– ಒಂದು ತಿಂಗಳು 200 ನಿರ್ಗತಿಕರಿಗೆ ಉಚಿತ ಊಟ
ಯಾದಗಿರಿ: ಕೊರೊನಾ ವೈರಸ್ ಭೀತಿ ಹಿನ್ನೆಲೆ ದೇಶಾದ್ಯಂತ ಕರ್ಫ್ಯೂ ಹೇರಲಾಗಿದೆ. ಈ ಸಮಯದಲ್ಲಿ ನಿರ್ಗತಿಕರಿಗೆ ಮತ್ತು ಬಡ ಕೂಲಿ ಕಾರ್ಮಿಕರಿಗೆ ಒಂದು ಹೊತ್ತು ಊಟ ಸಹ ಸಿಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಸ್ಥಿತಿವಂತರು ತಮ್ಮ ಕೈಲಾದ ಸಹಾಯವನ್ನು ಮಾಡುವಂತೆ ಮತ್ತು ಈ ಕೆಲಸವನ್ನು ಚಾಲೆಂಜ್ ಆಗಿ ಸ್ವೀಕರಿಸುವಂತೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ ರಾಜ್ಯದ ಜನತೆಯಲ್ಲಿ ಮನವಿಯನ್ನು ಮಾಡಿದ್ದರು.
Advertisement
ಪಬ್ಲಿಕ್ ಟಿವಿಯ ಮನವಿಗೆ ಸ್ಪಂದಿಸಿದ ಯಾದಗಿರಿ ವೈದ್ಯ ಮತ್ತು ಯುವಕನೋರ್ವ ಚಾಲೆಂಜ್ ಸ್ವೀಕರಿಸಿ, ಭಾರತ್ ಲಾಕ್ ಡೌನ್ ಇರುವಷ್ಟು ದಿನ 200 ಮಂದಿಗೆ ಒಂದು ಹೊತ್ತು ಊಟ ನೀಡಲು ಮುಂದಾಗಿದ್ದಾರೆ. ಯಾದಗಿರಿ ಖಾಸಗಿ ವೈದ್ಯ ವಿರೇಶ್ ಜಾಕಾ ಮತ್ತು ಸ್ನೇಹಿತ ಅನಿಲ್ ಜೊತೆಗೂಡಿ ನಗರದ ಕುಷ್ಠರೋಗಳ ಕಾಲೋನಿಯ ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಇದನ್ನೂ ಓದಿ: ಕೊರೊನಾ ವಿರುದ್ಧ ಹೋರಾಟ- ಹೆಚ್.ಆರ್ ರಂಗನಾಥ್ ಚಾಲೆಂಜ್ ಸ್ವೀಕರಿಸಿದ ಶಾಸಕ ರಘುಪತಿ ಭಟ್
Advertisement
Advertisement
ಒಂದು ತಿಂಗಳು 200 ಜನಕ್ಕೆ ಒಂದು ಹೊತ್ತು ಆಹಾರ ಪೂರೈಕೆ ಮಾಡಲು ಈ ಇಬ್ಬರು ನಿರ್ಧರಿಸಿದ್ದಾರೆ. ದಿನಕ್ಕೆ 50 ಕೆ.ಜಿ ಊಟ ತಯಾರಿಸಿ ಗುಡಿಸಲುಗಳಿಗೆ ಪ್ಯಾಕೆಟ್ ಮೂಲಕ ಆಹಾರ ಹಂಚಿಕೆ ಕಾರ್ಯ ನಡೆಯುತ್ತಿದೆ. ಮುಂಜಾಗ್ರತೆಯಾಗಿ ಅಧಿಕಾರಿಗಳ ನೇತೃತ್ವದಲ್ಲಿ ಈ ಆಹಾರ ತಯಾರಿಸಲಾಗುತ್ತದೆ. ಬಳಿಕ ಅಧಿಕಾರಿಗಳ ನೇತೃತ್ವದಲ್ಲಿ ನಿರ್ಗತಿಕರ ಬಳಿಗೆ ತೆರಳಿ ಆಹಾರ ಪೂರೈಕೆ ಮಾಡಲಾಗುತ್ತಿದೆ. ವೈದ್ಯ ವಿರೇಶ್ ಮತ್ತು ಅನಿಲ್ ರ ಕಾರ್ಯಕ್ಕೆ ಪಬ್ಲಿಕ್ ಟಿವಿ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.
Advertisement
ನಿನ್ನೆಯಷ್ಟೇ ಉಡುಪಿ ಶಾಸಕ ರಘುಪತಿ ಭಟ್, ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಅವರು ಚಾಲೆಂಜ್ ಸ್ವೀಕರಿಸಿ ನಿರ್ಗತಿಕರಿಗೆ ಅನ್ನದಾನ ಮಾಡುತ್ತಿದ್ದಾರೆ.