ಬೆಂಗಳೂರು: ದೇಶದಲ್ಲಿ ಕೊರೊನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದೆ. ಸರ್ಕಾರ ಏನೇ ಕಠಿಣ ಕ್ರಮ ತೆಗೆದುಕೊಂಡು ಜನರು ಮನೆಯಿಂದ ಹೊರ ಬಂದು ಓಡಾಡುತ್ತಿದ್ದಾರೆ. ಆದ್ದರಿಂದ ಕೊರೊನಾ ಹಬ್ಬುವಿಕೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹೋಮ್ ಕ್ವಾರಂಟೈನ್‍ನಲ್ಲಿರುವವರ ಮೇಲೆ ನಿಗಾ ಬಿಗಿಗೊಳಿಸಿದೆ.
ಈಗಾಗಲೇ ಕ್ವಾರಂಟೈನ್‍ನಲ್ಲಿರುವವರು ಕೊರೊನಾ ವಾಚ್ ಮೊಬೈಲ್ ಆಪ್ ಡೌನ್‍ಲೋಡ್ ಮಾಡಬೇಕೆಂದು ಸರ್ಕಾರ ಕಡ್ಡಾಯ ಮಾಡಿದೆ. ಇದೀಗ ಪ್ರತಿ ಗಂಟೆಗೆ ಒಮ್ಮೆ ತಮ್ಮ ಫೋಟೋಗಳನ್ನು ಈ ಆಪ್‍ನಲ್ಲಿ ಅಪ್ಲೋಡ್ ಮಾಡುವಂತೆ ಸರ್ಕಾರ ಖಡಕ್ ಸೂಚನೆ ಕೊಟ್ಟಿದೆ.
Advertisement
Advertisement
ಹೋಮ್ ಕ್ವಾರಂಟೈನ್‍ನಲ್ಲಿರುವವರು ಪ್ರತಿ ಗಂಟೆಗೊಮ್ಮೆ ತಮ್ಮ ಫೋಟೋಗಳನ್ನು ಕೊರೊನಾ ವಾಚ್ ಆಪ್‍ನಲ್ಲಿ ಅಪ್ಲೋಡ್ ಮಾಡಬೇಕು. ಫೊಟೋ ಜೊತೆಗೆ ಲೊಕೇಶನ್ ಸಹ ಕಳಿಸುವುದು ಕಡ್ಡಾಯ. ಒಂದು ವೇಳೆ ಫೋಟೋ ಕಳಿಸದಿದ್ದರೆ ಅಥವಾ ಬೇರೆ ಕಡೆ ಇದ್ದು ಮನೆಯೊಳಗಿರುವ ಹಳೆಯ ಫೋಟೋ ಕಳಿಸಿದರೆ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದೆ.
Advertisement
ಈ ಸೂಚನೆ ಪಾಲಿಸದವರನ್ನು ಮಾಸ್ ಕ್ವಾರಂಟೈನ್‍ಗೆ ಕಳಿಸುವ ಬಗ್ಗೆ ಸರ್ಕಾರ ಎಚ್ಚರಿಕೆ ನೀಡಿದೆ. ಅಲ್ಲದೇ ಈ ಸೂಚನೆ ಪಾಲಿಸದಿದ್ದರೆ ಕೂಡಲೇ ಅವರ ಮನೆಗೆ ಅಧಿಕಾರಿಗಳು ಬಂದು ಮಾಸ್ ಕ್ವಾರಂಟೈನ್‌ಗೆ ಕರೆದುಕೊಂಡು ಹೋಗುತ್ತಾರೆ ಎಂದು ಖಡಕ್ ಎಚ್ಚರಿಕೆ ನೀಡಿದೆ.