– ಬೆಂಗಳೂರಿನ ವೃದ್ಧ ದಂಪತಿಗೆ ಸೋಂಕು
– ಕೊರೊನಾ ಸೋಂಕಿತರ ಸಂಖ್ಯೆ 151ಕ್ಕೆ ಏರಿಕೆ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 151ಕ್ಕೆ ಏರಿದೆ. ಶನಿವಾರ ಏಕಾಏಕಿ 16 ಮಂದಿ ಸೋಂಕಿತರು ಪತ್ತೆಯಾಗಿದ್ದರೆ, ಇಂದು 7 ಜನರಿಗೆ ಕೊರೊನಾ ತಗುಲಿರುವುದು ದೃಢವಾಗಿದೆ. ಈ ಪೈಕಿ 5 ಕೇಸ್‍ಗಳು ದೆಹಲಿಯ ತಬ್ಲಿಘಿ ಧರ್ಮ ಸಭೆಗೆ ಹೋಗಿ ಬಂದವರೇ ಆಗಿದ್ದಾರೆ.
ಬೆಳಗಾವಿಯ ನಾಲ್ವರು, ಬಳ್ಳಾರಿಯ ಒಬ್ಬರ ಜೊತೆ ದುಬೈನಿಂದ ಬೆಂಗಳೂರಿಗೆ ಆಗಮಿಸಿದ ವೃದ್ಧ ದಂಪತಿಗೆ ಸೋಂಕು ಬಂದಿದೆ.
Advertisement
Advertisement
ರೋಗಿ 145 – ಬೆಂಗಳೂರಿನ 68 ವರ್ಷದ ವೃದ್ಧ. ದುಬೈಗೆ ಪ್ರಯಾಣ ಮಾಡಿರುವ ಹಿನ್ನಲೆ ಹೊಂದಿದ್ದು, ಮಾರ್ಚ್ 22ರಂದು ಭಾರತಕ್ಕೆ ಹಿಂದಿರುಗಿದ್ದಾರೆ. ಬೆಂಗಳೂರು ಗ್ರಾಮಾಂತರದ ಆಕಾಶ್ ಆಸ್ಪತ್ರೆಯಲ್ಲಿ ಕ್ವಾರಂಟೈನ್‍ನಲ್ಲಿ ಇಡಲಾಗಿದೆ.
Advertisement
ರೋಗಿ 146 – ಬೆಂಗಳೂರಿನ 62 ವರ್ಷದ ವೃದ್ಧೆ (ರೋಗಿ 145ರ ಪತ್ನಿ). ದುಬೈಗೆ ಪ್ರಯಾಣ ಮಾಡಿರುವ ಹಿನ್ನಲೆ ಹೊಂದಿದ್ದು, ಮಾರ್ಚ್ 22ರಂದು ಭಾರತಕ್ಕೆ ಹಿಂದಿರುಗಿದ್ದಾರೆ. ಬೆಂಗಳೂರು ಗ್ರಾಮಾಂತರದ ಆಕಾಶ್ ಆಸ್ಪತ್ರೆಯಲ್ಲಿ ಕ್ವಾರಂಟೈನ್‍ನಲ್ಲಿ ಇಡಲಾಗಿದೆ.
Advertisement
ರೋಗಿ 147 – ಬೆಳಗಾವಿ ಜಿಲ್ಲೆ ರಾಯ್‍ಬಾಗ್‍ನ 36 ಮಹಿಳೆ. ಅವರು ಮಾರ್ಚ್ 13ರಿಂದ 18ರವರೆಗೆ ನಡೆದ ದೆಹಲಿಯ ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿಂದ ಮಾರ್ಚ್ 20ರಂದು ವಾಪಸ್ ಬಂದಿದ್ದರು. ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.
ರೋಗಿ 148 – ಬೆಳಗಾವಿ ಜಿಲ್ಲೆ ರಾಯ್‍ಬಾಗ್‍ನ 40 ವರ್ಷದ ಪುರುಷ. ಅವರು ಮಾರ್ಚ್ 13ರಿಂದ 18ರವರೆಗೆ ನಡೆದ ದೆಹಲಿಯ ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿಂದ ಮಾರ್ಚ್ 20ರಂದು ವಾಪಸ್ ಬಂದಿದ್ದರು. ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
ರೋಗಿ 149 – ಬೆಳಗಾವಿ ಜಿಲ್ಲೆ ರಾಯ್‍ಬಾಗ್‍ನ 67 ವರ್ಷದ ವೃದ್ಧೆ. ಅವರು ಮಾರ್ಚ್ 13ರಿಂದ 18ರವರೆಗೆ ನಡೆದ ದೆಹಲಿಯ ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿಂದ ಮಾರ್ಚ್ 20ರಂದು ವಾಪಸ್ ಬಂದಿದ್ದರು. ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.
ರೋಗಿ 150 – ಬೆಳಗಾವಿ ಜಿಲ್ಲೆ ರಾಯ್‍ಬಾಗ್‍ನ 41 ವರ್ಷದ ಮಹಿಳೆ. ಅವರು ಕೂಡ ಮಾರ್ಚ್ 13ರಿಂದ 18ರವರೆಗೆ ನಡೆದ ದೆಹಲಿಯ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿಂದ ಮಾರ್ಚ್ 20ರಂದು ವಾಪಸ್ ಬಂದಿದ್ದರು. ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 151 – ಬಳ್ಳಾರಿಯ 41 ಪುರುಷ. ದೆಹಲಿಯ ತಬ್ಲಿಘಿ ಜಮಾತ್ ಸಭೆಯಲ್ಲಿ ಮಾರ್ಚ್ 13ರಿಂದ 18ರವಗೆ ಭಾಗವಹಿಸಿದ್ದರು. ಅವರನ್ನು ಬಳ್ಳಾರಿಯ ಎಂ.ಡಿ.ಆರ್.ಎಸ್.ನಲ್ಲ ಕ್ವಾರಂಟೈನ್ ಮಾಡಲಾಗಿದ್ದು, ಇಲ್ಲಿಯವರೆಗೆ ಇವರಿಗೆ ರೋಗ ಲಕ್ಷಣಗಳು ಕಂಡು ಬಂದಿಲ್ಲ.
ಕರ್ನಾಟಕದಲ್ಲಿ ಒಟ್ಟು ಪತ್ತೆ ಮಾಡಲಾಗಿರುವ 151 ಸೋಂಕಿರಲ್ಲಿ 8 ಮಂದಿ ಕೇರಳದವರಾಗಿದ್ದಾರೆ. ಅವರು ಕರ್ನಾಟಕದ ವಿಮಾನ ನಿಲ್ದಾಣಗಳಿಗೆ ಆಗಮಿಸಿ, ಕರ್ನಾಟಕದಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಏಪ್ರಿಲ್ 4ರಂದು 86 ಜನರನ್ನು ಮಂಗಳೂರು ಕಡಲು ಬಂದರಿನಲ್ಲಿ ತಪಾಸಣೆ ಮಾಡಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ವಿದೇಶದಿಂದ ಬಂದು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಕ್ವಾರಂಟೈನ್‍ನಲ್ಲಿದ್ದ 47 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ.