ಉಡುಪಿ: ಮಹಾಮಾರಿ ಕೊರೊನಾ ವಿರುದ್ಧ ಪ್ರಧಾನಿ ಮೋದಿ ಜ್ಯೋತಿ ಬೆಳಗಲು ಕರೆ ನೀಡಿದ್ದು ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಸರ್ವಧರ್ಮೀಯರು ದೀಪ ಬೆಳಗಿ ಒಗ್ಗಟ್ಟು ಪ್ರದರ್ಶನ ಮಾಡಿದರು.
ಒಂಬತ್ತು ಗಂಟೆಯಾಗುತ್ತಿದ್ದಂತೆ ತಮ್ಮ ತಮ್ಮ ಮನೆಗಳಲ್ಲಿ ಕುಟುಂಬ ಸಮೇತರಾಗಿ ಜನ ದೀಪ ಬೆಳಗಿದರು. ವಿದ್ಯುತ್ ದೀಪವನ್ನು ಸಂಪೂರ್ಣವಾಗಿ ಆಫ್ ಮಾಡಿ ದೀಪ ಬೆಳಗಲಾಯಿತು. 10 ನಿಮಿಷಗಳ ಕಾಲ ದೀಪದ ಬೆಳಕಲ್ಲಿ ಜನ ಕಾಲ ಕಳೆದರು. ಕೆಲಕಾಲ ಪ್ರಾರ್ಥನೆ, ದೇಶದ ಒಳಿತಿಗಾಗಿ ಪ್ರಾರ್ಥಿಸಲಾಯ್ತು.
Advertisement
Advertisement
ಕೊರೊನಾಮಹಾಮಾರಿಯ ವಿರುದ್ಧ ಜಾತಿ ಧರ್ಮವನ್ನು ಮೀರಿ ಜನ ದೀಪ ಹಚ್ಚಿದರು. ಉಡುಪಿ ನಗರದ ಬ್ರಹ್ಮಗಿರಿಯ ಸೈಂಟ್ ಸಿಸಿಲಿಸ್ ಸಮೀಪ ಕ್ರೈಸ್ತ ಧರ್ಮೀಯ ಕುಟುಂಬ ಒಂಬತ್ತು ಗಂಟೆಗೆ ಸರಿಯಾಗಿ ದೀಪ ಬೆಳಗಿತು. ಉಡುಪಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ಆದೇಶದಂತೆ ಕ್ರೈಸ್ತ ಧರ್ಮೀಯರು ದೀಪ ಹಚ್ಚಿ ದೇವರ ಮುಂದೆ ಪ್ರಾರ್ಥನೆ ಸಲ್ಲಿಸಿದರು.
Advertisement
ಪುಟ್ಟ ಪುಟ್ಟ ಮಕ್ಕಳು ವಸತಿ ಸಮುಚ್ಛಯದ ಬಾಲ್ಕನಿಯಿಂದ ದ್ವೀಪ ಬೆಳಗ್ಗೆ ಕೊರೊನಾದ ವಿರುದ್ಧ ಹೋರಾಡುತ್ತಿರುವ ರೋಗಿಗಳು ಶುಶ್ರೂಷೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿ ಸರಕಾರಕ್ಕಾಗಿ ಪ್ರಾರ್ಥನೆ ಮಾಡಿದರು.
Advertisement
ಮುಸಲ್ಮಾನ ಕುಟುಂಬಗಳು ಮೊಬೈಲ್ ಟಾರ್ಚ್, ಕ್ಯಾಂಡಲ್ ಬೆಳಗಿದವು. ರೋಗದ ವಿರುದ್ಧ ಎಲ್ಲರೂ ಸಮಾನ ಮನಸ್ಕರಾಗಬೇಕು. ಸರ್ಕಾರದ ನಿರ್ಧಾರಕ್ಕೆ ತಲೆಬಾಗಬೇಕು ಎಂಬ ಸಂದೇಶ ದೇವಾಲಯಗಳ ನಗರಿಯಿಂದ ವ್ಯಕ್ತವಾಯ್ತು.