ಬೆಂಗಳೂರು: ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾ ಹೊಸ ರೂಪಾಂತರಿ ತಳಿ ಒಮಿಕ್ರಾನ್ ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ. ಸದ್ಯ ಸೋಂಕಿತ ದೇಶಗಳಿಂದ ಬರುವವರಿಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಕೊರೊನಾ ಎರಡನೇ ಅಲೆ ಇನ್ನೇನು ಸಂಪೂರ್ಣವಾಗಿ ಮುಗಿದೆ ಹೋಯಿತು ಎನ್ನುವಷ್ಟರಲ್ಲಿ ಕೊರೊನಾ ಹೊಸ ರೂಪಾಂತರಿ ತಳಿ `ಒಮಿಕ್ರಾನ್’ ಎಂಟ್ರಿಯಾಗಿದೆ. ಈಗಾಗಲೇ ಜಗತ್ತಿನ 11 ದೇಶಗಳಲ್ಲಿ `ಒಮಿಕ್ರಾನ್’ ತನ್ನ ಆರ್ಭಟ ಶುರು ಮಾಡಿದೆ. ಈ ಕುರಿತಂತೆ ರಾಜಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುರ್ತು ಸಭೆ ನಡೆಸಿ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಭಾರತಕ್ಕೆ ಎಚ್ಚರಿಕೆಯ ಕರೆಗಂಟೆ: ಡಬ್ಲ್ಯೂಎಚ್‌ಒ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್
ಹೊಸ ಮಾರ್ಗಸೂಚಿಗಳು:
* ಕೇರಳ, ಮಹಾರಾಷ್ಟ್ರ ಗಡಿಜಿಲ್ಲೆಗಳಲ್ಲಿ ಕಟ್ಟೆಚ್ಚರ
* ಕೇರಳ, ಮಹಾರಾಷ್ಟ್ರ ಗಡಿಜಿಲ್ಲೆಗಳಲ್ಲಿ 3 ಶಿಫ್ಟ್‍ಗಳಲ್ಲಿ ಕಟ್ಟೆಚ್ಚರ
* ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ
* 16 ದಿನಗಳ ಹಿಂದೆ ಕೇರಳದಿಂದ ಬಂದ ಸ್ಟೂಡೆಂಟ್ಸ್‍ಗೆ ಮತ್ತೊಮ್ಮೆ ಆರ್‍ಟಿಪಿಸಿಆರ್ ಟೆಸ್ಟ್
* ಕೇರಳ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವವರಿಗೆ ಕಡ್ಡಾಯ ಟೆಸ್ಟ್
* ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಟ್ಟೆಚ್ಚರ
* ಹಾಸ್ಟೆಲ್‍ನಲ್ಲಿ ಇರೋರಿಗೆ ನೆಗಟಿವ್ ರಿಪೋರ್ಟ್ ಬಂದ ನಂತರದ 7ನೇ ದಿನಕ್ಕೆ ಮತ್ತೊಮ್ಮೆ ಟೆಸ್ಟ್
* ಹೋಟೆಲ್, ರೆಸ್ಟೋರೆಂಟ್, ಥಿಯೇಟರ್ ಸಿಬ್ಬಂದಿಗೆ 2 ಡೋಸ್ ಕಡ್ಡಾಯ
* ಈಜುಕೊಳ, ಲೈಬ್ರೆರಿ, ಮೃಗಾಲಯ, ಜೈವಿಕ ಉದ್ಯಾನವನದ ಸಿಬ್ಬಂದಿಗೆ 2ನೇ ಡೋಸ್ ಕಡ್ಡಾಯ
* ಸರ್ಕಾರಿ ಕಚೇರಿ, ಮಾಲ್ ಸಿಬ್ಬಂದಿಗೆ 2 ಡೋಸ್ ಕಡ್ಡಾಯ
* ವೈದ್ಯಕೀಯ, ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಟೆಸ್ಟ್ ಹೆಚ್ಚಳ
* ವಿಮಾನ ನಿಲ್ದಾಣದಲ್ಲಿ ತಪಾಸಣೆ ತೀವ್ರಗೊಳಿಸುವುದು
* ಏರ್‍ಪೋರ್ಟ್‍ನಲ್ಲಿ ನೆಗಟಿವ್ ಇದ್ದವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ
* ಶಾಲಾ ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬ್ರೇಕ್
* ಸೆಮಿನಾರ್‍ಗಳಿಗೆ ಬ್ರೇಕ್
* ಮದುವೆ, ಇತರೆ ಸಭೆ ಸಮಾರಂಭಗಳಲ್ಲಿ ಮಾಸ್ಕ್ ಧರಿಸೋದು ಕಡ್ಡಾಯ
* ಗಡಿಭಾಗ, ಚೆಕ್‌ಪೋಸ್ಟ್‌ಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಬೇಕು
