ಕೌಲಾಲಂಪುರ್: ವೇಗವಾಗಿ ಹರಡುತ್ತಿರುವ ಕೊರೊನಾ ವೈರಸ್ ಅನ್ನು ತಡೆಯುವ ಪ್ರಯತ್ನದಲ್ಲಿ ಉತ್ಪಾದನಾ ಸೌಲಭ್ಯಗಳನ್ನು ವಿಶ್ವಾದ್ಯಂತ ಸ್ಥಗಿತಗೊಳಿಸಲಾಗಿದೆ. ಆದರೆ ಕಾಂಡೋಮ್ ಕಾರ್ಖಾನೆ ನೌಕರರನ್ನು ಮತ್ತೆ ಕೆಲಸಕ್ಕೆ ಬರುವಂತೆ ಸೂಚನೆ ನೀಡಲಾಗಿದೆ.
ಹೌದು. ಈಗ ಜಾಗತಿಕ ಮಟ್ಟದಲ್ಲಿ ಕಾಂಡೋಮ್ ಕೊರತೆಯು ಹೆಚ್ಚಾಗುತ್ತಿರುವುದರಿಂದ ಗರ್ಭಧಾರಣೆ ಮತ್ತು ಲೈಂಗಿಕವಾಗಿ ಹರಡುವ ಸೋಂಕುಗಳ ಸಂಭವನೀಯ ಏರಿಕೆಯನ್ನು ತಡೆಯಲು ಕಾಂಡೋಮ್ ಕಾರ್ಖಾನೆಯ ಕಾರ್ಮಿಕರನ್ನು ಅಗತ್ಯವೆಂದು ಪರಿಗಣಿಸಲಾಗಿದೆ. ಇದನ್ನೂ ಓದಿ: ಕೊರೊನಾ ಎಫೆಕ್ಟ್- ಸ್ಯಾನಿಟೈಜರ್‌ಗಿಂತಲೂ ಕಾಂಡೋಮ್‍ಗಳಿಗೆ ಭಾರೀ ಬೇಡಿಕೆ
Advertisement
Advertisement
ವಿಶ್ವದ ಹೆಚ್ಚಿನ ಕಾಂಡೋಮ್‍ಗಳನ್ನು ಏಷ್ಯಾದಲ್ಲಿ ಉತ್ಪಾದಿಸಲಾಗುತ್ತದೆ. ಕೊರೊನಾ ವೈರಸ್ ಪ್ರಾರಂಭವಾದ ಚೀನಾ, ಮೊದಲು ಕಾಂಡೋಮ್ ಸೌಲಭ್ಯಗಳನ್ನು ಮುಚ್ಚಿತ್ತು. ಮಲೇಷ್ಯಾ, ಭಾರತ ಮತ್ತು ಥೈಲ್ಯಾಂಡ್ ಇತರ ಪ್ರಮುಖ ಉತ್ಪಾದಕ ದೇಶಗಳಲ್ಲಿಯೂ ಹೆಚ್ಚಿನ ಕಾಂಡೋಮ್ ಕಾರ್ಖಾನೆಗಳು ಮುಚ್ಚಲ್ಪಟ್ಟಿವೆ. ಇದನ್ನೂ ಓದಿ: ಲಾಕ್‍ಡೌನ್ ಎಫೆಕ್ಟ್, ಭಾರೀ ಬೇಡಿಕೆ – ಕೆಲ ದಿನಗಳಲ್ಲಿ ಖಾಲಿಯಾಗಲಿದೆ ಕಾಂಡೋಮ್
Advertisement
ಈಗ ಚೀನಾದ ಕಾರ್ಖಾನೆಗಳು ಮತ್ತು ಮಲೇಷ್ಯಾದ ಕಂಪನಿಯೊಂದು ಉತ್ಪಾದನೆಯನ್ನು ಪುನರಾರಂಭಿಸಿ ಕೊರತೆಯನ್ನು ನೀಗಿಸಲು ಪ್ರಯತ್ನಿಸುತ್ತಿವೆ. ಮಲೇಷ್ಯಾದ ಕಾರೆಕ್ಸ್ ಬಿಎಚ್‍ಡಿ ತನ್ನ ಅರ್ಧದಷ್ಟು ಉದ್ಯೋಗಿಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಮರಳಿ ಉದ್ಯೋಗಗಕ್ಕೆ ಬರುವಂತೆ ಹೇಳಿದೆ.
Advertisement
ಡ್ಯುರೆಕ್ಸ್‍ನಂತಹ ಬ್ರಾಂಡ್‍ಗಳನ್ನು ಒಳಗೊಂಡಂತೆ ವಿಶ್ವದ ಕಾಂಡೋಮ್ ಸರಬರಾಜಿನ ಐದನೇ ಒಂದು ಭಾಗವನ್ನು ಕಾರೆಕ್ಸ್ ಬಿಎಚ್‍ಡಿ ತಯಾರಿಸುತ್ತದೆ.
ಕಾರೆಕ್ಸ್ ಮುಖ್ಯ ಕಾರ್ಯನಿರ್ವಾಹಕ ಗೊಹ್ ಮಿಯಾ ಕಿಯಾಟ್ ಮಾತನಾಡಿ, ನಾವು ಎಲ್ಲೆಡೆ ಕಾಂಡೋಮ್‍ಗಳ ಜಾಗತಿಕ ಕೊರತೆಯನ್ನು ನೋಡಲಿದ್ದೇವೆ. ಮುಂದೆ ಅದು ಭಯಾನಕವಾಗಿರುತ್ತದೆ. ನನ್ನ ಕಳವಳವೆಂದರೆ ಆಫ್ರಿಕಾದಲ್ಲಿ ಸಾಕಷ್ಟು ಕೊರತೆ ಕಂಡು ಬಂದಿದೆ. ಮುಂದೆ ಜಗತ್ತಿನಲ್ಲಿ ಕಾಂಡೋಮ್ ಕೊರತೆ ಕೇವಲ ಎರಡು ವಾರಗಳು ಅಥವಾ ಒಂದು ತಿಂಗಳು ಆಗುವುದಿಲ್ಲ. ತಿಂಗಳುಗಳವರೆಗೂ ಈ ಸಮಸ್ಯೆ ಎದುರಾಗಬಹುದು ಎಂದು ತಿಳಿಸಿದ್ದಾರೆ.