– ಕೊರೊನಾ ಮೊದಲು ಬಂದಿದ್ದು ಈ ಮಹಿಳೆಗೆ
– ಅಧ್ಯಯನ ವರದಿ ಆಧಾರಿಸಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟ
ಬೀಜಿಂಗ್/ ಲಂಡನ್: ವಿಶ್ವಾದ್ಯಂತ ನಡುಕ ಹುಟ್ಟಿಸಿರುವ ಕೊರೊನಾ ವೈರಸ್ ತಗಲಿದ ಮೊದಲು ರೋಗಿ ಯಾರು ಎನ್ನುವುದು ಈಗ ಬೆಳಕಿಗೆ ಬಂದಿದೆ.
ವುಹಾನ್ ನಲ್ಲಿ ಸೀಗಡಿ ಮಾರಾಟ ಮಾಡುತ್ತಿದ್ದ 57 ವರ್ಷದ ‘ವೀ’ ಎಂಬಾಕೆ ಮೊದಲ ಕೊರೊನಾ ಸಂತ್ರಸ್ತೆ ಎಂದು ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆ ಈ ವರದಿ ಮಾಡಿದೆ.
Advertisement
ಆಸ್ಟ್ರೇಲಿಯಾದ ಸಿಡ್ನಿ ವಿಶ್ವ ವಿದ್ಯಾಲಯದ ಸ್ಕೂಲ್ ಲೈಫ್ ಆಂಡ್ ಎನ್ವಿರಾನ್ಮೆಂಟ್ ಸೈನ್ಸ್ ಪ್ರೊಫೆಸರ್ ಎಡ್ವರ್ಡ್ ಹೋಮ್ಸ್, ಚೀನಾದ ಶಾಂಘೈ ವಿಶ್ವವಿದ್ಯಾಲಯದ ಪಬ್ಲಿಕ್ ಹೆಲ್ತ್ ಕ್ಲಿನಿಕಲ್ ಕೇಂದ್ರದ ಪ್ರೊಫೆಸರ್ ಜಾಂಗ್ ಯಂಗ್‍ಜೆನ್ ಶಾಂಘೈ ಫುಡಾನ್ ವಿಶ್ವವಿದ್ಯಾಲಯದ ‘ಸೆಲ್’ ಜರ್ನಲ್ ಗೆ ಬರೆದ ಅಧ್ಯಯನ ವರದಿಯನ್ನು ಆಧಾರಿಸಿ ಪತ್ರಿಕೆ ವರದಿ ಮಾಡಿದೆ.
Advertisement
ಪತ್ರಿಕೆಯ ಪ್ರಕಾರ, ಡಿಸೆಂಬರ್ 10 ರಂದು ಸಿಗಡಿಯನ್ನು ಹುನಾನ್ ಸಮುದ್ರ ಆಹಾರ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾಗ ಈಕೆಗೆ ಜ್ವರ ಬಂದಿದೆ. ಈಕೆ ಕ್ಲಿನಿಕ್‍ಗೆ ಹೋದಾಗ ಸಾಮಾನ್ಯ ಜ್ವರ ಎಂದು ಭಾವಿಸಿ ವೈದ್ಯರು ಇಂಜೆಕ್ಷನ್ ನೀಡಿದ್ದಾರೆ. ಇಂಜೆಕ್ಷನ್ ನೀಡಿದರೂ ಈಕೆಯ ಜ್ವರ ಜಾಸ್ತಿಯಾಗಿ ನಿತ್ರಾಣಗೊಂಡ ಕಾರಣ ಡಿಸೆಂಬರ್ 16 ರಂದು ವುಹಾನ್ ನಗರದಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಇದನ್ನೂ ಓದಿ: ವುಹಾನ್‍ನಲ್ಲಿ 1,500 ವಿವಿಧ ವೈರಸ್ ರಕ್ಷಣೆ – ಬಿರುಗಾಳಿ ಎಬ್ಬಿಸಿದ ಚೀನಾ ಡೈಲಿ ಟ್ವೀಟ್
