– ಮಾರ್ಚ್ 14ರಂದು ಐಪಿಎಲ್ ಭವಿಷ್ಯ ನಿರ್ಧಾರ
ಮುಂಬೈ: ಮಹಾಮಾರಿ ಕೊರಾನಾ ವೈರಸ್‍ನಿಂದಾಗಿ ಸರ್ಕಾರ ವಿದೇಶಿ ಪ್ರಯಾಣಿಕರ ವೀಸಾಗಳ ಮೇಲೆ ನಿರ್ಬಂಧ ವಿಧಿಸಿದೆ. ಇದರಿಂದಾಗಿ ಏಪ್ರಿಲ್ 15ರವರೆಗೂ ಐಪಿಎಲ್‍ಗೆ ಯಾವುದೇ ವಿದೇಶಿ ಆಟಗಾರರು ಲಭ್ಯವಿರುವುದಿಲ್ಲ ಎಂದು ಬಿಸಿಸಿಐನ ಉನ್ನತ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಐಪಿಎಲ್‍ನಲ್ಲಿ ಆಡುವ ವಿದೇಶಿ ಆಟಗಾರರು ಬಿಸಿನೆಸ್ ವೀಸಾ ವಿಭಾಗದಲ್ಲಿ ಬರುತ್ತಾರೆ. ಹೀಗಾಗಿ ಸರ್ಕಾರದ ನಿರ್ದೇಶನದಂತೆ ಅವರು ಏಪ್ರಿಲ್ 15ರವರೆಗೆ ಬರಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಿಗೆ ಕೊರೊನಾ
Advertisement
Advertisement
ಏಪ್ರಿಲ್ 15ರವರೆಗೆ ವಿದೇಶಿ ಪ್ರವಾಸಿಗರಿಗೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ. ಇದುವರೆಗೂ ನೀಡಲಾಗಿರುವ ವೀಸಾಗಳನ್ನ ರದ್ದುಗೊಳಿಸುವಂತೆ ಆದೇಶಿಸಲಾಗಿದೆ. ದಕ್ಷಿಣ ಕೊರಿಯಾ, ಇಟಲಿಗೆ ಏರ್ ಇಂಡಿಯಾ ವಿಮಾನ ಹಾರಾಟ ರದ್ದು ಮಾಡಲಾಗಿದ್ದು, ಅಮೆರಿಕಕ್ಕೆ ಯುರೋಪ್ (ಬ್ರಿಟನ್ ಹೊರತುಪಡಿಸಿ) ನಾಗರಿಕರು ಪ್ರವೇಶಕ್ಕೆ ಸರ್ಕಾರ ನಿರ್ಬಂಧ ಹೇರಿದೆ.
Advertisement
ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 15 ರವರೆಗೆ ರಾಜತಾಂತ್ರಿಕ, ಸರ್ಕಾರದ ಕೆಲ ವಿಭಾಗಗಳನ್ನು ಹೊರತುಪಡಿಸಿ ಅಸ್ತಿತ್ವದಲ್ಲಿರುವ ಎಲ್ಲಾ ವಿದೇಶಿ ವೀಸಾಗಳನ್ನು ರದ್ದುಗೊಳಿಸುವಂತೆ ಆದೇಶ ನೀಡಲಾಗಿದೆ. ಇದನ್ನೂ ಓದಿ: ಕೊರೊನಾ ಎಫೆಕ್ಟ್-ಮಹಾರಾಷ್ಟ್ರದಲ್ಲಿ ಐಪಿಎಲ್ ಟಿಕೆಟ್ ಮಾರಾಟ ನಿಷೇಧ
Advertisement
ಖಾಲಿ ಮೈದಾನದಲ್ಲಿ ಐಪಿಎಲ್:
ಬಿಸಿಸಿಐ ಆಡಳಿದ ಮಂಡಳಿ ಮಾರ್ಚ್ 14ರಂದು ಮುಂಬೈನಲ್ಲಿ ಸಭೆ ನಡೆಸಲಿದ್ದು, ಈ ವೇಳೆ ಐಪಿಎಲ್ ಭವಿಷ್ಯವು ನಿರ್ಧರಿಸಲಾಗುತ್ತದೆ. ಅಷ್ಟೇ ಅಲ್ಲದೆ ಮಾರ್ಚ್ 29ರಿಂದ ಐಪಿಎಲ್ ನಡೆದರೂ ಖಾಲಿ ಕ್ರೀಡಾಂಗಣಗಳಲ್ಲಿ ಆಡುವುದು ಒಂದು ಆಯ್ಕೆಯಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.