– ಕೊನೆಗೂ ಪಿಎಸ್‍ಎಲ್ ಮುಂದೂಡಿದ ಪಿಸಿಬಿ
ಇಸ್ಲಾಮಾಬಾದ್: ಮಹಾಮಾರಿ ಕೊರೊನಾ ವೈರಸ್ ಈಗಾಗಲೇ ಕ್ರಿಕೆಟ್ ಮೇಲೂ ಪರಿಣಾಮ ಬೀರಿದೆ. ಆದರೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮೊಂಡುತನ ತೋರಿ, ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‍ಎಲ್) ನಡೆಸುತ್ತಿತ್ತು. ಕೊನೆಗೆ ಇಕ್ಕಟ್ಟಿಗೆ ಸಿಲುಕಿ ಈಗ ಟೂರ್ನಿಯನ್ನೇ ಮುಂದೂಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಪಿಸಿಬಿ, ಹೊಸ ವೇಳಾಪಟ್ಟಿಯ ಪ್ರಕಾರ ಪಿಎಸ್‍ಎಲ್ ಟೂರ್ನಿಯನ್ನು ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ ಟೂರ್ನಿ ಮುರು ಆರಂಭದ ದಿನಾಂಕವನ್ನು ನಿಗದಿಪಡಿಸಿಲ್ಲ.
Advertisement
IMPORTANT ANNOUNCEMENT#HBLPSLV postponed, to be rescheduled. More details to follow in due course.
— PakistanSuperLeague (@thePSLt20) March 17, 2020
Advertisement
ಪಿಎಸ್‍ಎಲ್ ಟೂರ್ನಿಯ ಎರಡು ಸೆಮಿಫೈನಲ್ ಪಂದ್ಯಗಳು ಇಂದು ನಡೆಯಬೇಕಿತ್ತು. ಜೊತೆಗೆ ಫೈನಲ್ ಪಂದ್ಯ ಬುಧವಾರ ನಿಗದಿಯಾಗಿತ್ತು. ಕಳೆದ ವಾರವಷ್ಟೇ ಕರಾಚಿಯಲ್ಲಿ ಪಿಎಸ್‍ಎಲ್‍ಅನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸಲು ಪಿಸಿಬಿ ನಿರ್ಧರಿಸಿತ್ತು. ಅದೇ ಸಮಯದಲ್ಲಿ ಟೂರ್ನಿಯನ್ನು 4 ದಿನ ಕಡಿಮೆಗೊಳಿಸಲಾಗಿತ್ತು. ಆದರೆ ವಿದೇಶಿ ಆಟಗಾರರು ದೇಶವನ್ನು ತೊರೆದ ನಂತರ ಟೂರ್ನಿಯನ್ನು ಮುಂದೂಡಲು ಪಿಸಿಬಿ ನಿರ್ಧರಿಸಿತು.
Advertisement
ಪಿಎಸ್‍ಎಲ್ ಟೂರ್ನಿಯ ವಿವಿಧ ತಂಡಗಳಲ್ಲಿ ಇಂಗ್ಲೆಂಡಿನ 6 ಆಟಗಾರರಿದ್ದಾರೆ. ಅವರೆಲ್ಲರೂ ಈಗ ದೇಶಕ್ಕೆ ಮರಳಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಸೂಚನೆಯಂತೆ ಜೇಸನ್ ರಾಯ್ ಸೋಮವಾರ ತಡರಾತ್ರಿಯೇ ಲಂಡನ್‍ಗೆ ಹಿಂದುರುಗಿದ್ದಾರೆ.
Advertisement
ಪಾಕಿಸ್ತಾನದಲ್ಲಿ ಒಟ್ಟು 184 ಕೊರೊನಾ ಕೇಸ್‍ಗಳು ಪತ್ತೆಯಾಗಿದ್ದು ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.