ನವದೆಹಲಿ: ದೇಶದಲ್ಲಿ ಕೊರೊನಾ ಲಾಕ್‍ಡೌನ್‍ನಿಂದ ಮತ್ತಷ್ಟು ವಿನಾಯಿತಿ ನೀಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ನಿನ್ನೆ ರಾತ್ರಿ ಪ್ರಕಟಿಸಿದ ಮಾರ್ಗಸೂಚಿಯಲ್ಲಿ ಎಲ್ಲಾ ಅಂಗಡಿ ತೆರೆಯಲು ಅವಕಾಶ ನೀಡಿತ್ತು. ಆದರೆ ಇಂದು ಮಧ್ಯಾಹ್ನ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿರುವ ಸರ್ಕಾರ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ.
ಕೆಲವೊಂದನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಬಗೆಯ ಅಂಗಡಿಗಳನ್ನು ತೆರೆಯಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ರಾಜ್ಯದಲ್ಲಿ ಕರ್ನಾಟಕ ಅಂಗಡಿ ಮತ್ತು ಮಳಿಗೆಗಳ ಕಾಯ್ದೆ ಪ್ರಕಾರ ನೋಂದಣಿ ಆಗಿರುವ ಅಂಗಡಿ ತೆರೆಯಬಹುದಾಗಿದೆ. ಆದ್ರೆ ಕಂಟೈನ್‍ಮೆಂಟ್ ಜೋನ್‍ಗಳಲ್ಲಿ ಮೇ 3ವರೆಗೂ ಯಥಾರೀತಿಯ ಲಾಕ್‍ಡೌನ್ ಮುಂದುವರಿಯಲಿದೆ. ಇಲ್ಲಿನ ಮಂದಿಗೆ ಯಾವುದೇ ವಿನಾಯಿತಿ, ರಿಯಾಯಿತಿ ನೀಡಿಲ್ಲ.
Advertisement
Advertisement
ಯಾವುದಕ್ಕೆ ವಿನಾಯಿತಿ? ಯಾವುದಕ್ಕೆ ಇಲ್ಲ?
* ಮದ್ಯ – ಮಾರಾಟಕ್ಕೆ ಅವಕಾಶ ಸಿಕ್ಕಿದೆಯಾ?
ಉತ್ತರ – ಇಲ್ಲ (ಮೇ 3ವರೆಗೂ ಅವಕಾಶ ಇಲ್ಲ)
Advertisement
* ಗುಟ್ಕಾ, ತಂಬಾಕು ಮಾರಾಟಕ್ಕೆ ಅವಕಾಶ ಇದೆಯಾ?
ಉತ್ತರ – ಇಲ್ಲ (ಮೇ 3ವರೆಗೂ ಅವಕಾಶ ಇಲ್ಲ)
Advertisement
* ಹೇರ್ ಸಲೂನ್ ಶಾಪ್ ತೆರೆಯಬಹುದಾ?
ಉತ್ತರ – ಖಂಡಿತವಾಗಿ ಇಲ್ಲ .ಇದಕ್ಕೆ ಸಂಬಂಧಿಸಿದಂತೆ ಮೊದಲು ಗೊಂದಲ ಇತ್ತು. ಮಧ್ಯಾಹ್ನ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿತು.
* ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡಲಾಗಿದೆಯಾ?
ಉತ್ತರ – ಇಲ್ಲ. ಇದಕ್ಕೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿಲ್ಲ.
* ಶಾಪಿಂಗ್ ಮಾಲ್ ತೆರೆಯಬಹುದಾ?
ಉತ್ತರ – ಇಲ್ಲ. ಒಂದು ಮತ್ತು ಬಹು ಬ್ರ್ಯಾಂಡ್‍ನ ಶಾಪಿಂಗ್ ಮಾಲ್‍ಗಳನ್ನು ಮೇ 3ವರೆಗೂ ಓಪನ್ ಮಾಡಬಾರದು.
* ವಾಣಿಜ್ಯ ಸಂಕೀರ್ಣ, ಮಾರುಕಟ್ಟೆ ಮಳಿಗೆ ತೆರೆಯಬಹುದಾ?
ಉತ್ತರ – ಹೌದು.. ಆದರೆ ಷರತ್ತುಗಳು ಅನ್ವಯ. ನಗರಸಭೆ, ಕಾರ್ಪೋರೇಷನ್ ವ್ಯಾಪ್ತಿಯ ಹೊರಗಿರುವ ಪ್ರದೇಶಗಳಲ್ಲಿ ಮಾತ್ರ ಅವಕಾಶ. ಶೇ.50ರಷ್ಟು ಕಾರ್ಮಿಕರೊಂದಿಗೆ ಕೆಲಸ ಮಾಡಿಸಬೇಕು ಬೆಂಗಳೂರು ಸೇರಿದಂತೆ ನಗರ ಪ್ರದೇಶದಲ್ಲಿ ಇಲ್ಲ)
* ಯಾವ ರೀತಿಯ ಅಂಗಡಿಗಳನ್ನು ತೆರೆಯಬಹುದು?
ಉತ್ತರ – ಒಂಟಿ ಅಂಗಡಿಗಳು. ಸಾಲಾಗಿ ನಿರ್ಮಿಸಿರುವ ಅಂಗಡಿಗಳನ್ನು ತೆರೆಯಬಹುದು.
* ಬೆಂಗಳೂರಿನ ಎಲ್ಲೆಲ್ಲಿ ಅಂಗಡಿ ತೆರೆಯಬಹುದು?
ಉತ್ತರ – ವಸತಿ ಪ್ರದೇಶದಲ್ಲಿ ಅಂಗಡಿಗಳನ್ನು ತೆರೆಯಲು ಅವಕಾಶ.
* ಟೈಲರಿಂಗ್ ಶಾಪ್ ಓಪನ್ ಮಾಡಬಹುದಾ?
ಉತ್ತರ – ಹೌದು. ಮನೆ ಅಥವಾ ಪ್ರತ್ಯೇಕವಾಗಿರುವ ಟೈಲರಿಂಗ್ ಶಾಪ್‍ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.