ಬೆಂಗಳೂರು: ಸೋಮವಾರದಿಂದ 9ರಿಂದ 12ನೇ ತರಗತಿಯವರೆಗೆ ತರಗತಿಗಳು ಆರಂಭಗೊಳ್ಳಲಿವೆ. ಈ ಹಿನ್ನಲೆ ಪ್ಯಾಲೇಸ್ ಗುಟ್ಟಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸಿದ್ಧತೆಗಳನ್ನ ಮಾಡಿಕೊಂಡಿದ್ದು, ಶಾಲೆಯ ಆವರಣ, ತರಗತಿಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ.
Advertisement
ಶಾಲಾ ಆವರಣ, ಕ್ಲಾಸ್ ರೂಮ್, ಕಾರಿಡಾರ್‌ಗಳಲ್ಲಿ ಬಾಕ್ಸ್‌ಗಳನ್ನು ಹಾಕಲಾಗಿದೆ. ತರಗತಿಯಲ್ಲಿ ಒಂದು ಬೆಂಚ್ಗೆ ಇಬ್ಬರಿಗೆ ಮಾತ್ರ ಕೂರಲು ಅವಕಾಶ ಮಾಡಿಕೊಡಲಾಗುತ್ತಿದೆ. ಬೆಂಚ್ಗಳಿಗೂ ಇಬ್ಬರಿಗೆ ಮಾತ್ರ ಕೂರಲು ಬಾಕ್ಸ್‌ಗಳನ್ನು ಹಾಕಲಾಗಿದೆ. ಶಾಲೆಯಲ್ಲಿ ಪ್ರತ್ಯೇಕವಾದ ಐಸೋಲೇಷನ್ ರೂಮ್‍ನ ವ್ಯವಸ್ಥೆ ಮಾಡಲಾಗಿದ್ದು, ವಿದ್ಯಾರ್ಥಿಗಳ ಆರೋಗ್ಯದಲ್ಲಿ ಸಮಸ್ಯೆಯಾದರೆ ಕೂಡಲೇ ಐಸೋಲೇಷನ್ ರೂಮ್‍ಗೆ ಶಿಫ್ಟ್ ಮಾಡಿ, ಆರೋಗ್ಯ ವಿಚಾರಿಸಲಿದ್ದಾರೆ. ಇದನ್ನೂ ಓದಿ:ರಾಜ್ಯದಲ್ಲಿ ಜನಾಶೀರ್ವಾದ ಕಾರ್ಯಕ್ರಮ ತೆಳ್ಳಗೆ, ಬೆಳ್ಳಗೆ ನಡೆಯುತ್ತಿದೆ: ಅಶ್ವಥ್ ನಾರಾಯಣ್
Advertisement
Advertisement
ಕೊರೊನಾ ಲಾಕ್‍ಡೌನ್‍ನಿಂದ ಕಳೆದ ಒಂದೂವರೆ ವರ್ಷದಿಂದ ಶಾಲೆಗಳನ್ನು ಮುಚ್ಚಲಾಗಿತ್ತು. ಆದರೆ ಮಕ್ಕಳ ವಿದ್ಯಾಭ್ಯಾಸವನ್ನು ಗಮನದಲಿಟ್ಟುಕೊಂಡು ಸರ್ಕಾರ ಇದೀಗ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಹಿನ್ನೆಲೆ ಮತ್ತೆ ಶಾಲೆಗಳನ್ನು ಪುನಾರಂಭಿಸಲು ಸೂಚಿಸಿದೆ. ಇದನ್ನೂ ಓದಿ:ಮಹಿಳೆಯರಿಗೆ ಸೂಟ್ ಆಗುವಂತಹ ಸ್ಟೈಲಿಶ್ ಟೋಪಿಗಳು
Advertisement