ಬೆಂಗಳೂರು: ಹಸಿರು ವಲಯದಲ್ಲಿದ್ದ ರಾಮನಗರ ಜಿಲ್ಲೆಯನ್ನು ಕೊರೊನಾ ಕೆಂಪು ವಲಯವನ್ನಾಗಿ ಪರಿವರ್ತಿಸಿದ ಹೊಣೆ ಯಾರು ಹೊರುತ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್:
ಅಧಿಕಾರಿಗಳು ಮತ್ತು ಆಳುವವರ ಅವಿವೇಕತನದಿಂದ ರಾಮನಗರ ಜಿಲ್ಲೆಯ ಜನತೆಯ ನೆಮ್ಮದಿಗೆ ಭಂಗ ಬಂದಿದೆ. ಸೋಂಕು ತಡೆಯಬೇಕಿದ್ದ ಸರ್ಕಾರವೇ ಕೊರೊನಾ ಹರಡಿಸಿದ ಮತಿಗೇಡಿತನವನ್ನು ಜಿಲ್ಲೆಯ ಜನತೆ ಎಂದಿಗೂ ಕ್ಷಮಿಸರು. ಹಸಿರು ವಲಯದ ಜಿಲ್ಲೆಗಳಲ್ಲಿ ಕಾರ್ಖಾನೆಗಳ ಆರಂಭಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ರಾಮನಗರ ಹೊರತುಪಡಿಸಿ ಎಂದು ಉಲ್ಲೇಖಿಸಲಾಗಿದೆ. ಇದಕ್ಕೆ ಸರ್ಕಾರದ ಬೇಜವಾಬ್ದಾರಿ ಹಾಗೂ ದೂರದೃಷ್ಟಿಯ ಕೊರತೆ ಕಾರಣ.
Advertisement
ಕೊರೊನಾ ಸೋಂಕು ಮುಕ್ತ ಹಸಿರು ವಲಯದಲ್ಲಿದ್ದ ರಾಮನಗರ ಜಿಲ್ಲೆಯನ್ನು ಕೊರೊನಾ ಪೀಡಿತ ಕೆಂಪು ವಲಯವನ್ನಾಗಿ ಪರಿವರ್ತಿಸಿದ ಅಸೀಮ ನಿರ್ಲಕ್ಷದ ಹೊಣೆಯನ್ನು ಯಾರು ಹೊರುತ್ತಾರೆ? ಅಧಿಕಾರಿಗಳು ಇಲ್ಲವೇ ಸರ್ಕಾರ ಯಾರು ಜವಾಬ್ದಾರರು ಉತ್ತರಿಸಿ?
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) April 24, 2020
Advertisement
ಕೊರೊನಾ ಸೋಂಕು ಮುಕ್ತ ಹಸಿರು ವಲಯದಲ್ಲಿದ್ದ ರಾಮನಗರ ಜಿಲ್ಲೆಯನ್ನು ಕೊರೊನಾ ಪೀಡಿತ ಕೆಂಪು ವಲಯವನ್ನಾಗಿ ಪರಿವರ್ತಿಸಿದ ಅಸೀಮ ನಿರ್ಲಕ್ಷದ ಹೊಣೆಯನ್ನು ಯಾರು ಹೊರುತ್ತಾರೆ? ಅಧಿಕಾರಿಗಳು ಇಲ್ಲವೇ ಸರ್ಕಾರ ಯಾರು ಜವಾಬ್ದಾರರು ಉತ್ತರಿಸಿ? ಎಂದು ಟ್ವೀಟ್ ಮಾಡಿದ್ದಾರೆ.