ಶಿವಮೊಗ್ಗ: ಗ್ರೀನ್ ಝೋನ್‍ನಲ್ಲಿದ್ದ ಚಿತ್ರದುರ್ಗ ಜಿಲ್ಲೆ ತಬ್ಲಿಘಿಗಳ ಎಂಟ್ರಿಯಿಂದ ರೆಡ್ ಝೋನ್‍ಗೆ ಬಂದಿದ್ದು, ಇದೇ ಹಾದಿಯಲ್ಲೀಗ ಶಿವಮೊಗ್ಗ ಇದೆ ಎನಿಸುತ್ತಿದೆ. ಯಾಕಂದ್ರೆ ಇದೀಗ ಶಿವಮೊಗ್ಗಕ್ಕೆ ತಬ್ಲಿಘಿಗಳ ಎಂಟ್ರಿಯಾಗಿದ್ದು, ಮಲೆನಾಡಿಗರಲ್ಲಿ ಕೊರೊನಾ ಭೀತಿ ಹೆಚ್ಚಿಸಿದೆ.
ಜಿಲ್ಲೆಯ ಶಿಕಾರಿಪುರ ಮೂಲದ 8 ಮತ್ತು ತೀರ್ಥಹಳ್ಳಿಯ ಒಬ್ಬರು ತಬ್ಲಿಘಿಗಳು ಗುಜರಾತ್‍ನ ಅಹಮದಾಬಾದ್‍ನಿಂದ ಬೆಳಗಾವಿ ಗಡಿ ಮೂಲಕ ಶಿವಮೊಗ್ಗಕ್ಕೆ ವಾಪಸ್ ಬಂದಿದ್ದು, ಇದು ಮಲೆನಾಡಿಗರಲ್ಲಿ ಭೀತಿ ಹೆಚ್ಚಿಸಿದೆ. ಮಾರ್ಚ್ 5ರಂದು ಗುಜರಾತ್‍ನ ಅಹಮದಾಬಾದ್‍ಗೆ ದಾವಣಗೆರೆಯಿಂದ ರೈಲಿನ ಮೂಲಕ ಜಿಲ್ಲೆಯ 9 ಜನರು ತೆರಳಿದ್ದರು. ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗವಹಿಸಿದ ನಂತರ ಮಸೀದಿಯೊಂದರಲ್ಲಿ ಇವರೆಲ್ಲಾ ಆಶ್ರಯ ಪಡೆದಿದ್ದರು. ಅಲ್ಲದೇ ಲಾಕ್‍ಡೌನ್ ವೇಳೆ ಗುಜರಾತ್ ಸರ್ಕಾರ ಇವರನ್ನೆಲ್ಲಾ ಕ್ವಾರಂಟೈನ್‍ನಲ್ಲಿ ಕೂಡ ಇರಿಸಿತ್ತು. ಅಲ್ಲಿನ ಸರ್ಕಾರದ ಅನುಮತಿ ಮೇರೆಗೆ ಶುಕ್ರವಾರ ರಾತ್ರಿ ಈ ತಬ್ಲಿಘಿಗಳು ಮುಂಬೈ, ಬೆಳಗಾವಿ ಮೂಲಕ ಇದೀಗ ಶಿವಮೊಗ್ಗಕ್ಕೆ ಎಂಟ್ರಿಯಾಗಿದ್ದಾರೆ. ಇವರೆಲ್ಲರನ್ನೂ ಪ್ರಾಥಮಿಕ ಹಂತದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಶಿವಮೊಗ್ಗದ ಬಾಪೂಜಿನಗರದ ಹಾಸ್ಟೆಲ್‍ವೊಂದರಲ್ಲಿ ಇವರನ್ನು ಕ್ವಾರಂಟೈನ್ ಮಾಡಿ ನಿಗಾವಹಿಸಲಾಗಿದೆ.
