ಹುಬ್ಬಳ್ಳಿ: ಮಳೆರಾಯ ಭೂಮಿಗೆ ಆಗಮಿಸುತ್ತಿದ್ದಂತೆ ಗಿಡ ಮರಗಳೆಲ್ಲ ಚಿಗುರೊಡೆದು ನಿಸರ್ಗ ದೇವತೆಯನ್ನು ಅಲಂಕರಿಸುತ್ತವೆ. ಪ್ರಸ್ತುತ ದಿನಮಾನಗಳಲ್ಲಿ ಕೊರೊನಾ ವೈರಸ್ ಭೀತಿ ಎಲ್ಲೆಡೆಯೂ ಹಬ್ಬಿದ್ದು, ಕೊರೊನಾ ವೈರಸ್ ಚಿತ್ರಣವೊಂದು ಎಲ್ಲರ ಗಮನದಲ್ಲಿದೆ. ಇದೀಗ ಕೊರೊನಾ ವೈರಸ್ ಚಿತ್ರಣವನ್ನು ಹೋಲುವ ಹೂವೊಂದು ವಾಣಿಜ್ಯನಗರಿಯಲ್ಲಿ ಅರಳಿದ್ದು, ಆಕರ್ಷಣಿಯವಾಗಿ ಗೋಚರಿಸುತ್ತಿದೆ.
ಮಾಧ್ಯಮಗಳಲ್ಲಿ ಕೊರೊನಾ ವೈರಸ್ ಚಿತ್ರಣವನ್ನು ನೋಡಿರುವ ಜನರಿಗೆ ಈ ಹೂವನ್ನು ನೋಡಿದಾಕ್ಷಣ ಕೆಲಕಾಲ ಅಚ್ಚರಿಯನ್ನುಂಟು ಮಾಡಿದೆ. ಹುಬ್ಬಳ್ಳಿಯ ಅಮರನಗರದಲ್ಲಿರುವ ಮುತ್ತು ಶಾಂತಪೂರಮಠ ಅವರ ಮನೆಯ ಆವರಣದಲ್ಲಿ ಇಂತಹದೊಂದು ಅಪೂರ್ವ ಪುಷ್ಪವೊಂದು ಅರಳಿದೆ.
Advertisement
Advertisement
ಈ ಹೂವು ಬೇಸಿಗೆಯಲ್ಲಿ ಮಾತ್ರವೇ ಅರಳುತ್ತದೆ. ಪ್ರಸ್ತುತ ದಿನಮಾನಗಳಲ್ಲಿ ಕೊರೊನಾ ಹಾವಳಿಯಿಂದ ಬೇಸತ್ತಿದ್ದ ಜನರ ಕಣ್ಣಿಗೆ ಪುಷ್ಪವೂ ಕೂಡ ಕೊರೊನಾ ಚಿತ್ರಣವನ್ನು ಹೋಲುವ ಮೂಲಕ ಮುದ ನೀಡಿದೆ. ಈ ಮೂಲಕ ನಿಸರ್ಗದ ಸಂಪತ್ತಿನಲ್ಲಿಯೂ ಕೊರೊನಾ ವೈರಸ್ ಹೋಲುವ ಪುಷ್ಪವೊಂದು ಸಾರ್ವಜನಿಕರ ಕುತೂಹಲವನ್ನು ಇಮ್ಮಡಿಗೊಳಿಸುವಂತೆ ಮಾಡಿದೆ.