ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹೆಚ್ಚಳ ಆಗ್ತಿರೋ ಹಿನ್ನಲೆ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳಲು ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದರು.
ಕೊರೊನಾ (Corona) ಸಂಬಂಧ ಸೋಮವಾರ ಸಭೆ ನಡೆಸಿದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸೋಮವಾರ ಕೋವಿಡ್ ಸಂಬಂಧ ಸಭೆ ಮಾಡಿದ್ದೇನೆ. ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಟಾಸ್ಕ್ ಫೋರ್ಸ್ ಸಮಿತಿ ಜೊತೆ ಸಭೆ ಮಾಡಿದ್ದೇನೆ. ಕೆಲವು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಹೇಳಿದ್ದೇನೆ. ಎಲ್ಲದಕ್ಕೂ ತಯಾರಿರುವಂತೆ ಸೂಚನೆ ಕೊಟ್ಟಿದ್ದೇನೆ. ವೆಂಟಿಲೇಟರ್, ಆಕ್ಸಿಜನ್, ಪಿಪಿಇ ಕಿಟ್, ಬೆಡ್ ಯಾವುದರ ಕೊರತೆ ಇರಬಾರದು ಎಂದು ಸೂಚನೆ ಕೊಟ್ಟಿದ್ದೇನೆ ಎಂದರು. ಇದನ್ನೂ ಓದಿ: ಉಚ್ಚಾಟನೆಯನ್ನು ನಿರೀಕ್ಷಿಸಿದ್ದೆವು, ಒಳ್ಳೆಯದಾಯ್ತು: ಎಸ್‌ಟಿ ಸೋಮಶೇಖರ್
ವಾರ್ಡ್‌ಗಳನ್ನು ಸಿದ್ಧ ಮಾಡಲು ಸೂಚನೆ ನೀಡಿದ್ದೇನೆ. ಇದು ಅಷ್ಟು ಅಪಾಯಕಾರಿ ತಳಿ ಅಲ್ಲ. ಆದರೂ ಮುನ್ನೆಚ್ಚರಿಕೆಯಿಂದ ಇರಬೇಕು. ಮಕ್ಕಳಿಗೆ ಆರೋಗ್ಯ ಸಮಸ್ಯೆ ಇದ್ದರೆ ಅವರನ್ನ ಶಾಲೆಗೆ ಕಳಿಸೋದು ಬೇಡ ಅಂತ ಹೇಳಿದ್ದೇವೆ. ವಯಸ್ಸಾದವರು, ವಿವಿಧ ಆರೋಗ್ಯ ಸಮಸ್ಯೆ ಇರೋರು ಮಾಸ್ಕ್ ಧರಿಸಬೇಕು ಎಂದು ಸಲಹೆ ಕೊಟ್ಟರು. ಇದನ್ನೂ ಓದಿ: ಸದ್ಯ ಶಾಲೆಗಳಿಗೆ ಯಾವುದೇ ಕೊರೊನಾ ಮಾರ್ಗಸೂಚಿ ಇಲ್ಲ: ಮಧು ಬಂಗಾರಪ್ಪ
ಲಸಿಕೆ ಸಿದ್ಧ ಮಾಡಿಕೊಳ್ಳಿ, ವ್ಯಾಕ್ಸಿನ್ ಖರೀದಿ ಮಾಡಿ ಇಟ್ಕೊಳ್ಳಿ ಅಂತ ಸೂಚನೆ ಕೊಟ್ಟಿದ್ದೇನೆ. ಮಾಸ್ಕ್ ಕಡ್ಡಾಯ ಮಾಡಿ ಅಂತ ಹೇಳಿಲ್ಲ. ವಯಸ್ಸು ಆಗಿರೋದು, ಆರೋಗ್ಯ ಸಮಸ್ಯೆ ಇರೋರು ಮಾಸ್ಕ್ ಹಾಕಬೇಕು. ಏರ್ಪೋರ್ಟ್‌ನಲ್ಲಿ ಟೆಸ್ಟ್ ಮಾಡೋ ಬಗ್ಗೆ ನಿರ್ಧಾರ ಮಾಡಿಲ್ಲ. ಕೇಂದ್ರ ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ಆದರೂ ಎಚ್ಚರಿಕೆಯಿಂದ ಇರಲು ಹೇಳಿದ್ದೇನೆ ಎಂದು ತಿಳಿಸಿದರು.