ಚಿಕ್ಕಮಗಳೂರು: ದಿನದಿಂದ ದಿನಕ್ಕೆ ಕೊರೊನಾ ವೈರಸ್ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಮುಂದಿನ ಒಂದು ತಿಂಗಳು ತುಂಬಾ ಕ್ರಿಟಿಕಲ್ ಪರಿಸ್ಥಿತಿಯಾಗಿದೆ. ಹಾಗಾಗಿ ಕಾಫಿನಾಡಿಗೆ ಏಪ್ರಿಲ್ 15ರವರೆಗೂ ಯಾವ ಪ್ರವಾಸಿಗರು ಬರಬೇಡಿ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ಪ್ರವಾಸಿಗರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಅವರು, ಈವರೆಗೆ ಜಿಲ್ಲಾದ್ಯಂತ ಒಂದೇ ಒಂದು ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿಲ್ಲ. ದಾಖಲಾಗಿದ್ದ ಇಬ್ಬರು ರೋಗಿಗಳಲ್ಲೂ ನೆಗೆಟಿವ್ ಬಂದಿದೆ. ಪರಿಸ್ಥಿತಿಯನ್ನ ನಿಯಂತ್ರಿಸೋದಕ್ಕೆ ಜಿಲ್ಲಾಡಳಿತ ಕೂಡ ಸನ್ನದ್ಧವಾಗಿದೆ. ಆದರೆ ಜನಸಾಮಾನ್ಯರು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
Advertisement
Advertisement
ಮುಂದಿನ ಒಂದು ತಿಂಗಳುಗಳ ಕಾಲ ತುಂಬಾ ಮುಖ್ಯವಾದ ಕಾಲಘಟ್ಟವಾಗಿದೆ. ಆದ್ದರಿಂದ ಪ್ರಕೃತಿ ಪ್ರವಾಸಿಗರು, ಧಾರ್ಮಿಕ ಪ್ರವಾಸಿಗರು, ಅಡ್ವೆಂಚರ್ ಪ್ರವಾಸಿಗರು ಸೇರಿದಂತೆ ಮತ್ಯಾವುದೇ ರೀತಿಯ ಪ್ರವಾಸಿಗರು ಕಾಫಿನಾಡಿಗೆ ಬರಬಾರದು ಎಂದು ಜಿಲ್ಲಾಧಿಕಾರಿ ಗೌತಮ್ ತಿಳಿಸಿದರು.
Advertisement
ಪ್ರವಾಸಿಗರು ತಮ್ಮ ಟೂರ್ ಶೆಡ್ಯೂಲನ್ನ ಒಂದು ತಿಂಗಳ ನಂತರಕ್ಕೆ ಬದಲಾಯಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಈಗಾಗಲೇ ಜಿಲ್ಲಾದ್ಯಂತ ಸರ್ಕಾರಿ ಆಸ್ಪತ್ರೆಯಲ್ಲಿ 38 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 74 ಐಸೋಲೇಷನ್ ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.