitter.com/tRNfS5gMKI
— ANI (@ANI) March 29, 2020
Advertisement
ಮನೆಗಳಲ್ಲಿ ಉಳಿಯುವಂತೆ ನಿಮ್ಮಲ್ಲಿ ಮನವಿ ಮಾಡಿಕೊಂಡೆ. ಆದರೆ ನಿಮ್ಮ ಮನಸ್ಸನ್ನು ಅದನ್ನು ಕೇಳುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಾವು ಲಾಕ್‍ಡೌನ್ ಎಂಬ ಲಕ್ಷ್ಮಣ ರೇಖೆಯನ್ನು ಪಾಲಿಸಲೇಬೇಕಿದೆ. ನಾನು ಫಿಟ್‍ನೆಸ್ ತರಬೇತುದಾರನಲ್ಲ. ಆದರೆ ಕೆಲವು ಯೋಗಗಳಿಂದ ಬಲಿಷ್ಠವಾಗಿದ್ದೇನೆ ಎಂದರು.
Advertisement
ಸಹಾಯ ಮಾಡಿ:
ದೇಶಾದ್ಯಂತ ಲಾಕ್‍ಡೌನ್‍ನಿಂದಾಗಿ ಬಡವನು ಹಸಿವಿನಿಂದ ಕಂಗೆಟ್ಟಿದ್ದಾರೆ ಅಥವಾ ಬಿಕ್ಕಟ್ಟಿಗೆ ಸಿಲುಕಿದ್ದಾರೆ. ದಯವಿಟ್ಟು ಅಂಥವರ ಸಹಾಯ ನಿಲ್ಲಿ. ಇಂದು ದೇಶವನ್ನು ಉಳಿಸಲು ನಾವು ಜಾತಿ, ಧರ್ಮ, ಮೇಲೂ, ಕೀಳು ಎಂಬ ಎಲ್ಲಾ ಗೋಡೆಗಳನ್ನು ಮುರಿಯಬೇಕಾಗಿದೆ. ನೀವು ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ. ನಾವು ಈ ಯುದ್ಧವನ್ನು ಗೆಲ್ಲಬೇಕಿದೆ. ನಾನು ನಿಮಗೆ ಶುಭ ಹಾರೈಸುತ್ತೇನೆ ಎಂದು ತಿಳಿಸಿದರು.