-ಪ್ರತಿನಿತ್ಯ 200 ರಿಂದ 300 ಜನಕ್ಕೆ ಶುಚಿ-ರುಚಿಯಾದ ಊಟ
ಮಡಿಕೇರಿ: ಕೊರೊನಾ ಲಾಕ್‍ಡೌನ್‍ನಿಂದ ಕೊಡಗು ಜಿಲ್ಲೆಯಲ್ಲಿ ಯಾವುದೇ ಹೋಟೆಲ್ ಗಳು, ಉಪಹಾರ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿಲ್ಲ. ಈ ನಡುವೆ ಕೊರೋನಾ ಸೋಂಕು ಹರಡದಂತೆ ತಡೆಯಲು ರಾತ್ರಿ ಹಗಲೆನ್ನದೆ ಶ್ರಮಿಸುತ್ತಿರುವ ಸರ್ಕಾರಿ ಕಚೇರಿಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಸಿವು ನೀಗಿಸುವುದಕ್ಕಾಗಿ ಮಡಿಕೇರಿ ಕೊಡವ ಸಮಾಜ ಅನ್ನ ದಾಸೋಹದ ಸೇವೆಯಲ್ಲಿ ತೊಡಗಿಸಿಕೊಂಡಿದೆ.
Advertisement
ಪ್ರತಿದಿನ ಮಂಜಿನ ನಗರಿ ಮಡಿಕೇರಿ ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಕರ್ತವ್ಯ ನಿರತ ಸರ್ಕಾರಿ ಉದ್ಯೋಗಿಗಳು, ಪೌರ ಕಾರ್ಮಿಕರು, ಪೊಲೀಸರು ಸೇರಿದಂತೆ ಆರೋಗ್ಯ ಕಾರ್ಯಕರ್ತರಿಗೆ ಶುಚಿ-ರುಚಿಯಾದ ಬಿಸಿ ಬಿಸಿ ಊಟ ನೀಡಲಾಗುತ್ತಿದೆ. ಏ.16ರಿಂದ ದಾಸೋಹವನ್ನು ಆರಂಭಿಸಲಾಗಿದ್ದು, ಪ್ರತಿದಿನ 200 ರಿಂದ 300 ಮಂದಿ ಊಟ ಮಾಡುತ್ತಿದ್ದಾರೆ.
Advertisement
Advertisement
ಕೊಡವ ಸಮಾಜದ ಈ ಕಾರ್ಯಕ್ಕೆ ಅನೇಕರು ದಾನಿಗಳು ಕೊಡವ ಸಮಾಜದೊಂದಿಗೆ ಕೈ ಜೋಡಿಸಿದ್ದಾರೆ. ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೇ ದಿನ ನಿತ್ಯ ನೂರಾರು ಮಂದಿಗೆ ಅನ್ನ ದಾಸೋಹ ನಡೆಸುತ್ತಿದ್ದಾರೆ. ಲಾಕ್‍ಡೌನ್ ಅಗಿರುವ ಹಿನ್ನೆಲೆಯಲ್ಲಿ ಮೇ 3 ರವರೆಗೂ ದಾಸೋಹ ಮುಂದುವರೆಯಲಿದೆ. ಈ ಕಾರ್ಯ ಮಾಡುತ್ತಿರುವುದು ನಿಜವಾಗಿಯೂ ಖುಷಿಯ ವಿಚಾರ ಎಂದು ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ ಹೇಳುತ್ತಾರೆ.