ಬೆಂಗಳೂರು ಸೇರಿ 9 ಜಿಲ್ಲೆ ಲಾಕ್‍ಡೌನ್ – ಏನಿರುತ್ತೆ? ಏನಿರಲ್ಲ?

Public TV
3 Min Read
lockdown 1

– ರಾಜ್ಯ ಸರ್ಕಾರದಿಂದ ಮತ್ತಷ್ಟು ಕಠಿಣ ನಿರ್ಧಾರ

ಬೆಂಗಳೂರು: ಕಣ್ಣಿಗೆ ಕಾಣದ ವೈರಿ ಕೊರೊನಾ ವಿರುದ್ಧ ಇವತ್ತು ಇಡೀ ಜಗತ್ತೇ ಯುದ್ಧ ಮಾಡುತ್ತಿದೆ. ಪ್ರತಿದಿನವೂ ಸಾವಿರಾರು ಮಂದಿಯ ಪ್ರಾಣ ತೆಗೆಯುತ್ತಾ, ಮಾನವನ ಬುದ್ಧಿಶಕ್ತಿಗೆ ಸವಾಲ್ ಹಾಕುತ್ತಿರುವ ಕೊರೊನಾ ಹೊಡೆದೋಡಿಸಲು ಶತಪ್ರಯತ್ನ ಮಾಡಲಾಗುತ್ತಿದೆ. ಕರ್ನಾಟಕ ಸೇರಿ ಇಡೀ ದೇಶದಲ್ಲಿ ಹಲವು ಕ್ರಮ ಕೈಗೊಳ್ಳಲಾಗಿದೆ. ಆದರೂ ಸೋಂಕು ಕಡಿಮೆ ಆಗಿಲ್ಲ.

ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇವತ್ತು 6 ಮಂದಿಯಲ್ಲಿ ಸೋಂಕು ಕಂಡುಬಂದಿದೆ. ಇದರಿಂದ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಇವತ್ತು ಜನರಿಂದ ಜನರಿಗಾಗಿ ಜನರಿಗೋಸ್ಕರವೇ ಕರೆ ನೀಡಲಾಗಿದ್ದ ಜನತಾ ಕರ್ಫ್ಯೂಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಇವತ್ತಿನ ಕರ್ಫ್ಯೂ ಸ್ಯಾಂಪಲ್ ಅನ್ನೋದು ಈಗ ಸಾಬೀತಾಗುತ್ತಿದೆ.

bengaluru airport corona 3

ಇಡೀ ರಾಜ್ಯ ಲಾಕ್‍ಡೌನ್ ಆಗುತ್ತಿದೆ. ಮೊದಲ ಹಂತವಾಗಿ ಬೆಂಗಳೂರು ಸೇರಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡುಬಂದ 9 ಜಿಲ್ಲೆಗಳನ್ನು ಲಾಕ್‍ಡೌನ್ ಮಾಡಲಾಗಿದೆ. ತುರ್ತು ಸೇವೆ ಹೊರತುಪಡಿಸಿ ಉಳಿದ ಯಾವುದೇ ಸೇವೆಗಳು ಲಭ್ಯ ಇಲ್ಲ.

ಬೆಂಗಳೂರು ಸೇರಿ 9 ಜಿಲ್ಲೆ ಲಾಕ್‍ಡೌನ್:
ಕೊರೊನಾ ಸೋಂಕಿತರು ಕಂಡು ಬಂದ 9 ಜಿಲ್ಲೆಯನ್ನು ಮಾಚ್ 31ರವರೆಗೂ ಲಾಕ್‍ಡೌನ್ ಮಾಡಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಬಳ್ಳಾಪುರ, ಮೈಸೂರು, ಕಲಬುರ್ಗಿ, ಕೊಡಗು, ಧಾರವಾಡ ಜಿಲ್ಲೆಯನ್ನು ಲಾಕ್‍ಡೌನ್ ಮಾಡಲಾಗುತ್ತಿದೆ.

BMTC 1 1

ಏನಿರಲ್ಲ?
* ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲಾ ಸೇವೆ ಬಂದ್
* ಅಂಗಡಿ ಮುಂಗಟ್ಟು, ವಾಣಿಜ್ಯ ವ್ಯಾಪಾರ ಬಂದ್
* ವರ್ಕ್ ಶಾಪ್, ಗೋಡಾನ್
* ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ (ಭಾಗಶಃ ಬಂದ್)
* ಕೆಎಸ್ಆರ್‌ಟಿಸಿ, ಖಾಸಗಿ ಬಸ್ ಬಂದ್
* ಐಟಿ-ಬಿಟಿ ಮಂದಿಗೆ ಮನೆಯಿಂದಲೇ ಕೆಲಸ
* ಗಾರ್ಮೆಂಟ್ಸ್ ನೌಕರರಿಗೆ ರೊಟೇಷನ್ ಪದ್ಧತಿಯಲ್ಲಿ ಕೆಲಸ
* 9 ಜಿಲ್ಲೆಗಳಲ್ಲಿ ಅಂತರ್ ಜಿಲ್ಲೆ ಸಾರಿಗೆ ಸೇವೆ ಬಂದ್

