ರಾಮನಗರ: ಮಹಾಮಾರಿ ಕೊರೊನಾ ವೈರೆಸ್ ಎಫೆಕ್ಟ್ ಇದೀಗ ಸದ್ದಿಲ್ಲದೇ ರೇಷ್ಮೆ ಬೆಳೆ ಮೇಲೆ ಪರಿಣಾಮ ಬೀರಿದೆ. ಒಂದೆಡೆ ರೈತರು ರೇಷ್ಮೆಗೂಡಿನ ಬೆಲೆ ಕುಸಿತಕ್ಕೆ ಕಂಗಾಲಾಗಿದರೆ ರೀಲರ್ಸ್ ಗಳು ತಮ್ಮ ಕಚ್ಚಾ ರೇಷ್ಮೆ ಸೇಲ್ ಆಗುತ್ತಿಲ್ಲ ಅಂತ ಕಂಗಾಲಾಗಿದ್ದಾರೆ. ಮಾರುಕಟ್ಟೆಗೆ ರೇಷ್ಮೆಗೂಡು ಟನ್‍ಗಟ್ಟಲೇ ದಿನನಿತ್ಯ ಬರುತ್ತಿದ್ದು ಅಲ್ಪ ಹಣದಲ್ಲೇ ಪೆಚ್ಚು ಮೋರೆ ಹಾಕಿಕೊಂಡು ರೈತರು ಮನೆಗೆ ತೆರಳುವಂತಾಗಿದೆ.
ಕೊರೊನಾ ರಾಜ್ಯಕ್ಕೆ ಕಾಲಿಡುವ ಮುನ್ನ ಸಾಕಷ್ಟು ಖುಷಿಯಲ್ಲಿ ಮಾರುಕಟ್ಟೆಗೆ ಬಂದು ರೇಷ್ಮೆಗೂಡು ಮಾರಾಟ ಮಾಡಿ ಹೋಗುತ್ತಿದ್ದ ರೈತರಿಗೆ ಇದೀಗ ಏಕಾಏಕಿ ಸಿಡಿಲು ಬಡಿದದಂತಾಗಿದೆ. ಕೊರೊನಾ ಎಫೆಕ್ಟ್‍ನಿಂದ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ದಿಢೀರ್ ಕುಸಿತ ಕಂಡಿದ್ದು ರೈತರು ಪರದಾಡುವಂತಾಗಿದೆ.
Advertisement
Advertisement
ಕೊರೊನಾ ಮಹಾಮಾರಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ರೇಷ್ಮೆ ಮಾರುಕಟ್ಟೆಗಳು ಸಹ ಬಂದ್ ಆಗಿವೆ. ಈ ಹಿನ್ನೆಲೆಯಲ್ಲಿ ರೈತರು ರಾಮನಗರದ ರೇಷ್ಮೆ ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಅಷ್ಟೇ ಅಲ್ಲದೆ ಹೊರರಾಜ್ಯಗಳಿಂದಲೂ ಸಹ ರೇಷ್ಮೆಗೂಡು ಮಾರುಕಟ್ಟೆಗೆ ಬರುತ್ತಿರುವುದು ಬೆಲೆ ಕುಸಿಯುವಂತಾಗಿದೆ.
Advertisement
ಅದರಲ್ಲೂ ರೀಲರ್ಸ್ ಗಳು ತಮ್ಮಲ್ಲಿನ ಕಚ್ಚಾ ರೇಷ್ಮೆಯೇ ಮಾರಾಟವಾಗುತ್ತಿಲ್ಲ. ಈ ರೇಷ್ಮೆ ತೆಗೆದುಕೊಂಡು ಏನ್ ಮಾಡೋದು ಎಂದು ವಾರದಲ್ಲಿ 2 ದಿನಗಳು ಮಾತ್ರವೇ ರೇಷ್ಮೆಗೂಡು ಖರೀದಿಗೆ ಮುಂದಾಗಿದ್ದಾರೆ. ಇನ್ನುಳಿದ ದಿನಗಳಲ್ಲಿ ಸುಮ್ಮನೆ ಕುಳಿತಿದ್ದಾರೆ. ಇದರಿಂದ ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದೆ.