Advertisement
Advertisement
ಕಳೆದ 50 ದಿನಗಳಿಂದ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗಳು ದಿನದ 24 ಗಂಟೆಯೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ, ರಾತ್ರಿ-ಹಗಲು ಕೊರೊನಾ ನಿಯಂತ್ರಣ ಮಾಡುವಲ್ಲಿ ಹಾಗೂ ಜಿಲ್ಲೆಗೆ ಕೊರೊನಾ ಹರಡದಂತೆ ಶ್ರಮಿಸುತ್ತಿದ್ದಾರೆ. ಅದರೊಂದಿಗೆ ಎಲ್ಲಾ ತಹಶೀಲ್ದಾರ್ ಗಳು, ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯ್ತಿ ನೌಕರರು, ಆರೋಗ್ಯ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ, ನಗರಸಭೆ, ಪಟ್ಟಣ ಪಂಚಾಯ್ತಿ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಸೋಂಕಿತ ಪ್ರಕರಣ ಪತ್ತೆಯಾಗದ ಹಿನ್ನೆಲೆ ಜಿಲ್ಲೆ ಹಸಿರು ಪಟ್ಟಿಯಲ್ಲಿದೆ. ಆದರೆ ಜನರ ಜಿಲ್ಲಾಡಳಿತಕ್ಕೆ ಸಹಕಾರ ನೀಡದೇ, ವಿನಾಕಾರಣ ತಿರುಗಾಟದಿಂದಾಗಿ ಇದೀಗ ಕೊರೊನಾ ನಿಯಂತ್ರಣ ಕೈತಪ್ಪಿ ಹೋಗುವ ಎಲ್ಲಾ ಸಾಧ್ಯತೆ ಕಾಣಿಸುತ್ತಿದೆ.
Advertisement
Advertisement
ಅಲ್ಲದೇ ಈಗಾಗಲೇ ಬೇರೆ ಜಿಲ್ಲೆ-ರಾಜ್ಯದಿಂದ ನೂರಾರು ವಾಹನಗಳು ಶಿವಮೊಗ್ಗ ಜಿಲ್ಲೆಯೆಲ್ಲೆಡೆ ಓಡಾಡತೊಡಗಿದ್ದು, ಇದು ಸ್ಥಳೀಯರಲ್ಲಿ ಭಯ ಹೆಚ್ಚಾಗುವಂತೆ ಮಾಡಿದೆ. ಇದೆಲ್ಲದರ ಜೊತೆಯಲ್ಲಿ ಸುಳ್ಳು ಸುದ್ದಿಗಳನ್ನು ಒಂದು ವರ್ಗ ಹಬ್ಬಿಸುತ್ತಿದ್ದು, ಇದು ಕೂಡ ಭಯದ ವಾತಾವರಣ ನಿರ್ಮಾಣವಾಗುವಂತೆ ಮಾಡಿದೆ. ಜನರು ಸಹ ಎಂದೂ ತರಕಾರಿ-ಹಣ್ಣುಗಳನ್ನು ನೋಡಿಯೇ ಇಲ್ಲವೆಂಬ ರೀತಿಯಲ್ಲಿ ಖರೀದಿಗೆ ಮುಗಿ ಬಿದ್ದಿರುವುದನ್ನ ಗಮನಿಸಿದರೆ ಜಿಲ್ಲೆ ಹಸಿರು ಹೋಗಿ ಕೆಂಪು ಪಟ್ಟಿಗೆ ಬರುವ ಸಾಧ್ಯತೆ ಹೆಚ್ಚಿದೆ. ಈ ಪರಿಸ್ಥಿತಿ ಕೈ ಮೀರಿ ಹೋದರೆ ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು, ಕಳೆದ ಒಂದೂವರೆ ತಿಂಗಳಿನಿಂದ ಪಟ್ಟ ಶ್ರಮ ವ್ಯರ್ಥವಾಗಲಿದ್ದು, ಜನರು ಈ ಬಗ್ಗೆ ಯೋಚಿಸಿ ಜಿಲ್ಲಾಡಳಿತಕ್ಕೆ ಸಹಕರಿಸಿ, ವಿನಾಕಾರಣ ಓಡಾಡದೆ ಜಾಗೃತಿವಹಿಸಬೇಕಿದೆ.