ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ.
ಕೊರೊನಾ ಸ್ಟೇಜ್ 3ಯತ್ತ ದೇಶ ಹೋಗುತ್ತಿದೆಯೇ ಎಂಬ ಅನುಮಾನಗಳು ಮೂಡುತ್ತಿವೆ. ಹೀಗಾಗಿ ಕೇಂದ್ರ ಸರ್ಕಾರ ಮತ್ತು ಇತರೆ ರಾಜ್ಯಗಳ ಸರ್ಕಾರಗಳು ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ 10 ರಾಜ್ಯಗಳು ಲಾಕ್‍ಡೌನ್ ಆಗಿದೆ.
Advertisement
ದೇಶದ ಅಂತರ್ ರಾಜ್ಯಗಳ ಸಾರಿಗೆ ಸಂಪರ್ಕ ಸಂಪೂರ್ಣ ಬಂದ್ ಆಗಿವೆ. ದೇಶದ ಅತಿದೊಡ್ಡ ಸಾರಿಗೆಯಾದ ರೈಲು ಸೇವೆ ಮೊದಲ ಬಾರಿಗೆ 10 ದಿನದ ಮಟ್ಟಿಗೆ ಸ್ಥಗಿತವಾಗಿದೆ.. ಕೇಂದ್ರ ಸರ್ಕಾರವೇ ಸದ್ಯ 75 ಜಿಲ್ಲೆಗಳನ್ನು ಲಾಕ್‍ಡೌನ್ ಮಾಡಿದ್ದು, ಇದು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Advertisement
ಲಾಕ್‍ಡೌನ್‍ನತ್ತ ಭಾರತ
* ದೇಶಾದ್ಯಂತ ರೈಲು ಸೇವೆ (ಪ್ಯಾಸೆಂಜರ್ ರೈಲು)
* ದೇಶಾದ್ಯಂತ ಅಂತರ್‌ರಾಜ್ಯ ಬಸ್ ಸೇವೆ
* ದೇಶದಲ್ಲಿನ ಎಲ್ಲಾ ಮೆಟ್ರೋ ರೈಲು ಸೇವೆ ಬಂದ್
* ಅಂತಾರಾಷ್ಟ್ರೀಯ ವಾಯು ಗಡಿ ಬಂದ್
* ದೇಶಿಯ ವಿಮಾನಗಳ ಸೇವೆಯಲ್ಲಿಯೂ ಕಡಿತ
* ಸೋಂಕು ಕಂಡು ಬಂದ ದೇಶದ 75 ಜಿಲ್ಲೆಗಳು ಲಾಕ್‍ಡೌನ್
* ಬ್ಯಾಂಕ್‍ಗಳಿಂದ ಅಗತ್ಯ ಸೇವೆ ಮಾತ್ರ
Advertisement
ಕೊರೊನಾ ಲಾಕ್‍ಡೌನ್
* ದೆಹಲಿ – (ಸಂಪೂರ್ಣ ಲಾಕ್‍ಡೌನ್)
* ಮಹಾರಾಷ್ಟ್ರ – (ಸಂಪೂರ್ಣ ಲಾಕ್‍ಡೌನ್)
* ತೆಲಂಗಾಣ – (ಸಂಪೂರ್ಣ ಲಾಕ್‍ಡೌನ್)
* ಬಿಹಾರ – (ಸಂಪೂರ್ಣ ಲಾಕ್‍ಡೌನ್)
* ಪಂಜಾಬ್ (ಸಂಪೂರ್ಣ ಲಾಕ್‍ಡೌನ್)
* ರಾಜಸ್ತಾನ (ಸಂಪೂರ್ಣ ಲಾಕ್‍ಡೌನ್)
* ಒಡಿಶಾ (ಸಂಪೂರ್ಣ ಲಾಕ್‍ಡೌನ್)
* ನಾಗಾಲ್ಯಾಂಡ್ (ಸಂಪೂರ್ಣ ಬಂದ್)
* ಪಶ್ಚಿಮ ಬಂಗಾಳ (ಸಂಪೂರ್ಣ ಲಾಕ್‍ಡೌನ್)
* ಉತ್ತರಾಖಂಡ್ (ಮಾ.31ರವರೆಗೂ ಜನತಾ ಕಫ್ರ್ಯೂ)
* ಗುಜರಾತ್‍ನ ನಾಲ್ಕು ನಗರ ಲಾಕ್‍ಡೌನ್ (ಅಹ್ಮದಾಬಾದ್, ಸೂರತ್, ರಾಜ್‍ಕೋಟ್, ವಡೋದರಾ)
* ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಲಾಕ್‍ಡೌನ್ (ಮೆಟ್ರೋ, ಬಸ್ ಸೇವೆ ರದ್ದು)
* ತ್ರಿಪುರ – ಎಲ್ಲಾ ಗಡಿ ಬಂದ್, ಗಡಿಯಲ್ಲಿಯೇ ಸ್ಕ್ರೀನಿಂಗ್
* ಜಮ್ಮು ಕಾಶ್ಮೀರ – ಮಾರ್ಚ್ 25ರವರೆಗೂ ಸಾರ್ವತ್ರಿಕ ರಜೆ ಘೋಷಣೆ
* ಪುದುಚ್ಚೇರಿಯಲ್ಲಿ ನಿಷೇಧಾಜ್ಞೆ ಜಾರಿ (ಮಾರ್ಚ್ 31ರವರೆಗೂ)