– ಕೆಐಎಎಲ್‍ಗೆ ಅನಿರೀಕ್ಷಿತ ಭೇಟಿ ವೇಳೆ ತಪಾಸಣೆ
– ವಿಮಾನ ನಿಲ್ದಾಣದಲ್ಲಿ ಸಚಿವ ಸುಧಾಕರ್‌ಗೆ ಕೊರೊನಾ ತಪಾಸಣೆ
ಬೆಂಗಳೂರು: ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‍ಗೆ ಸಿಬ್ಬಂದಿ ಕೊರೊನಾ ತಪಾಸಣೆ ನಡೆಸಿದ್ದಾರೆ.
ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲು ಸಚಿವರು ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಸಿಬ್ಬಂದಿ ಸಚಿವರಿಗೂ ಉಷ್ಣದ ಮಾಪನ ಹಿಡಿದು ತಪಾಸಣೆ ನಡೆಸಿದರು. ಸುಧಾಕರ್ ಅವರು ಸಹ ತಪಾಸಣೆಗೆ ಸಹಕರಿಸಿ, ನಂತರ ಒಳಗೆ ಹೋದರು.
Advertisement
Visited Kempe Gowda Intl @BLRAirport & reviewed the screening facilities for passengers & preparedness of the health officials. We are fully geared up to screen passengers, identify & isolate anyone with trace of #COVID2019 2019 infection.@PMOIndia @drharshvardhan @BSYBJP pic.twitter.com/4dDsLZ6B8n
— Dr Sudhakar K (@mla_sudhakar) March 17, 2020
Advertisement
ಕೊರೊನಾ ತಪಾಸಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ನಂತರ ಮಾತನಾಡಿ, ವಿಮಾನ ನಿಲ್ದಾಣದ ಒಳಬರುವ ಎಲ್ಲ ಪ್ರಯಾಣಿಕರನ್ನು ತಪಾಸಣೆ ನಡೆಸಲಾಗುತ್ತಿದ್ದು, ಶಂಕಿತರನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಅನುಸರಿಸುತ್ತಿದ್ದು, ಇದಕ್ಕೆ ಸಹಕರಿಸಬೇಕಾದ್ದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಸಚಿವರು ಕರೆ ನೀಡಿದರು.
Advertisement
#COVID19 ವಿರುದ್ಧದ ಈ ಸಮರದಲ್ಲಿ, ಸೋಂಕಿತರ ಸೇವೆಯಲ್ಲಿ ಹಗಲಿರುಳೆನ್ನದೆ ದುಡಿಯುತ್ತಿರುವ ವೈದ್ಯರು, PG ವಿದ್ಯಾರ್ಥಿಗಳು, ಶುಶ್ರೂಷಕಿಯರು, ಅರೆವೈದ್ಯಕೀಯ, ಸಿಬ್ಬಂದಿ – ಈ ಎಲ್ಲ ನಮ್ಮ #HealthWarriors – ಆರೋಗ್ಯ ಸೈನಿಕರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ನಾವು ನಿಶ್ಚಿತವಾಗಿ #Corona ವಿರುದ್ಧದ ಈ ಯುದ್ಧದಲ್ಲಿ ಗೆಲ್ಲಲ್ಲಿದ್ದೇವೆ.
— Dr Sudhakar K (@mla_sudhakar) March 17, 2020
Advertisement
ಇದೇ ವೇಳೆ ವಿಮಾನ ನಿಲ್ದಾಣದ ಹತ್ತಿರದಲ್ಲಿರುವ ಹೋಟೆಲುಗಳನ್ನು ಸೋಂಕಿತರಿಗಾಗಿ ಪ್ರತ್ಯೇಕಿಸುವಂತೆ ಕೇಂದ್ರ ಸರ್ಕಾರ ಸೂಚನೆ ಹೊರಡಿಸಿದ್ದು, ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣದ ಹತ್ತಿರದ ಹೋಟೆಲುಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಖಾಸಗಿ ಸ್ಥಳಗಳಲ್ಲಿ ಸರ್ಕಾರದ ವತಿಯಿಂದಲೇ ಸೋಂಕಿತರನ್ನು ಪ್ರತ್ಯೇಕವಾಗಿರಿಸುವ ಕುರಿತು ಪರಾಮರ್ಶೆ ಮಾಡಲಾಗುತ್ತಿದೆ ಎಂದರು.
ಮತ್ತೊಂದೆಡೆ ವಿಮಾನ ನಿಲ್ದಾಣದಲ್ಲಿ ಅನಿರೀಕ್ಷಿತವಾಗಿ ಎದುರಾದ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿ ಸೌಲಭ್ಯಗಳ ಕುರಿತು ಚರ್ಚೆ ನಡೆಸಿದರು. ನಂತರ ಶಂಕಿತರನ್ನು ಪ್ರತ್ಯೇಕ ನಿಗಾ ಘಟಕದಲ್ಲಿ ಇರಿಸಲಾಗುವ ಆಕಾಶ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.