ಕೋಲಾರ: ತಂದೆಯ ಪುಣ್ಯ ತಿಥಿಗಾಗಿ ಕೂಡಿಟ್ಟ ಹಣದಲ್ಲಿ ಪೋಸ್ಟ್ ಮಾಸ್ಟರ್ ಕೊರೊನಾ ಲಾಕ್‍ಡೌನ್‍ನಿಂದ ಕಂಗಾಲಾಗಿರುವ ಬಡವರು, ನಿರ್ಗತಿಕರಿಗೆ ದಿನಸಿ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿ ಮಾದರಿಯಾಗಿದ್ದಾರೆ.
ಕೋಲಾರ ನಗರದ ಗಲ್‍ಪೇಟೆ ನಿವಾಸಿ ಪೋಸ್ಟ್ ಮಾಸ್ಟರ್ ನಾರಾಯಣಸ್ವಾಮಿ ತನ್ನ ತಂದೆ ಬಂಗವಾದಿ ಮುನಿಸ್ವಾಮಿ ಅವರ 13ನೇ ವರ್ಷದ ಪುಣ್ಯ ತಿಥಿ ದಿನ ಆಹಾರ ಪದಾರ್ಥಗಳನ್ನ ವಿತರಣೆ ಮಾಡಿದರು. ಮೂಲತಃ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬಂಗವಾದಿ ಗ್ರಾಮದವರಾದ ಮುನಿಸ್ವಾಮಿ ಅವರು ಕಾಲಾಧೀನರಾಗಿ 13 ವರ್ಷಗಳು ಮುಗಿದಿದೆ.
Advertisement
Advertisement
ಹಾಗಾಗಿ ಭಾನುವಾರ ಮುನಿಸ್ವಾಮಿ ಅವರ ಪುಣ್ಯ ತಿಥಿ ಇತ್ತು. ಆದರೆ ಮಗ ನಾರಾಯಣಸ್ವಾಮಿ ಪುಣ್ಯ ತಿಥಿ ಮಾಡಿ ದುಂದು ವೆಚ್ಚ ಮಾಡುವ ಬದಲಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡುವ ಮೂಲಕ ವಿಭಿನ್ನವಾಗಿ ತಂದೆಯ ಸ್ಮರಣೆ ಮಾಡಿದರು.
Advertisement
ಕೋಲಾರ ನಗರದ ಗಲ್‍ಪೇಟೆಯ ತಮ್ಮ ನಿವಾಸದಲ್ಲಿ 80ಕ್ಕೂ ಹೆಚ್ಚು ಬಡವರು ಹಾಗೂ ನಿರ್ಗತಿಕರಿಗೆ ಆಹಾರ ಪದಾರ್ಥಗಳ ಕಿಟ್‍ಗಳನ್ನ ವಿತರಣೆ ಮಾಡಿದ್ದಾರೆ. ಈ ಮೂಲಕ ಕೊರೊನಾ ಸಂಕಷ್ಟಕ್ಕೀಡಾದವರಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಈಗಾಗಲೇ ಒಂದೂವರೆ ತಿಂಗಳಿನಿಂದ ಕೊರೊನಾ ಲಾಕ್‍ಡೌನ್‍ನಿಂದಾಗಿ ಜನ ಕಂಗಾಲಾಗಿರುವುದನ್ನ ಅರಿತು ಈ ನಿರ್ಧಾರ ಮಾಡಿರುವುದಾಗಿ ಪೋಸ್ಟ್ ಮಾಸ್ಟರ್ ನಾರಾಯಣಸ್ವಾಮಿ ಹೇಳಿದ್ದಾರೆ.