Advertisement
ಕೊರೊನಾ ವೈರಸ್ ರಾಜ್ಯಕ್ಕೆ ಕಾಲಿಡುವ ಮುನ್ನ ರೇಷ್ಮೆ ಬೆಳೆಗೆ ಉತ್ತಮವಾದ ಬೆಲೆಯಿತ್ತು. ಪ್ರತಿನಿತ್ಯ ರೇಷ್ಮೆ ಮಾರುಕಟ್ಟೆಯಲ್ಲಿ ರೀಲರ್ಸ್ ಗಳು ಸಹ ಪೈಪೋಟಿ ನಡೆಸಿ ರೇಷ್ಮೆಗೂಡು ಖರೀದಿಯ ಮಾಡುತ್ತಿದ್ದರು. ಆದರೆ ಕೊರೊನಾ ವೈರಸ್ ಕಾಲಿಡುತ್ತಿದ್ದಂತೆ ರೇಷ್ಮೆಗೂಡಿನ ಬೆಲೆ ಸಹ ಕುಸಿತ ಕಂಡಿದೆ.
ಕಳೆದ 15 ದಿನಗಳ ಹಿಂದೆ ಪ್ರತಿನಿತ್ಯ 32ರಿಂದ 35 ಟನ್ ರೇಷ್ಮೆಗೂಡು ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಇದೀಗ ಪ್ರತಿನಿತ್ಯ ಮಾರುಕಟ್ಟೆಗೆ 45ರಿಂದ 50 ಟನ್ ರೇಷ್ಮೆಗೂಡು ಮಾರುಕಟ್ಟೆಗೆ ಬರುತ್ತಿದೆ. ಅಲ್ಲದೇ ರೇಷ್ಮೆ ಮಾರುಕಟ್ಟೆಯಲ್ಲಿ 400 ಲಾಟ್‍ಗಳಷ್ಟಿದ್ದ ಗೂಡು 670 ಲಾಟ್‍ಗೆ ಏರಿಕೆಯಾಗಿದೆ. ಇದರಿಂದಾಗಿ ಹಳದಿ ಗೂಡಿನ ಬೆಲೆ ಪ್ರತಿ ಕೆಜಿಗೆ ಸರಾಸರಿ 280 ರೂಪಾಯಿಗೆ ಇಳಿದರೆ, ಬಿಳಿ ರೇಷ್ಮೆಗೂಡು 270 ರೂಪಾಯಿಗಳಷ್ಟಿದೆ. ಆದರೆ ಹಿಂದಿನ ದರದಲ್ಲಿ ಬರೋಬ್ಬರಿ 100 ರೂಪಾಯಿಗಳಷ್ಟು ಇಳಿಕೆಯಾಗಿರುವುದು ರೈತರಲ್ಲಿ ಸಾಕಷ್ಟು ಆತಂಕವನ್ನುಂಟು ಮಾಡಿದೆ.
ಈ ಎಲ್ಲ ಬೆಳವಣಿಗೆಯಿಂದ ರೀಲರ್ಸ್ ಗಳು ಹಾಗೂ ರೈತರು ಸಹ ಪರದಾಡುವಂತಾಗಿದೆ. ಪ್ರತಿ ವರ್ಷವೂ ಈ ಸಮಯಕ್ಕೆ ರೇಷ್ಮೆಗೂಡಿನ ಬೆಲೆ ಏರಿಕೆಯಾಗುತ್ತಿತ್ತು. ಇದೀಗ ಕೊರೊನಾ ಎಫೆಕ್ಟ್ ರೇಷ್ಮೆ ಬೆಳೆಗಾರರಿಗೆ ಕೈ ಕೊಡುವಂತೆ ಮಾಡಿದ್ದು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.