ನೆಲಮಂಗಲ: ಹಗಲಿರುಳು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ ಕಣ್ಣೀರ ಕಥೆ ಇದಾಗಿದೆ. 108 ಅಂಬುಲೆನ್ಸ್ ಸಿಬ್ಬಂದಿ ಇದೀಗ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಕೊರೊನಾ ವಾರಿಯರ್ಸ್ 108 ಅಂಬುಲೆನ್ಸ್ ಸಿಬ್ಬಂದಿ, ಸರ್.. ಒಂದೂವರೆ ತಿಂಗಳು ಆಯ್ತು ನಮ್ಮ ಪುಟಾಣಿ ಮಕ್ಕಳನ್ನ ನೋಡಿ ಎಂದು ಕಣ್ಣೀರು ಹಾಕುತ್ತಿದ್ದಾರೆ.
Advertisement
Advertisement
ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದೆ. ಹೀಗಾಗಿ ಸಿಬ್ಬಂದಿ ಕಷ್ಟದ ಸಮಯದಲ್ಲಿ ಬೆವರು ಕಣ್ಣೀರು ಸುರಿಸಿ ಕೆಲಸ ಮಾಡುತ್ತಿದ್ದಾರೆ. ಕಂಪನಿ ನೀಡುತ್ತಿರುವ ಸಂಬಳ ಸಾಕಾಗುತ್ತಿಲ್ಲ. ಜೀವನ ನಡೆಸಲು ಕಷ್ಟವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
Advertisement
ಕಳೆದ ನಾಲ್ಕು ವರ್ಷದಿಂದ ನಮ್ಮ ಬೇಡಿಕೆ ಇದೆ ಆಗಿದೆ. ಆದರೆ ಯಾವುದೇ ಸರ್ಕಾರ ಗಮನಹರಿಸಿಲ್ಲ. 108 ಅಂಬುಲೆನ್ಸ್ ಚಾಲಕನಿಗೆ ಕೇವಲ 10 ಸಾವಿರ, ಸ್ಟಾಪ್ ನರ್ಸ್ ಗೆ 11,500 ಪಡೆದು ಹೇಗೆ ಜೀವನ ನಡೆಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
Advertisement
ಇದು ಕೇವಲ ನೆಲಮಂಗಲ ತಾಲೂಕಿನ ಪರಿಸ್ಥಿತಿ ಇಲ್ಲ ರಾಜ್ಯದ 108 ಸಿಬ್ಬಂದಿ ವ್ಯಥೆಯಾಗಿದ್ದು, ಕೊರೊನಾ ವಾರಿಯರ್ಸ್ ಗೋಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದಲ್ಲಿ ಸೂಕ್ತ ಪರಿಹಾರ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.