ನೆಲಮಂಗಲ: ಇತ್ತೀಚೆಗಷ್ಟೇ ಮನೆಯ ಶೌಚಾಲಯದಲ್ಲಿ ಕಾಲು ಜಾರಿಬಿದ್ದು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದ, ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ.ಎಂ ಲೀಲಾವತಿ,ಎರಡನೇ ಕೊರೊನಾ ಲಸಿಕೆ ಪಡೆದು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
Advertisement
ಗುರುವಾರ ಡಾ.ಎಂ.ಲೀಲಾವತಿ, ನಟ ಪುತ್ರ ವಿನೋದ್ ರಾಜ್ ಜೊತೆಗೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ಸರ್ಕಾರಿ ಆಸ್ಪತ್ರೆಯ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆದರು. ಮಹಾಮಾರಿ ಕೊರೊನಾ ಮೂರನೇ ಅಲೆ ಬರುವ ಬಗ್ಗೆ ಹೀಗಾಗಲೇ ತಜ್ಞರ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಎಲ್ಲಾ ಜನರು ಲಸಿಕೆ ಪಡೆಯಿರಿ ಯಾರು ಮೈಮರೆಯದಂತೆ ಲಸಿಕೆ ಪಡೆಯಿರಿ ಎಂದು ಹಿರಿಯ ನಟಿ ಜಾಗೃತಿ ಮೂಡಿಸಿದ್ದಾರೆ. ಇದನ್ನೂ ಓದಿ:ಕಾಲು ಜಾರಿ ಬಿದ್ದು ಹಿರಿಯ ನಟಿ ಲೀಲಾವತಿಗೆ ಗಾಯ
Advertisement
Advertisement
ಜನರಲ್ಲಿ ಜಾಗೃತಿ ಮೂಡಿಸಿದ ಹಿರಿಯ ನಟಿ ಡಾ.ಲೀಲಾವತಿ, ಲಸಿಕೆಯಿಂದ ಮಹಾಮಾರಿ ಕೊರೊನಾ ದೂರವಿಡಿ ಎಂದಿದ್ದಾರೆ. ಅಲ್ಲದೇ ಲವಲವಿಕೆಯಿಂದ ಲಸಿಕೆ ಪಡೆದು ಜನರಲ್ಲಿ ಜಾಗೃತಿ ಮೂಡಿಸಿದ್ದಲ್ಲದೆ, ನಾಗರಿಕರಿಗೆ ಅರಿವು ಮೂಡಿಸಿದ್ದಾರೆ. ಇದನ್ನೂ ಓದಿ:ಉಗ್ರರಿಗೆ ತಕ್ಕ ಪಾಠ ಕಲಿಸಿ- ಕಣ್ಣೀರು ಹಾಕಿದ ಹಿರಿಯ ನಟಿ ಲೀಲಾವತಿ
Advertisement