ತಪ್ಪು ಮಾಡ್ಬೇಡಿ, ಕೊರೊನಾ ವೈರಸ್ ದೀರ್ಘಕಾಲ ನಮ್ಮೊಂದಿಗಿರುತ್ತೆ: WHO

Public TV
1 Min Read
WHO 1

ಜಿನೀವಾ: ಕೊರೊನಾ ವೈರಸ್ ಅಥವಾ ಕೋವಿಡ್ 19 ಎಂಬ ಮಹಾಮಾರಿ ಇನ್ನೂ ದೀರ್ಘ ಕಾಲ ಈ ಜಗತ್ತಿನೊಂದಿಗೆ ಇರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್ ಬುಧವಾರ ಮಾತನಾಡಿ, ಹಲವು ದೇಶಗಳು ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಆರಂಭಿಕ ಹಂತದಲ್ಲಿರುವುದಾಗಿ ಹೇಳಿವೆ. ಆದರೆ ಈ ಮಹಾಮಾರಿ ಜಗತ್ತಿನಲ್ಲಿ ಇನ್ನೂ ದೀರ್ಘಕಾಲ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.

Corona 26

ಕೆಲವೊಂದು ದೇಶಗಳು ನಮ್ಮಲ್ಲಿ ಕೋವಿಡ್ 19 ನಿಯಂತ್ರಣದಲ್ಲಿದೆ ಎಂದು ಭಾವಿಸಿದ್ದಾರೆ. ಆದರೆ ಅಲ್ಲಿ ಕೂಡ ಸೋಂಕುಗಳು ಕಂಡುಬರುತ್ತಲೇ ಇವೆ. ಇತ್ತ ಆಫ್ರಿಕಾ ಮತ್ತು ಅಮೆರಿಕದಲ್ಲಿಯೂ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಜಗತ್ತಿನ ಎಲ್ಲಾ ದೇಶಗಳು ಎಚ್ಚರದಿಂದಿದ್ದು, ಜಾಗ್ರತೆ ವಹಿಸಬೇಕು ಎಂದಿದ್ದಾರೆ.

ಜನವರಿ 30ರಂದೇ ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಜಾಗತಿಕ ತುರ್ತು ಆರೋಗ್ಯ ಸಮಸ್ಯೆ ಎಂದು ಘೋಷಿಸಿತ್ತು. ಆದರೆ ಕೊರೊನಾ ವೈರಸ್ ವಿಚಾರವಾಗಿ ಅಮೆರಿಕ ಸಾಕಷ್ಟು ಟೀಕೆಗಳನ್ನು ಎದುರಿಸಿತ್ತು ಎಂದರು.

WHO

ಹೆಚ್ಚಿನ ದೇಶಗಳು ಈ ಸಾಂಕ್ರಾಮಿಕ ರೋಗದ ಆರಂಭಿಕ ಹಂತದಲ್ಲಿವೆ. ಮತ್ತೆ ಕೆಲವು ದೇಶಗಳಲ್ಲಿ ಕೋವಿಡ್-19 ಪ್ರಕರಣಗಳು ಬಹುಬೇಗ ಹರಡಿದ್ದು, ಸದ್ಯ ಮತ್ತೆ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ಕೊರೊನಾ ವೈರಸ್ ವಿಚಾರದಲ್ಲಿ ಯಾವುದೇ ತಪ್ಪು ಮಾಡಬೇಡಿ. ಯಾಕಂದರೆ ಇದು ಇನ್ನೂ ದೀರ್ಘ ಕಾಲ ನಮ್ಮೊಂದಿಗೆ ಅಂದರೆ ಈ ಜಗತ್ತಿನೊಂದಿಗೆ ಇರುತ್ತದೆ ಎಂದು ಟೆಡ್ರೊಸ್ ಎಚ್ಚರಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *