ಬೆಂಗಳೂರು: ದೇಶವೇ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಅನೇಕರು ತಿನ್ನಲೂ ಊಟವಿಲ್ಲದೇ ಪರದಾಡುತ್ತಿದ್ದಾರೆ. ಇತ್ತ ಪೊಲೀಸರು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಈ ಮಧ್ಯೆ ಬಿಗ್‍ಬಾಸ್ ವಿನ್ನರ್ ಶೈನ್ ಶೆಟ್ಟಿ ದಿನಗೂಲಿ ಕಾರ್ಮಿಕರಿಗೆ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಇಡೀ ತಿಂಗಳ ರೇಷನ್ ಮತ್ತು ಬಾಡಿಗೆ ನೀಡುವ ಮೂಲಕ ಸಹಾಯದ ಹಸ್ತ ಚಾಚಿದ್ದಾರೆ. ಇದೀಗ ಜನರ ರಕ್ಷಣೆಗೆ ನಿಂತಿರುವ ಪೊಲೀಸರಿಗೂ ಬಿಗ್‍ಬಾಸ್ ವಿನ್ನರ್ ಸಹಾಯ ಮಾಡುತ್ತಿದ್ದಾರೆ.
Advertisement
ಶೈನ್ ಶೆಟ್ಟಿ ಮತ್ತು ಅವರ ತಂಡದವರು ಸೇರಿಕೊಂಡು ಬೀದಿ ಬದಿ ವ್ಯಾಪಾರಿಗಳಿಗೆ ಮತ್ತು ದಿನಗೂಲಿ ಕಾರ್ಮಿಕರಿಗೆ ದಿನಸಿಯನ್ನು ವಿತರಣೆ ಮಾಡುತ್ತಿದ್ದಾರೆ. ಈ ನಡುವೆ ಪೊಲೀಸರಿಗೂ ದಿನಸಿ, ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಿ ಮಾದರಿಯಾಗಿದ್ದಾರೆ. ಶೈನ್ ಮತ್ತು ಅವರ ತಂಡವರು ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ದಿನಸಿ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ದಿನಗೂಲಿ ಕಾರ್ಮಿಕರಿಗೆ ಬಾಡಿಗೆ, ಇಡೀ ತಿಂಗ್ಳ ರೇಷನ್ ವಿತರಣೆ – ಶೈನ್ ಶೆಟ್ಟಿ
Advertisement
Advertisement
ಈ ವಿಡಿಯೋವನ್ನು ಶೈನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಒಂದು ತಿಂಗಳಿಗೆ ಬೇಕಾಗುವ ಸಾಮಗ್ರಿಗಳನ್ನು ತಂಡದವರ ಜೊತೆ ಸೇರಿಕೊಂಡು ಪ್ಯಾಕ್ ಮಾಡಿದ್ದಾರೆ. ನಂತರ ಕಾರಿನ ಮೂಲಕ ಅದನ್ನು ಅಗತ್ಯವಿರುವವರಿಗೆ ಸಾಗಿಸುತ್ತಿದ್ದಾರೆ ಇದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇದೇ ರೀತಿ ಪೊಲೀಸರಿಗೆ ದಿನಸಿ ನೀಡುವ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.
Advertisement
https://www.instagram.com/p/B-VwMbahQBr/
“ಪೊಲೀಸರು ಜನರ ಆರೋಗ್ಯದ ದೃಷ್ಟಿಯಿಂದ ಹಗಲು-ರಾತ್ರಿ ಎನ್ನದೇ ಕರ್ತವ್ಯ ಮಾಡುತ್ತಿದ್ದಾರೆ. ಅವರ ಸೇವೆಗಳಿಗೆ ನಾವು ಕೃತಜ್ಞತೆ ತೋರಿಸಬೇಕಾಗಿದೆ. ಆದ್ದರಿಂದ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಮತ್ತು ಸುಬ್ರಮಣ್ಯಪುರ ಪೊಲೀಸ್ ಠಾಣೆಗಳಿಗೆ ಹೋಗಿ ರೇಷನ್ ನೀಡಿದ್ದೇವೆ. ಎಷ್ಟೋ ಪೊಲೀಸರು ಹೋಟೆಲ್‍ಗಳಲ್ಲಿ ಊಟ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಹೋಟೆಲ್‍ಗಳನ್ನು ಸ್ಥಗಿತಗೊಳಿಸುವುದರಿಂದ ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪೊಲೀಸ್ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ಅಡುಗೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಅವರಿಗೂ ರೇಷನ್ ನೀಡುತ್ತಿದ್ದೇವೆ. ಜೊತೆಗೆ ಅಗತ್ಯವಿರುವ ಜನರಿಗೂ ದಿನಸಿಯನ್ನು ವಿತರಣೆ ಮಾಡುತ್ತಿದ್ದೇವೆ” ಎಂದು ಬರೆದುಕೊಂಡಿದ್ದಾರೆ.
ಪೊಲೀಸ್ ಸ್ಟೇಷನ್‍ಗೂ ದಿನಸಿ ನೀಡುವ ಮೂಲಕ ಶೈನ್ ಶೆಟ್ಟಿ ಮತ್ತು ತಂಡ, ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತಿದ್ದಾರೆ.