ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಅನೇಕರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ದೇಣಿಗೆ ನೀಡಿ ಬೆಂಬಲ ಸೂಚಿಸಿದ್ದಾರೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಪುತ್ರಿ ಸೃಷ್ಟಿ ಪಾಟೀಲ್ ಅವರು ಕೂಡ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ 50 ಸಾವಿರ ರೂ. ದೇಣಿಗೆ ನೀಡಿದ್ದಾರೆ.
ತಾವು ದೇಣಿಗೆ ನೀಡುವ ಮಾಹಿತಿಯನ್ನು ಟ್ವೀಟ್ ಮಾಡಿರುವ ಸೃಷ್ಟಿ ಪಾಟೀಲ್, ಮಹಾಮಾರಿ ಕೊರೊನಾ ವೈರಸ್ ಅನ್ನು ತಡೆಗಟ್ಟಲು ರಾಜ್ಯ ಸರ್ಕಾರವು, ನಮ್ಮಲೆಲ್ಲರ ಹಿತ ಕಾಯುತ್ತಿದೆ. ನಾವೆಲ್ಲರೂ ಸೇರಿ ನಮ್ಮ ಕೈಯಲ್ಲಿ ಎಷ್ಟಾಗುತ್ತೋ ಅಷ್ಟು ಧನಸಹಾಯವನ್ನು ರಾಜ್ಯ ಸರ್ಕಾರಕ್ಕೆ ಮಾಡೋಣ. ನನ್ನ ಕಡೆಯಿಂದ ಆದಷ್ಟು ನಾನು ಮಾಡಿದ್ದೇನೆ. ನೀವೂ ಕೂಡ ಸಿಎಂ ರಿಲೀಫ್ ಫಂಡ್‍ಗೆ ಧನ ಸಹಾಯ ಮಾಡಬಹುದು ಎಂದು ಬರೆದುಕೊಂಡಿದ್ದಾರೆ.
Advertisement
ಮಹಾಮಾರಿ ಕರೊನ ವೈರಸ್ಸನ್ನು ತಡೆಗಟ್ಟಲು ನಮ್ಮ ರಾಜ್ಯ ಸರ್ಕಾರವು,ನಮ್ಮ ಹಿತ ಕಾಯಲು ನಮ್ಮ ಅವಶ್ಯಕತೆ ಇದೆ.ನಾವೆಲ್ಲರೂ ಸೇರಿ ನಮ್ಮ ಕೈಯಲ್ಲಿ ಎಷ್ಟಾಗುತ್ತೋ ಅಷ್ಟು ಧನಸಹಾಯವನ್ನು ನಮ್ಮ ರಾಜ್ಯ ಸರ್ಕಾರಕ್ಕೆ ಮಾಡೋಣ.ನನ್ನ ಕಡೆಯಿಂದ ಆದಷ್ಟು ನಾನು ಮಾಡಿದ್ದೇನೆ.ನೀವೂ ಕೂಡ" ಸಿಎಂ ರಿಲೀಫ್ ಫಂಡ್" ಗೆ ಧನ ಸಹಾಯ ಮಾಡಬಹುದು @BSYBJP @bcpatilkourava pic.twitter.com/0MMS0tzjge
— Shrusti Patil (@shrustibcpatil) April 8, 2020
Advertisement
ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಏಪ್ರಿಲ್ 14ರವರೆಗೆ ಲಾಕ್‍ಡೌನ್ ಘೋಷಿಸಲಾಗಿದೆ. ಇದರಿಂದಾಗಿ ಸಾಮಾನ್ಯ ಜನರ ಜೀವನ ಕಷ್ಟವಾಗಿದೆ. ಹೀಗಾಗಿ ಸೃಷ್ಟಿ ಪಾಟೀಲ್ ಕಳೆದ ಕೆಲವು ದಿನಗಳಿಂದ ತಂದೆ ಬಿ.ಸಿ.ಪಾಟೀಲ್ ಅವರ ಕ್ಷೇತ್ರದ ಜನರ ಸಹಾಯಕ್ಕೆ ನಿಂತಿದ್ದಾರೆ.
Advertisement
ಇಂದು ಹಂಸಭಾವಿಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿಯವರು, ಆಶಾ ಕಾರ್ಯಕರ್ತರು, ಪೋಲಿಸ್ ಸಿಬ್ಬಂದಿ, ಗ್ರಾಮ ಪಂಚಾಯತಿ ಸ್ವಚ್ಚತಾ ಸಿಬ್ಬಂಧಿಗಳಿಗೆ ಊಟದ ವ್ಯವಸ್ಥೆ ಮಾಡಲಾಯಿತು ಹಾಗೂ ಮಾಸ್ಕಗಳನ್ನ ವಿತರಿಸಲಾಯಿತು.#IndiaFightsCorona pic.twitter.com/H3eVPNNxlD
— Shrusti Patil (@shrustibcpatil) April 5, 2020
Advertisement
ಸೃಷ್ಟಿ ಪಾಟೀಲ್ ಅವರು ಏಪ್ರಿಲ್ 5ರಂದು ಹಂಸಭಾವಿ ಹಾಗೂ ರಟ್ಟಿಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಪೊಲೀಸ್, ಗ್ರಾಮ ಪಂಚಾಯತಿ ಸ್ವಚ್ಛತಾ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಿದ್ದರು. ಜೊತೆಗೆ ಅಂದು ಅನೇಕರಿಗೆ ಮಾಸ್ಕ್ ಗಳನ್ನು ವಿತರಿಸಿದ್ದರು. ಹೀಗೆ ಹಾವೇರಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಜನರಿಗೆ ಸಹಾಯ ಮಾಡುತ್ತಿದ್ದಾರೆ.
ರಟ್ಟಿಹಳ್ಳಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು,ಸಿಬ್ಬಂದಿಯವರು,ಆಶಾ ಕಾರ್ಯಕರ್ತರು,ಪೋಲಿಸ್ ಸಿಬ್ಬಂದಿ,ಗ್ರಾಮ ಪಂಚಾಯತಿ ಸ್ವಚ್ಚತಾ ಸಿಬ್ಬಂಧಿಗಳಿಗೆ ಊಟದ ವ್ಯವಸ್ಥೆ ಮಾಡಲಾಯಿತು ಹಾಗೂ ಮಾಸ್ಕಗಳನ್ನ ವಿತರಿಸಲಾಯಿತು.ಹಾಗು ತಾಲ್ಲೂಕಿಗೆ ಬಂದಂತಹ ಅಲೆಮಾರಿ ಜನಾಂಗದವರಿಗೆ ಮಾಸ್ಕಗಳನ್ನು ಹಾಗೂ ಬಟ್ಟೆ ವಿತರಿಸಲಾಯಿತು.#IndiaFightsCorona pic.twitter.com/SJGQyZ5PKr
— Shrusti Patil (@shrustibcpatil) April 5, 2020