ಲಾಕ್‍ಡೌನ್ 9 ಜಿಲ್ಲೆಗಳಲ್ಲಿ ಏನು ಇರುತ್ತೆ:
* ಹಾಲು, ತರಕಾರಿ, ದಿನಸಿ ಅಂಗಡಿ
* ಹೋಟೆಲ್‍ನಿಂದ ಪರ್ಸೆಲ್‍ಗೆ ಅವಕಾಶ (ಹೋಂ ಡೆಲಿವರಿ)
* ಮಾಂಸ ಮತ್ತು ಮೀನು ಅಂಗಡಿ
* ಬ್ಯಾಂಕ್, ಎಟಿಎಂ
* ಸರ್ಕಾರಿ ಕಚೇರಿ
* ಪೊಲೀಸ್, ಜಲಮಂಡಳಿ, ಪೌರ ಕಾರ್ಮಿಕ ಸೇವೆ

metro

ಇನ್ನೂ ಬೆಳಗ್ಗೆಯಿಂದ ಸಭೆಗಳ ಮೇಲೆ ಸಭೆ ನಡೆಸಿದ ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ಕ್ರಮ ಕೈಗೊಂಡಿದೆ.

ರಾಜ್ಯ ಸರ್ಕಾರದ ಕಠಿಣ ನಿರ್ಧಾರ:
* ನಿರ್ಧಾರ 1 – ಜನತಾ ಕರ್ಫ್ಯೂ ಮುಗಿದ ಕೂಡಲೇ 144 ಸೆಕ್ಷನ್ ಜಾರಿ (ಮಧ್ಯರಾತ್ರಿವರೆಗೂ ಮಾತ್ರ)
* ನಿರ್ಧಾರ 2 – 9 ಜಿಲ್ಲೆ ಹೊರತುಪಡಿಸಿ, ಉಳಿದ ಕಡೆ ಸಾರಿಗೆ ಬಸ್ ಸಂಚಾರ (ಬಸ್‍ಗಳ ಸಂಖ್ಯೆಯಲ್ಲಿ ಕಡಿತ)
* ನಿರ್ಧಾರ 3 – ಮಾ.31ರವರೆಗೂ ಎಲ್ಲಾ ಎಸಿ ಬಸ್ ಸೇವೆ ಸ್ಥಗಿತ
* ನಿರ್ಧಾರ 4 – 15 ದಿನಗಳ ಕಾಲ ನಗರದಿಂದ ಹಳ್ಳಿಗಳಿಗೆ ಹೋಗುವಂತಿಲ್ಲ
* ನಿರ್ಧಾರ 5 – ಮಾ.31ರವರೆಗೂ ನಮ್ಮ ಮೆಟ್ರೋ ಸೇವೆ ಸ್ಥಗಿತ
* ನಿರ್ಧಾರ 6 – ರಾಜ್ಯದೆಲ್ಲೆಡೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಂದೂಡಿಕೆ (ಮಾ.27ರಿಂದ ಆರಂಭ ಆಗಬೇಕಿತ್ತು)
* ನಿರ್ಧಾರ 7 – ನಾಳೆಯ ಪಿಯುಸಿ ಪರೀಕ್ಷೆ ಮುಂದೂಡಿಕೆ
* ನಿರ್ಧಾರ 8 – ವಿವಿಧ ನೇಮಕಾತಿ ಪರೀಕ್ಷೆಗಳು ಮುಂದೂಡಿಕೆ
* ನಿರ್ಧಾರ 9 – ಸ್ಥಳೀಯ ಚುನಾವಣೆಗಳು ಮುಂದೂಡಿಕೆ
* ನಿರ್ಧಾರ 10 – ರಾಜ್ಯದ ಎಲ್ಲಾ ಗಡಿಗಳು ಸಂಪೂರ್ಣ ಬಂದ್
* ನಿರ್ಧಾರ 11 – ಕೊರೊನಾ ಬಾಧಿತರಿಗೆ ವಿಕ್ಟೋರಿಯಾ ಆಸ್ಪತ್ರೆ ಮೀಸಲು (1700 ಹಾಸಿಗೆಗಳ ವಿಶೇಷ ಸಮುಚ್ಚಯ ಕೊರೊನಾ ರೋಗಿಗಳಿಗೆ ಮೀಸಲು)
* ನಿರ್ಧಾರ 12 – ವಿಕ್ಟೋರಿಯಾ ಆಸ್ಪತ್ರೆ ರೋಗಿಗಳು ಬೇರೆ ಆಸ್ಪತ್ರೆಗಳಿಗೆ ಶಿಫ್ಟ್
* ನಿರ್ಧಾರ 13 – ಬಾಲಬ್ರೂಯಿ ಭವನದಲ್ಲಿ ಕೊರೊನಾ ವಾರ್ ರೂಂ
* ನಿರ್ಧಾರ 14 – ಏಪ್ರಿಲ್ ಮೊದಲ ವಾರದಲ್ಲಿ ಬಿಪಿಎಲ್ ಪಡಿತರದಾರರಿಗೆ ಎರಡು ತಿಂಗಳ ಪಡಿತರ ವಿತರಣೆ

Share This Article
Leave a Comment

Leave a Reply

Your email address will not be published. Required fields are marked *