Advertisement
ಈ ಪ್ರದೇಶದ ಅತಿ ದೊಡ್ಡ ಆಸ್ಪತ್ರೆಯಾಗಿರುವ ವುಹಾನ್ ಮೆಡಿಕಲ್ ಆಸ್ಪತ್ರೆಗೆ ದಾಖಲಾಗಿ ಆಕೆ ರೋಗದ ಲಕ್ಷಣ ತಿಳಿಸಿದ್ದಾಳೆ. ಈಕೆ ದಾಖಲಾದ ನಂತರ ಮತ್ತಷ್ಟು ರೋಗಿಗಳು ಆಸ್ಪತ್ರೆಗೆ ಅಡ್ಮಿಟ್ ಆಗಿ ಈಕೆ ಹೇಳಿದ ರೋಗ ಲಕ್ಷಣವನ್ನೇ ತಿಳಿಸಿದ್ದಾರೆ. ಈ ಕಾರಣಕ್ಕಾಗಿ ಈಕೆಯನ್ನು ‘ಝೀರೋ ಪೇಶೆಂಟ್’ ಎಂದು ಕರೆಯಲಾಗುತ್ತದೆ. ಈಕೆಯನ್ನು ಡಿಸೆಂಬರ್, ಜನವರಿವರೆಗೆ ಕ್ವಾರೆಂಟೈನ್ ನಲ್ಲಿ ಇಡಲಾಗಿತ್ತು.
Advertisement
ವುಹಾನ್ ಮುನ್ಸಿಪಲ್ ಹೆಲ್ತ್ ಕಮಿಷನ್ ವೀ ಸಹ ಈ ವಿಚಾರ ದೃಢಪಡಿಸಿದೆ. ವೀ ಮೊದಲ ರೋಗಿಯಾಗಿದ್ದರೆ ವುಹಾನ್ ಮಾರುಕಟ್ಟೆಗೆ ನೇರ ಸಂಬಂಧ ಹೊಂದಿದ್ದ 27 ಮಂದಿಗಳು ಕೊರೊನಾ ಪಾಸಿಟಿವ್ ಆಗಿದ್ದರು ಎಂದು ತಿಳಿಸಿದೆ.
ಮೊದಲ ರೋಗಿ ವೀ ಆರೋಗ್ಯ ಜನವರಿಯಲ್ಲಿ ಸುಧಾರಣೆಯಾಗಿತ್ತು. ವೀ ಮೊದಲ ರೋಗಿಯೇ ಎಂದು ನಿಖರವಾಗಿ ಹೇಳುವುದಿಲ್ಲ. ಆದರೆ ಮೊದಲ ಬಾರಿಗೆ ಆಕೆ ಆಸ್ಪತ್ರೆಗೆ ದಾಖಲಾಗಿ ರೋಗ ಲಕ್ಷಣ ತಿಳಿಸಿದ ಪರಿಣಾಮ ಆಕೆಗೆ ‘ಪೇಶೆಂಟ್ ಝೀರೋ’ ಹೆಸರನ್ನು ನೀಡಲಾಗಿದೆ.
ವುಹಾನ್ ನಗರದಲ್ಲಿರುವ ವೆಟ್ ಮಾರುಕಟ್ಟೆಯಿಂದ(ಜೀವಂತ ಪಕ್ಷಿ, ಪ್ರಾಣಿಗಳನ್ನು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕತ್ತರಿಸಿ ವಿತರಿಸುವ ಸ್ಥಳ) ವೈರಸ್ ಬಂದಿದೆಯೋ ಅಥವಾ ವೈರಲಾಜಿ ಲ್ಯಾಬ್‍ನಿಂದ ವೈರಸ್ ಸೋರಿಕೆಯಾಗಿದೆಯೇ ಎನ್ನುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಲೇ ಇದೆ. ಈಗ ವೆಟ್ ಮಾರ್ಕೆಟ್ ನಲ್ಲಿರುವ ಪ್ರಾಣಿಗಳಿಂದ ವೈರಸ್ ಹರಡಿರಬಹುದು ಎನ್ನುವ ವಾದಕ್ಕೆ ಕೆಲ ಆಧಾರ ಸಿಕ್ಕಿದೆ.