ಮತ್ತೊಂದೆಡೆ ರಾಜ್ಯಕ್ಕೆ ಇತರ ರಾಷ್ಟ್ರಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗುತ್ತಿದ್ದು, ಒಮಿಕ್ರಾನ್ ಅನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ಇದನ್ನೂ ಓದಿ: ಹೊಸ ಕೋವಿಡ್ ತಳಿಯಿಂದ ತಲ್ಲಣ – ಸಂಜೆ ಸಿಎಂ ಬೊಮ್ಮಾಯಿ ತುರ್ತು ಸಭೆ
ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ:
*ದಕ್ಷಿಣ ಆಫ್ರಿಕಾ, ಬೋಟ್ಸ್‍ವಾನಾ, ಹಾಂಕಾಂಗ್ ಪ್ರಯಾಣಿಕರಿಗೆ ಟೆಸ್ಟ್ ಕಡ್ಡಾಯ
*ಕೊರೊನಾ ಟೆಸ್ಟ್, ನೆಗೆಟಿವ್ ವರದಿ ಕಡ್ಡಾಯ
*15 ದಿನಗಳ ಹಿಂದೆ ರಾಜ್ಯಕ್ಕೆ ಬಂದವರಿಗೆ ಮತ್ತೊಮ್ಮೆ ಟೆಸ್ಟ್
*ಕೊರೊನಾ ವರದಿ ಬರೋ ತನಕ ಹೊರಗಡೆ ಬರುವಂತಿಲ್ಲ
*ಪಾಸಿಟಿವ್ ಬಂದಲ್ಲಿ ಆಸ್ಪತ್ರೆಯಲ್ಲಿ 10 ದಿನ ಕ್ವಾರಂಟೈನ್ ಇರಬೇಕು
*ಪಾಸಿಟಿವ್ ವರದಿಯಾದ್ರೆ ಜಿನೋಮಿಕ್ ಸಿಕ್ವೆನ್ಸಿಂಗ್ ಸ್ಯಾಂಪಲ್ ಕೊಡ್ಬೇಕು
ಬೆಂಗಳೂರಿನಲ್ಲಿಯೂ ಕೊರೊನಾ ರೂಪಾಂತರ ತಳಿಯನ್ನು ತಡಗಟ್ಟಲು ಬಿಬಿಎಂಪಿ ಕೂಡ ಬ್ಲ್ಯೂಪ್ರಿಂಟ್ ಸಿದ್ಧಪಡಿಸಿದೆ.
ಬಿಬಿಎಂಪಿ ಬ್ಲ್ಯೂಪ್ರಿಂಟ್:
* ಜನನಿಬಿಡ ಪ್ರದೇಶಗಳಲ್ಲಿ ಮಾರ್ಷಲ್‍ಗಳ ಮರು ನಿಯೋಜನೆ
* ಮಾರುಕಟ್ಟೆ ಪ್ರದೇಶ, ಪಾರ್ಕ್‍ಗಳಲ್ಲಿ ಮಾರ್ಷಲ್‍ಗಳ ನಿಯೋಜನೆ
* ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಮಾಲ್‍ಗಳಲ್ಲಿ ಕಟ್ಟೆಚ್ಚರ
* ಮಾಸ್ಕ್ ಕಡ್ಡಾಯ ರೂಲ್ಸ್
* ಸರ್ಕಾರಿ ನೌಕರರಿಗೆ, ಕಾರ್ಮಿಕರಿಗೆ 2 ಡೋಸ್ ಕಡ್ಡಾಯ
* ಮಾಲ್, ವಾಣಿಜ್ಯ ಮಳಿಗೆಗಳ ಸಿಬ್ಬಂದಿಗೂ 2 ಡೋಸ್ ಕಡ್ಡಾಯ
* ಚಿಕ್ಕಪೇಟೆ, ಜಯನಗರ ಸೇರಿದಂತೆ ಶಾಪಿಂಗ್ ಏರಿಯಾಗಳ ಸಿಬ್ಬಂದಿಗೆ ಡಬಲ್ ಡೋಸ್ ಕಡ್ಡಾಯ ಜಾರಿ ಇದನ್ನೂ ಓದಿ: ಓಮಿಕ್ರಾನ್ ಭಾರೀ ಡೇಂಜರ್ – ಹೊಸ ವೈರಸ್, ಹೊಸ ಲಕ್ಷಣ!
ಒಮಿಕ್ರಾನ್ ಇದುವರೆಗಿನ ರೂಪಾಂತರಿಗಳಿಗಿಂತ ಭಯಂಕರ, ಡೆಲ್ಟಾಗಿಂತಲೂ ಅಪಾಯಕಾರಿ ಎನ್ನಲಾಗಿದೆ. ಸದ್ಯ ಇದರ ವ್ಯಾಪ್ತಿ ಪ್ರಾಥಮಿಕ ಹಂತದಲ್ಲಿಯೇ ಇವೆ. ಆದರೆ ಓಮಿಕ್ರಾನ್ ಗುಣಲಕ್ಷಣಗಳ ಅತ್ಯಂತ ವೇಗವಾಗಿ ಜಗತ್ತನ್ನು ಆವರಿಸುವ ಶಕ್ತಿಯಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಏಳು ದೇಶಗಳಿಗೆ ಈ ಮಾರಕ ವೈರಸ್ ಲಗ್ಗೆ ಇಟ್ಟಿದೆ. ಇದನ್ನೂ ಓದಿ: ವಿಶ್ವಕ್ಕೆ ಆತಂಕ ತಂದಿಟ್ಟ ರೂಪಾಂತರಿ ತಳಿ – ಹೈ ಅಲರ್ಟ್ ಘೋಷಣೆ, 87 ಮಂದಿಗೆ ಸೋಂಕು
ಒಮಿಕ್ರಾನ್ ಸೋಂಕು ಲಕ್ಷಣಗಳು:
* ಶೀತ, ಕೆಮ್ಮು, ನೆಗಡಿ
* ಉಸಿರಾಟದ ಸಮಸ್ಯೆ
* ಮೈ ನಡುಗುವಿಕೆ
* ಸ್ನಾಯು ಸೆಳೆತ
* ತಲೆನೋವು
* ಗಂಟಲು ನೋವು
* ರುಚಿ, ವಾಸನೆ ಕಳೆದುಕೊಳ್ಳುವುದು