– 1 ಕೆಜಿ ಮಟನ್‍ಗೆ 800 ರೂ. ಇದ್ರೂ ಜನರ ಸಾಲೋಸಾಲು
ಬೆಂಗಳೂರು: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲೂ ಕೆಲವರಂತೂ ಸಾಮಾಜಿಕ ಅಂತರವಿಲ್ಲದೆ ಮಟನ್ ಅಂಗಡಿ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ.
ನಗರದ ನಂದಿನಿ ಲೇಔಟ್‍ನಲ್ಲಿ ತರಕಾರಿ ಅಷ್ಟೇ ಅಲ್ಲದೆ ನಾನ್ ವೆಜ್‍ಗೂ ದೊಡ್ಡ ಸರದಿಯೇ ನಿಂತಿದೆ. ಕೊರೊನಾ ವೈರೆಸ್ ಭೀಕರತೆಯಿಂದ ತಪ್ಪಿಸಿಕೊಳ್ಳುವುದಕ್ಕಿಂತ ಮಟನ್ ಮುಖ್ಯ ಎಂಬಂತೆ ಜನರು ವರ್ತಿಸುತ್ತಿದ್ದಾರೆ.

ಚಿಕನ್ ಬೆಲೆ ಕೆಜಿಗೆ 100 ರೂ. ಹಾಗೂ ಮಟನ್ ಬೆಲೆ ಕೆಜಿಗೆ 800 ರೂ. ಆಗಿದೆ. ಮಟನ್ ಬೆಲೆ ದುಬಾರಿಯಾದ್ರೂ ತಿನ್ನುವರರ ಸಂಖ್ಯೆ ಮಾತ್ರ ಇಳಿಕೆಯಾಗಿಲ್ಲ. ಸಂಡೇ ಸ್ಪೆಷಲ್ ಎಂಬ ಕಾರಣಕ್ಕೆ ಜನರು ಮಾಂಸ ಖರೀದಿಗೆ ಮುಗಿಬಿದ್ದಾರೆ.

