ಬೆಂಗಳೂರು: ಕೊರೊನಾ ವೈರಸ್ ಸೋಂಕು ತಗುಲಿರುವವರ ಸಂಖ್ಯೆ ಬೆಂಗಳೂರಿನಲ್ಲಿ 4ಕ್ಕೆ ಏರಿಕೆ ಆಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ರಸ್ತೆಗಳು ಖಾಲಿ ಖಾಲಿಯಾಗಿವೆ.
ಈಗಗಲೇ ಟೆಕ್ಕಿ ಮತ್ತು ಆತನ ಸ್ನೇಹಿತನನ್ನ ರಾಜೀವ್ ಗಾಂಧಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಟೆಕ್ಕಿ ಪತ್ನಿ ಮತ್ತು ಮಗಳಿಗೂ ಕೊರೊನಾ ವೈರಸ್ ಇರೋದು ದೃಢಪಟ್ಟಿದೆ. ಇವರನ್ನು ಮನೆಯಲ್ಲೇ ಐಸೋಲೇಷನ್ ಮಾಡಲಾಗಿತ್ತು. ನಾಲ್ಕು ಜನರಲ್ಲಿ ಸೋಂಕು ಇರೋದು ಪಕ್ಕ ಆಗಿದ್ದು, ಸಾಫ್ಟ್‌ವೇರ್ ಎಂಜಿನಿಯರ್, ಪತ್ನಿ, ಮಗಳ ಜೊತೆ ಚಾಲಕನನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
Advertisement
ಈ ನಡುವೆ ಬೆಂಗಳೂರಿನ ರಸ್ತೆಗಳು ಖಾಲಿ ಖಾಲಿಯಾಗಿವೆ. ಟ್ರಾಫಿಕ್ ಏರಿಯಾ ಅಂತನೇ ಕರೆಸಿಕೊಳ್ಳುತ್ತಿದ್ದ ರೋಡ್‍ಗಳಲ್ಲಿ ವಾಹನ ಸಂಚಾರ ವಿರಳವಾಗಿದೆ. ಮೈಸೂರು ರೋಡ್, ವಿಜಯನಗರ, ಜಯನಗರ, ಕೆ.ಆರ್ ರೋಡ್‍ಗಳು ಮಾತ್ರವಲ್ಲ ಬೆಂಗಳೂರಿನ ಬಹುತೇಕ ರೋಡ್‍ಗಳು ಖಾಲಿ ಖಾಲಿಯಾಗಿದೆ.
Advertisement
ಕೊರೊನಾ ವೈರಸ್ ದಿನೇ ದಿನೇ ಜನರಲ್ಲಿ ಭಯವನ್ನ ಹೆಚ್ಚು ಮಾಡುತ್ತಿದೆ. ಈಗಾಗಲೇ ಕರ್ನಾಟಕದಲ್ಲಿ 4 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಸ್ಪಷ್ಟಪಡಿಸಿದ್ದಾರೆ.
Advertisement
ಥಿಯೇಟರ್ ಖಾಲಿ ಖಾಲಿ:
ಇನ್ನೂ ಕೊರೊನಾ ಭಯದಿಂದ ಜನರು ಮನೆ ಬಿಟ್ಟು ಹೊರಗಡೆ ಬರುತ್ತಿಲ್ಲ. ಆಗಾಗಿ ಥಿಯೇಟರ್, ಮಾಲ್ ಎಲ್ಲವೂ ಖಾಲಿ ಖಾಲಿಯಾಗಿದೆ. ಯಶವಂತಪುರದಲ್ಲಿರುವ ಗೋವರ್ಧನ ಥಿಯೇಟರ್ ನಲ್ಲಿ ಶಿವರಾಜ್ ಕುಮಾರ್ ಅಭಿನಯದ ಚಿತ್ರ ನಡೆಯುತ್ತಿದ್ದು, ಥಿಯೇಟರ್ ಖಾಲಿ ಖಾಲಿ ಹೊಡೆಯುತ್ತಿದೆ. ಇದರ ಸೆಕೆಂಡ್ ಶೋಗೆ 30 ಜನ ಮಾತ್ರ ಬಂದಿದ್ದಾರೆ.
ಈ ಬಗ್ಗೆ ಥಿಯೇಟರ್ ಸಿಬ್ಬಂದಿಯನ್ನ ಕೇಳುದ್ರೆ, ಕೊರೊನಾ ಖಾಯಿಲೆ ಬಂದಿದೆಯಂತೆ. ಆದ್ದರಿಂದ ಕಡಿಮೆ ಆಗಿದೆ ಎಂದರು. ಥಿಯೇಟರ್ ಗಳಿಗೆ ನೆಗಡಿ, ಕೆಮ್ಮು, ಶೀತ ಇರುವ ಜನ ಬರುವುದರಿಂದ ಸೊಂಕು ಹರಡುವ ಅವಕಾಶಗಳು ಜಾಸ್ತಿ ಇರುತ್ತೆ. ಆಗಾಗಿ ಜನರ ಗಣನೀಯವಾಗಿ ಥಿಯೇಟರ್ ಗಳಲ್ಲಿ ಕಡಿಮೆ ಆಗಿದೆ.