ಹುಬ್ಬಳ್ಳಿ: ಜಾಗತಿಕ ಮಟ್ಟದಲ್ಲಿ ಮಾರಣಾಂತಿಕ ವೈರಸ್ ಎಂದು ಬಿಂಬಿತವಾಗಿರುವ ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೇ ಇಲಾಖೆ ಕೆಲವೊಂದು ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈ ಆದೇಶವು ಇಂದಿನಿಂದ ಮಾರ್ಚ್ 31ರವರೆಗೂ ಜಾರಿಯಲ್ಲಿರಲಿದೆ.
ಹುಬ್ಬಳ್ಳಿಯಿಂದ ಬೆಂಗಳೂರು ಹೋಗುವ ಗಾಡಿ ಸಂಖ್ಯೆ 12079/12080 ಜನಶತಾಬ್ದಿ ಎಕ್ಸ್‌ಪ್ರೆಸ್, ಮೈಸೂರು-ಯಲಹಂಕ-ಮೈಸೂರ ಮಾಲ್ಗುಡಿ ಸಂಚರಿಸಲಿರುವ ಗಾಡಿ ಸಂಖ್ಯೆ 16023/16024 ಮಾಲ್ಗುಡಿ ಎಕ್ಸ್‌ಪ್ರೆಸ್, ಯಶವಂತಪುರದಿಂದ ಪಂಢರಪುರ ಸಂಚರಿಸುವ ಗಾಡಿ ಸಂಖ್ಯೆ 16541/16542 ಯಶವಂತಪುರ ಎಕ್ಸ್‌ಪ್ರೆಸ್, ಬೆಂಗಳೂರಿನಿಂದ ಮೈಸೂರು ಸಂಚರಿಸಲಿರುವ ಗಾಡಿ ಸಂಖ್ಯೆ 16557/16558 ರಾಜಾರಾಣಿ ಎಕ್ಸ್‌ಪ್ರೆಸ್, ಶಿವಮೊಗ್ಗದಿಂದ ಯಶವಂತಪುರ ಸಂಚರಿಸುವ ಗಾಡಿ ಸಂಖ್ಯೆ 06539/06540 ನಾಲ್ಕು ದಿನಕ್ಕೊಮ್ಮೆ ಸಂಚರಿಸುವ ವಿಕ್ಲಿ ಎಕ್ಸ್‌ಪ್ರೆಸ್ ನಾಳೆಯಿಂದ ಸಂಚಾರ ನಿಲ್ಲಿಸಲಿವೆ.
Advertisement
Advertisement
ಮೈಸೂರನಿಂದ ರೇಣುಗುಂಟಾ ಗಾಡಿ ಸಂಖ್ಯೆ 11065/11066 ಮೈಸೂರು ಎಕ್ಸ್‌ಪ್ರೆಸ್, ಸಾಯಿನಗರ ಶಿರಡಿ ಸಂಚರಿಸುವ ಗಾಡಿ ಸಂಖ್ಯೆ 16217/16218 ಮೈಸೂರು ಎಕ್ಸ್‌ಪ್ರೆಸ್, ಯಶವಂತಪುರದಿಂದ ಮೈಸೂರಿಗೆ ಸಂಚರಿಸುವ ಗಾಡಿ ಸಂಖ್ಯೆ 16565/16566 ಯಶವಂತಪುರ ವಿಕ್ಲಿ ಎಕ್ಸ್‌ಪ್ರೆಸ್, ಬೆಳಗಾವಿಯಿಂದ ಮೈಸೂರು ಹೋಗುವ ಗಾಡಿ ಸಂಖ್ಯೆ 17326 ವಿಶ್ವಮಾನವ ಎಕ್ಸ್‌ಪ್ರೆಸ್ ಹಾಗೂ ಮೈಸೂರಿನಿಂದ ಬೆಳಗಾವಿ ಹೋಗುವ ಗಾಡಿ ಸಂಖ್ಯೆ 17325 ವಿಶ್ವಮಾನವ ಎಕ್ಸ್‌ಪ್ರೆಸ್ ಗಾಡಿಗಳು ಮಾರ್ಚ್ 31ರ ವರೆಗೂ ತಾತ್ಕಾಲಿಕವಾಗಿ ರದ್ದುಗೊಳಿಸಿ ರೈಲ್ವೇ ಸಚಿವಾಲಯ ಆದೇಶ ಹೊರಡಿಸಿದೆ.
Advertisement
ಹಣ ವಾಪಸ್ ಹೇಗೆ?:
ಆನ್‍ಲೈನ್ ಮೂಲಕ ಮುಂಗಡ ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರ ಬ್ಯಾಂಕ್ ಖಾತೆಗೆ ಹಣ ಜಮೆ ಆಗಲಿದೆ. ಈಗಾಗಲೇ ಕೌಂಟರ್ ನಲ್ಲಿ ಟಿಕೆಟ್ ಪಡೆದಿದ್ದರೆ ಅಂತಹ ಪ್ರಯಾಣಿಕರ ಮೊಬೈಲ್ ಸಂಖ್ಯೆಗೆ ಮೆಸೇಜ್ ಬರಲಿದೆ. ಆ ಬಳಿಕ ಅವರು ಪ್ರಯಾಣಿಕರು ಬಂದು ಹಣ ಪಡೆಯಬಹದು ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.